Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: ಶೇ. 99.78 ರಷ್ಟು ಎಸ್‌ಐಆರ್ ಗಣತಿ ನಮೂನೆಗಳ ವಿತರಣೆ

ಬಳ್ಳಾರಿ,ಜು.16
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಗಣತಿ ನಮೂನೆಗಳನ್ನು ಮುದ್ರಿಸಿ ಮನೆ-ಮನೆ ಭೇಟಿ ನೀಡಿ ವಿತರಿಸುವ ಹಾಗೂ ಗಣಕೀಕರಣಗೊಳಿಸುವ ಕಾರ್ಯವು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುರುಕಿನಿಂದ ಸಾಗುತ್ತಿದೆ.
ಈ ಕ್ಷೇತ್ರದಲ್ಲಿ ಒಟ್ಟು 2,51,325 ಮತದಾರರಿದ್ದು, ಮುದ್ರಿಸಲಾದ ಒಟ್ಟು ಎಸ್‌ಐಆರ್ ಗಣತಿ ನಮೂನೆಗಳ ಪೈಕಿ 2,50,761 (ಶೇ. 99.78 ರಷ್ಟು) ಗಣತಿ ನಮೂನೆಗಳನ್ನು ಈಗಾಗಲೇ ಯಶಸ್ವಿಯಾಗಿ ವಿತರಿಸಲಾಗಿದೆ. ಕ್ಷೇತ್ರದ ಒಟ್ಟು ಶೇ. 97.21 ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ.
ವಿತರಿಸಲಾದ ನಮೂನೆಗಳ ಪೈಕಿ 1,00,294 (ಶೇ. 39.91 ರಷ್ಟು) ನಮೂನೆಗಳ ಗಣಕೀಕರಣ ಕಾರ್ಯ ಮುಕ್ತಾಯಗೊಂಡಿದೆ. ಇದರಲ್ಲಿ ಆನ್‌ಲೈನ್ ಮೂಲಕ ಮತದಾರರಿಂದ ಸ್ವೀಕೃತವಾದ 432 ನಮೂನೆಗಳೂ ಸೇರಿವೆ.
ಕ್ಷೇತ್ರದಾದ್ಯಂತ ವಿವಿಧ ಕಾರಣಗಳಿಂದಾಗಿ ಒಟ್ಟು 4,673 ಗಣತಿ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಅದರಲ್ಲಿ 2,329 ಮಂದಿ ಮರಣ ಹೊಂದಿದ ಮತದಾರರು, 1,850 ಮಂದಿ ಶಾಶ್ವತ ವಲಸೆ ಹೋದವರು, 463 ಮಂದಿ ಈಗಾಗಲೇ ಹೆಸರು ನೋಂದಾಯಿತರಾದವರು, 23 ಮಂದಿ ಪತ್ತೆಯಾಗದ/ ಗೈರು ಹಾಜರಾದವರು ಮತ್ತು 08 ಮಂದಿ ಇತರರು ಒಳಗೊಂಡಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮನೆ-ಮನೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುವ ಕಾರ್ಯ ಮತ್ತು ಪರಿಶೀಲಿಸುವ ಪ್ರಕ್ರಿಯೆ ಜುಲೈ 29 ರ ವರೆಗೆ ನಡೆಯಲಿದೆ. ಹಾಗಾಗಿ ಅರ್ಹ ಮತದಾರರು ತಮ್ಮ ಮಾಹಿತಿಯನ್ನು ಸಂಬAಧಿಸಿದ ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿ ಸಹಕರಿಸಬೇಕು ಎಂದು 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತರಾದ ರಾಜೇಶ್ ಹೆಚ್.ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ 17 ರಿಂದ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷೆ: ನಿಷೇದಾಜ್ಞೆ ಜಾರಿಇಲೆಕ್ಟ್ರೀಕ ವೇಹಿಕಲ್ ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: ಶೇ. 99.78 ರಷ್ಟು ಎಸ್‌ಐಆರ್ ಗಣತಿ ನಮೂನೆಗಳ ವಿತರಣೆಬಳ್ಳಾರಿಯಲ್ಲಿ ಜು.18 ರಂದು ಮಿನಿ ಉದ್ಯೋಗ ಮೇಳ: ಉಚಿತ ಪ್ರವೇಶರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಬಿಡದಿ ಟೌನ್ ಶಿಪ್ ಯೋಜನೆಗೆ ರೈತರ ಸಮ್ಮತಿ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಯೋಜನೆಯ ಸಾಧಕ-ಬಾಧಕಗಳ ಪರಿಶೀಲನೆಗೆ ಸಮಿತಿ ರಚನೆ ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಸ್ವತಂತ್ರರು; ಭೂಮಿಯ ಯಥಾಸ್ಥಿತಿ ಬದಲಾಗಲ್ಲ ಇದು ನನ್ನ ಕನಸಿನ ಯೋಜನೆಯಲ್ಲ, ಹಿಂದಿನ ಸರ್ಕಾರಗಳ ಯೋಜನೆ: ಡಿ.ಕೆ. ಶಿವಕುಮಾರ್ಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಕೊಪ್ಪಳ ರೈಲು ನಿಲ್ದಾಣ: ಜು. 17ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿಗಳಿಂದ ಉದ್ಘಾಟನೆಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್* *ಆಗಸ್ಟ್ 6 ರವರೆಗೆ ಸಲಹೆ ಸೂಚನೆಗಳನ್ನು ‌ನೀಡಲು ಅವಕಾಶ* *ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರು* *ಎಸ್ ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ* *ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು* *ಬೆಂಗಳೂರು ಭಾರತದ ಹೃದಯ*ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಡಾ.ಯಲ್ಲಾ ರಮೇಶ್‌ಬಾಬು ಕರೆ ಜನಸಂಖ್ಯೆ ಸ್ಥಿರತೆಗೆ ಸಮುದಾಯದ ಪಾತ್ರ ಮುಖ್ಯ