Ad image

ಕಮಲಹಾಸನ್ ಗೆ ಭಾಷಾ ಅಲ್ಪಜ್ಞಾನವಿದೆ : ಪರಮಪೂಜ್ಯ ಡಾಕ್ಟರ್ ಮಹೇಶ್ವರ ಸ್ವಾಮಿ 

Vijayanagara Vani
ಕಮಲಹಾಸನ್ ಗೆ ಭಾಷಾ ಅಲ್ಪಜ್ಞಾನವಿದೆ : ಪರಮಪೂಜ್ಯ ಡಾಕ್ಟರ್ ಮಹೇಶ್ವರ ಸ್ವಾಮಿ 
ಬಳ್ಳಾರಿ ಜೂನ್ 1 : ಚಲನಚಿತ್ರ ಕಾರ್ಯಕ್ರಮ ಒಂದರಲ್ಲಿ ಕಮಲಹಾಸನ್ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವನ ಬಾಷಾ ಅಲ್ಪಜ್ಞಾನವನ್ನು ತೋರಿಸುತ್ತದೆ ಎಂದು ಡಾಕ್ಟರ್ ಮಹೇಶ್ವರ ಸ್ವಾಮಿ ತಿಳಿಸಿದರು.
ಅವರು ಇಂದು ನಗರದ ರಾಯಲ್ ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ಭಾಷೆಗೆ ಸುಮಾರು ಎರಡರಿಂದ ಮೂರು ಸಾವಿರ ವರ್ಷಗಳ ಇತಿಹಾಸವಿದೆ, ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಮೂಲ ದ್ರಾವಿಡ ಮತ್ತು ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿವೆ ಹಾಗಿದ್ದಾಗ ನನ್ನ ಭಾಷೆ ಹೆಚ್ಚು ನಿನ್ನ ಭಾಷೆ ಹೆಚ್ಚು ಎಂಬುದು ಮೂರ್ಖತನವಾದೀತು ಎಂದು ಕಮಲಾಸನವರ ಹೇಳಿಕೆಯನ್ನು ಖಂಡಿಸಿದರು. 
 ಜಿಲ್ಲಾಧ್ಯಕ್ಷ ರಾಜಶೇಖರ್ ಮಾತನಾಡಿ, ಕಮಲ್ ಹಾಸನ್ ತಾನಾಡಿದ ಮಾತಿಗೆ ಕ್ಷಮೆಯನ್ನು ಕೇಳದೆ ಹೋದಲ್ಲಿ ಅವರ ಯಾವುದೇ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
 ಪ್ರತಿಭಟನಾ ಸಂದರ್ಭದಲ್ಲಿ ಕಮಲಹಾಸನ್ ರವರ ಭಾವಚಿತ್ರವನ್ನು ಸುಟ್ಟು ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಕಟ್ಟಿಗೆ ಸೂರಿ, ಸುಂಕಣ್ಣ ಸೇರಿದಂತೆ ಹಲವಾರು ಜನ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇದ್ದರು.

Share This Article
error: Content is protected !!
";