Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎತ್ತಿನಬೂದಿಹಾಳು ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವ

ಬಳ್ಳಾರಿ,ಆ20
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಅಧೀನದ ಬಳ್ಳಾರಿ ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಎತ್ತಿನಬೂದಿಹಾಳಿನ ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಹಾಗೂ ಧಾರ್ಮಿಕ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 7 ರಿಂದ 9 ರವರೆಗೆ ವಿಜೃಂಭಣೆಯಿAದ ಜರುಗಲಿದೆ.
ಸೆಪ್ಟೆಂಬರ್ 7 ರಂದು ಮುಂಜಾನೆ 5 ರಿಂದ 7 ಗಂಟೆಯವರೆಗೆ ಸ್ವಾಮಿಗೆ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಲಿದೆ. ಸಂಜೆ 6 ಗಂಟೆಗೆ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಂಗೆ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ತರಲಾಗುವುದು.
ಸೆಪ್ಟೆಂಬರ್ 8 ರಂದು ರಾತ್ರಿ ಭಜನೆ, ಪುರವಂತಿಕೆ ಹಾಗೂ ಶ್ರೀ ಸ್ವಾಮಿಯ ಭವ್ಯ ಪಲ್ಲಕ್ಕಿ ಉತ್ಸವ ಜರುಗಲಿದೆ.
ಸೆಪ್ಟೆಂಬರ್ 9 ರಂದು ಮುಂಜಾನೆ 6 ಗಂಟೆಗೆ ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿಯ ಉಚ್ಚಾಯ ನೆರವೇರಲಿದೆ. ಸಂಜೆ 4 ಗಂಟೆಗೆ ರಥೋತ್ಸವದ ಪ್ರತಿಷ್ಠಿತ ‘ಮುಕ್ತಿ ಬಾವುಟ’ದ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.
ಸಂಜೆ 5.06 ಕ್ಕೆ ಮಹಾ ರಥೋತ್ಸವ ವಿಜೃಂಭಣೆಯಿAದ ಜರುಗಲಿದ್ದು, ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಗಾರು ಬೆಳೆ ವಿಮೆ: ಸಾಲ ಪಡೆದ ರೈತರ ನೋಂದಣಿ ದಿನಾಂಕ ಆ. 31ರವರೆಗೆ ವಿಸ್ತರಣೆಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ: ಅರ್ಜಿ ಆಹ್ವಾನ ----ಚಳ್ಳಾರಿ ಗ್ರಾಮದ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ -- ಕೂಲಿ ಕೆಲಸದೊಂದಿಗೆ ವಿಮೆ ನೋಂದಣಿ ಮಾಡಿಕೊಳ್ಳಿ: ಸೌಮ್ಯಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಸಾಮಾಜಿಕ ನ್ಯಾಯದ ಆಶಯ ಮೈಗೂಡಿಸಿಕೊಳ್ಳಿ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಕರೆಬಳ್ಳಾರಿ: ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆಸ್ಯಾಮ್‌ಸಂಗ್ ಭಾರತದ ಟಾಪ್ 40 ಯುವ ಆವಿಷ್ಕಾರಕರನ್ನು ಘೋಷಿಸಿದೆಸ್ಯಾಮ್‌ಸಂಗ್ ಭಾರತದ ಟಾಪ್ 40 ಯುವ ಆವಿಷ್ಕಾರಕರನ್ನು ಘೋಷಿಸಿದೆಬಳ್ಳಾರಿಯಲ್ಲಿ ಬಾಲಕಾರ್ಮಿಕ ವಿರೋಧಿ ಕಾರ್ಯಾಚರಣೆ: ಇಬ್ಬರು ಮಕ್ಕಳ ರಕ್ಷಣೆಎತ್ತಿನಬೂದಿಹಾಳು ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವ