ಬೆಳೆ ವಿಮೆ ನೋಂದಣಿ ಜಾಥಕ್ಕೆ ಚಾಲನೆ

Vijayanagara Vani
ಬೆಳೆ ವಿಮೆ ನೋಂದಣಿ ಜಾಥಕ್ಕೆ ಚಾಲನೆ
 ಕೂಡ್ಲಿಗಿ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ತಾಲೂಕಿನ ರೈತರು ಬೆಳೆ ವಿಮೆ ಮಾಡಿಸುವಂತೆ ಜಿಲ್ಲಾ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದರು.
 ತಾಲೂಕಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಾದ ಎನ್ ಟಿ ಶ್ರೀನಿವಾಸ್ ಬೆಳವಿಮೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.
 ರೈತರು ಅತಿವೃಷ್ಟಿ ಅನಾವೃಷ್ಟಿ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಬಿತ್ತನೆ ವಿಫಲಗೊಂಡರೆ ನಿರೀಕ್ಷಿತ ಇಳುವರಿ ಬಾರದೆ ಇದ್ದಾಗ ವಿಮಾಸಂಸ್ಥೆಯು ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಿ ಪರಿಹಾರ ನೀಡುತ್ತದೆ. ಆದ್ದರಿಂದ ರೈತರು ಈ ಅವಕಾಶವನ್ನು ಸದು ಪಯೋಗಪಡಿಸಿಕೊಳ್ಳಲು ಬೇಕೆಂದು ಕರೆ ನೀಡಿದರು.
 ಬೆಳೆ ವಿಮೆ ನೋಂದಣಿ ಮಾಡಿಸಲು ಮೆಕ್ಕೆಜೋಳ, ಜೋಳ ಸೂರ್ಯಕಾಂತಿ, ತೊಗರಿ,ಹತ್ತಿ ಈರುಳ್ಳಿ ಬೆಳಗಳಿಗೆ ಜುಲೈ 31 ರಂದು ಕೊನೆ ದಿನಾಂಕವಾಗಿರುತ್ತದೆ.
 ಹತ್ತಿರದ ಯಾವುದೇ ಸಾರ್ವಜನಿಕ ಸೇವಾ ಕೇಂದ್ರ ಅಥವಾ ಗ್ರಾಮವನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ  ಎ ಡಿ ಎ ಸುನಿಲ್ ಕುಮಾರ್ ತಾಪಂ ಇಒ ವೈ ರವಿಕುಮಾರ್ ಹಾಜರಿದ್ದರು.  
WhatsApp Group Join Now
Telegram Group Join Now
Share This Article
error: Content is protected !!