ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದ ಐವರು ಆಟಗಾರರಿಗೆ ನಿರಾಸೆ ಕಾದಿದೆ.
ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡ ಸ್ಟಾರ್ ಆಟಗಾರರು ಹಾಗೂ ಯುವ ಆಟಗಾರರಿಂದ ಕೂಡಿದೆ. ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ಸಭೆಯ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಸಾಮಾಜಿಕ ತಾಣದ ಮೂಲಕ ಪ್ರಕಟಿಸಿದೆ. ಈ ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡ ಆಟಗಾರರ ಪಟ್ಟಿಯಲ್ಲಿದೆ.
ಕೆಎಲ್ ರಾಹುಲ್-ಕನ್ನಡಿಗ ಕೆಎಲ್ ರಾಹುಲ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದರು. ಆದರೆ ಇವರ ಆಸೆಗೆ ಪೆಟ್ಟು ಬಿದ್ದಿದೆ. ಇವರು ಟಿ20 ಮಾದರಿಯಲ್ಲಿ ಕೊನೆಯ ಬಾರಿಗೆ 2022ರ ವಿಶ್ವಕಪ್ನಲ್ಲಿ ಭಾರತದ ಪರ ಆಡಿದ್ದೆ ಕೊನೆಯದ್ದಾಗಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರಾಹುಲ್ ಎಡವಿದ್ದಾರೆ. ಎಲ್ಎಸ್ಜಿ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್ ಆಡಿರು 9 ಪಂದ್ಯಗಳಲ್ಲಿ 378 ರನ್ ಸಿಡಿಸಿದ್ದಾರೆ. ಈ ವೇಳೆ ಮೂರು ಅರ್ಧಶತಗಳ ಸಹ ಸಿಡಿಸಿದ್ದಾರೆ.
ಶುಭ್ಮನ್ ಗಿಲ್-ಕಳೆದ ಆವೃತ್ತಿಯಲ್ಲಿ ರನ್ ಮಹಲ್ ಕಟ್ಟಿದ್ದ ಗುಜರಾತ್ ಟೈಟನ್ಸ್ ತಂಡದ ಶುಭ್ಮನ್ ಗಿಲ್ ಸಹ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಇವರಿಗೆ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ಪ್ರಸಕ್ತ ಐಪಿಎಲ್ನಲ್ಲಿ ಗಿಲ್ ಆಡಿದ 10 ಪಂದ್ಯಗಳಲ್ಲಿ 320 ರನ್ ಸಿಡಿಸಿದ್ದಾರೆ.
ರಿಂಕು ಸಿಂಗ್-ಫಿನಿಶರ್ ಪಾತ್ರಕ್ಕೆ ಹೇಳಿ ಮಾಡಿಸಿದ ಆಟಗಾರ ಎಂದೇ ಕರೆಸಿಕೊಂಡಿದ್ದ ರಿಂಕು ಸಿಂಗ್, ಪ್ರಸಕ್ತ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರನ್ನು ಭವಿಷ್ಯದ ಟೀಮ್ ಇಂಡಿಯಾದ ಆಟಗಾರ ಎಂದು ಪರಿಗಣಿಸಲಾಗುತ್ತಿದೆ. ಆದರೆ ಈ ಆಟಗಾರನ ಪ್ರದರ್ಶನ ಈ ಬಾರಿಯ ಐಪಿಎಲ್ನಲ್ಲಿ ಸ್ಥಿರವಾಗಿ ಇರದೇ ಇರುವುದೇ ಅವರನ್ನು ಕೈ ಬಿಡಲು ಪ್ರಮುಖ ಕಾರಣದಂತೆ ಕಾಣುತ್ತಿದೆ.
ರವಿ ಬಿಷ್ಣೋಯಿ–ಎಲ್ಎಸ್ಜಿ ತಂಡದ ಸ್ಟಾರ್ ಸ್ಪಿನ್ ಬೌಲರ್ ರವಿ ಬಿಷ್ಣೋಯಿ ಅವರು ಸಹ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದರು. ಆದರೆ ಅನುಭವಿ ಯುಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದರಿಂದ ಇವರಿಗೆ ಅವಕಾಶ ಕೈ ತಪ್ಪಿತು. ಪ್ರಸಕ್ತ ಐಪಿಎಲ್ನಲ್ಲಿ ಕುಲ್ಚಾ ಸೊಗಸಾದ ದಾಳಿ ನಡೆಸುತ್ತಿದೆ.
ಇಶಾನ್ ಕಿಶನ್-ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಇಶಾನ್ ಕಿಶನ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದರು. ಆದರೆ ಅವರು ಕಳೆದ ಸರಣಿಯಲ್ಲಿ ತೋರಿದ ವರ್ತನೆ ಇವರಿಗೆ ಮುಳುವಾದಂತೆ ಕಾಣುತ್ತಿದೆ. ಅಲ್ಲದೆ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಅದ್ಭುತ್ ಫಾರ್ಮ್ನಲ್ಲಿದ್ದು, ಇಶಾನ್ ಕಿಶನ್ ಅವರನ್ನು ಕೈ ಬಿಡಲು ಕಾರಣವಾಯಿತು.