Ad image

ಮುಗಿಲ ಮಲ್ಲಿಗೆ” ಚಿತ್ರೀಕರಣ ಮುಕ್ತಾಯ

Vijayanagara Vani
ಮುಗಿಲ ಮಲ್ಲಿಗೆ” ಚಿತ್ರೀಕರಣ ಮುಕ್ತಾಯ

ಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್
ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ
ಚಲನಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ.


ಕಪಿಲ್ ಎಂ ಶ್ರೀನಿವಾಸ್ ರವರ ನೃತ್ಯ ಸಂಯೋಜನೆಯಲ್ಲಿ ‘ಲವ್ಹ್ ಅನ್ನೋದ್ ಇಲ್ದಿದ್ರೆ
ಲೈಫ್ ತುಂಬಾ ಸಿಂಪಲ್ಲು’ಎಂಬ ಹಾಡಿನ ಚಿತ್ರೀಕರಣದ ಮುಕ್ತಾಯದೊಂದಿಗೆ
ಕುಂಬಳಕಾಯಿ ಒಡೆಯಲಾಯಿತು. ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ
ಸನತ್, ಮತ್ತು ಸಹನ ಚಂದ್ರಶೇಖರ್ ನಾಯಕ-ನಾಯಕಿಯಾಗಿ ನಟಿಸಿರುವ
‘ಮುಗಿಲ ಮಲ್ಲಿಗೆ’ಸಿನಿಮಾದಲ್ಲಿ, ಥ್ರಿಲ್ಲರ್ ಮಂಜು, ಹಿರಿಯ ನಟಿ ಭವ್ಯ, ಬಾಹುಬಲಿ
ಖ್ಯಾತಿಯ ಕಾಲಕೇಯ ಪ್ರಭಾಕರ್. ಕಿಲ್ಲರ್ ವೆಂಕಟೇಶ್. ಶಂಖನಾದ ಆಂಜಿನಪ್ಪ,
ಅನ್ನಪೂರ್ಣ, ಕಾವ್ಯ ಪ್ರಕಾಶ್, ಧೀನ, ಶಂಕರ್, ರಾಜೇಶ್, ರವಿ, ಕಿರಣ್
ಗಟ್ಟಿಗನಬ್ಬೆ, ಮೋನಿಕಾ ಕಿರಣ್ ಕುಮಾರ್,ಎಂ ವಿ ಸಮಯ್.ಸಿದ್ದಯ್ಯ ಎಸ್
ಹಿರೇಮಠ.ಬೃಂದ, ಕಿಶೋರ್ ಕುಂಬ್ಳೆ. ಶಿವು ಕಾಸರಗೋಡು, ಸತ್ಯವಾರ
ನಾಗೇಶ್. ಸಿ.ಟಿ.ಜಯರಾಮ,ವಸಂತ ನಾಯಕ್ ಮೊದಲಾದವರು ನಟಿಸಿದ್ದಾರೆ.
ಬಹುಭಾಷಾ ಯುವ ಪ್ರತಿಭಾವಂತ ಚಿತ್ರ ನಿರ್ದೇಶಕ ರಾಜೀವ್ ಕೃಷ್ಣ ಗಾಂಧಿ
ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಒಂದು ದ್ವೇಷ ಮತ್ತು ಪ್ರೀತಿಯ ಸುತ್ತ ನಡೆಯುವ ಪ್ರೇಮಕಥೆಯ
ಕಥಾ ವಸ್ತು ಹೊಂದಿರುವ ಚಿತ್ರವನ್ನು ಹೊಸಕೋಟೆ ಸುತ್ತ ಮುತ್ತಲಿನ
ಕಂಬಳಿಪುರ, ಕಾಟೇರಮ್ಮ, ಭಕ್ತರಹಳ್ಳಿ. ಗಟ್ಟಿಗನಬ್ಬೆ, ಕೊಳತೂರು
ಎಂ, ಸತ್ಯವಾರ ಮೊದಲಾದ ಕಡೆ ಚಿತ್ರೀಕರಿಸಲಾಗಿದೆ. ಛಾಯಾಗ್ರಾಹಣ ಅಭಿನಂದನ್
ಶೆಟ್ಟಿ ,ಥ್ರಿಲ್ಲರ್ ಮಂಜು ಸಾಹಸ, ಅನಿರುದ್ದ ಶಾಸ್ತ್ರಿ ಸಂಗೀತ, ಮೋಹನ್ ಕುಮಾರ್
ಪ್ರಸಾಧನ, ಇಂದ್ರ ಕುಮಾರ್ ಸ್ಥಿರ ಚಿತ್ರಣ, ಪ್ರವೀಣ್ ಭದ್ರಾವತಿ , ವಿ.ಮುರುಗನ್ ಸಹ ನಿರ್ದೇಶನ,ವಿನಯ್ ಜಿ ಆಲೂರು ರವರ ಸಂಕಲನ ,ಎಂ ಜಿ
ಕಲ್ಲೇಶ್, ಡಾ.ಪ್ರಭು ಗಂಜಿಹಾಳ , ಡಾ. ವೀರೇಶ್ ಹಂಡಿಗಿ ಪಿ.ಆರ್.ಓ ಆಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ.
ಸಧ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದ್ದು ಏಪ್ರಿಲ್ ತಿಂಗಳಲ್ಲಿ
ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ ಎಂದು
ಎ.ನಾಗರಾಜ ರೆಡ್ಡಿ ಮತ್ತು ನಿರ್ದೇಶಕ ರಾಜೀವಕೃಷ್ಣ ಗಾಂಧಿ ಹೇಳಿದ್ದಾರೆ.

-ಡಾ.ಪ್ರಭು ಗಂಜಿಹಾಳ.
ಮೋ-9448775346

Share This Article
error: Content is protected !!
";