ಸಿರುಗುಪ್ಪ ತಾಲ್ಲೂಕು ವ್ಯಾಪ್ತಿಯ ಅಧೀಕೃತ ಐಪಿ ಸೆಟ್ ಹೊಂದಿರುವ ರೈತರು ತಮ್ಮ ಐಪಿ ಸೆಟ್ಗಳ ಆರ್ಆರ್ ನಂಬರ್ಗೆ ಆಧಾರ್ಸಂಖ್ಯೆ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿವಾಹಕ ಅಭಿಯಂತರರು ತಿಳಿಸಿದ್ದಾರೆ.
ಹೆಸ್ಕಾಂ ಗಳು ಐಪಿ ಸೆಟ್ಗಳ ಆರ್ಆರ್ ನಂಬರ್ಗಳನ್ನು ಗ್ರಾಹಕರ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಬೇಕು. ಆಧಾರ್ಸಂಖ್ಯೆಗೆ ಲಿಂಕ್ ಮಾಡದ ಆರ್ಆರ್ ನಂಬರ್ಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸಬ್ಸಿಡಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೆಇಆರ್ಸಿ ಯು ಆದೇಶ ಹೊರಡಿಸಿದೆ.
ಹಾಗಾಗಿ ರೈತರು ಲಿಂಕ್ ಮಾಡಿಸಲು ಹತ್ತಿರದ ಲೈನ್ಮ್ಯಾನ್, ಮೀಟರ್ ರೀಡರ್, ಎಲ್ಲಾ ಶಾಖೆ ಕಚೇರಿಗಳು ಮತ್ತು ಸಿರುಗುಪ್ಪ ಜೆಸ್ಕಾಂ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.