ಸಾವಿನಲ್ಲಿಯೂ ಮಾನವೀಯತೆ ಮೆರೆದ ನಗರದ ಮುಳ್ಳೂರು ಪಂಪಮ್ಮ

Vijayanagara Vani
ಸಾವಿನಲ್ಲಿಯೂ ಮಾನವೀಯತೆ ಮೆರೆದ ನಗರದ ಮುಳ್ಳೂರು ಪಂಪಮ್ಮ

ಸಿರುಗುಪ್ಪ. ಮೇ-25. ತಾಲೂಕಿನ ಆರ್ಯವೈಶ್ಯ ಕುಟುಂಬಗಳಲ್ಲಿ ಪ್ರತಿಷ್ಠಿತ ಕುಟುಂಬವಾದ ಮುಳ್ಳೂರು ಕುಟುಂಬಸ್ಥರ 90 ವರ್ಷದ ಪಂಪಮ್ಮ, ಅವರಿಗೆ ಶುಕ್ರವಾರ ರಾತ್ರಿ‌11ರ‌ ಸುಮಾರಿಗೆ ತೀವ್ರ ಎದೆ ನೋವು ಕಾಣಿಸಿದೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ  5 ಗಂಟೆ ಸಮಯದಲ್ಲಿ ಮೃತಪಟ್ಟಿದ್ದು ಯುವ ಬ್ರಿಗೇಡಿನ ನೇತೃದಾನದ ಬಗ್ಗೆ ತಿಳಿದುಕೊಂಡು ದೂರವಾಣಿ ಮುಖಾಂತರ ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದುಕೊಂಡು ಬಳ್ಳಾರಿಯ ಆಸ್ಪತ್ರೆಯಲ್ಲಿ ನೇತ್ರದಾನ ಮಾಡಿ ಇಬ್ಬರು ಅಂದರೆ ದೃಷ್ಟಿಗೆ ಕಾರಣರಾಗಿದ್ದಾರೆ ನಂತರ ಮೃತ ಶರೀರವನ್ನು ಸಿರುಗುಪ್ಪ ನಗರಕ್ಕೆ  ಸ್ವಂತ ಮನೆಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದು  ಶನಿವಾರ ಸಂಜೆ 4:30ರ ಸುಮಾರಿಗೆ ಅಂತ್ಯಕ್ರಿಯೆಗಳನ್ನು ನೆರವೇರಿಸುವುದಾಗಿ ಕುಟುಂಬಸ್ಥರು ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ತಿಳಿಸಿದ್ದಾರೆ

ಮುಳ್ಳೂರು ಪಂಪಮ್ಮ ಇವರು ಮುಳ್ಳೂರು ಶೇಷಯ್ಯ ಶೆಟ್ಟಿ ಇವರ ತಾಯಿಯಾಗಿದ್ದು ಇವರು ಒಬ್ಬ ಮಗ ಮತ್ತು ನಾಲ್ಕು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇದು ಯುವ ಬ್ರಿಗೇಡಿನ ವಿವೇಕ ದೃಷ್ಟಿ ನವ ಭಾರತ ಸೃಷ್ಟಿಯ 67ನೇ ನೇತ್ರದಾನ ಕಾರ್ಯವಾಗಿದ್ದು ಮಾನವೀಯತೆಗೆ ಇನ್ನೊಂದು ಕುಟುಂಬ ಸಾಕ್ಷಿಯಾಗಿದೆ

WhatsApp Group Join Now
Telegram Group Join Now
Share This Article
error: Content is protected !!