ಸಿಂಗಪುರ : ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ 14ನೇ ಪಂದ್ಯದಲ್ಲಿ ಭಾರತದ ಚಾಲೆಂಜರ್ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.
ಡಿ ಗುಕೇಶ್ ಅವರು ಗುರುವಾರ ಅವರು ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಪರಾಭವಗೊಳಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ 18 ನೇ ಮತ್ತು ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆದರು. 32 ವರ್ಷ ವಯಸ್ಸಿನ ಹಾಲಿ ಚಾಂಪಿಯನ್ ಲಿರೆನ್ ನಡುವೆ ನಡೆದ 13 ಪಂದ್ಯಗಳು ಡ್ರಾ ಆಗಿದ್ದವು. 14ನೇ ಗೇಮ್‌ನಲ್ಲಿ ಗುಕೇಶ್ ಗೆಲುವು ಸಾಧಿಸಿದರು, 14-ಗೇಮ್‌ನ ಕೊನೆಯ ಕ್ಲಾಸಿಕಲ್ ಟೈಮ್ ಕಂಟ್ರೋಲ್ ಗೇಮ್ ಅನ್ನು ಗೆದ್ದ ನಂತರ ಲಿರೆನ್‌ನ 6.5 ಕ್ಕೆ ವಿರುದ್ಧವಾಗಿ ಅಗತ್ಯವಿರುವ 7.5 ಪಾಯಿಂಟ್‌ಗಳನ್ನು ಗುಕೇಶ್ ಗಳಿಸಿ ವಿಶ್ವ ಚಾಂಪಿಯನ್ ಆದರು.