ಬಳ್ಳಾರಿ,ಅ.15
ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಒಟ್ಟು 2,179.45 ಕ್ವಿಂಟಾಲ್ ಅಕ್ಕಿಯನ್ನು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲಾಗುವುದು. ಎರಡು ಪ್ರತ್ಯೇಕ ಅವಧಿಗಳಲ್ಲಿ ವಶಪಡಿಸಿಕೊಳ್ಳಲಾದ ಅಕ್ಕಿ ದಾಸ್ತಾನನ್ನು ಪ್ರತ್ಯೇಕವಾಗಿ ಹರಾಜು ಹಾಕಲಾಗುತ್ತದೆ.
2021-25ನೇ ಸಾಲಿನ 19 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 545.25 ಕ್ವಿಂಟಾಲ್ ಅಕ್ಕಿ. 2025-26ನೇ ಸಾಲಿನ 31 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 1,634.20 ಕ್ವಿಂಟಾಲ್ ಅಕ್ಕಿ.
ಈ ಬಹಿರಂಗ ಹರಾಜು ಪ್ರಕ್ರಿಯೆಯು ಅಕ್ಟೋಬರ್ 22 ರಂದು ಬೆಳಗ್ಗೆ 11:30 ಗಂಟೆಗೆ ಬಳ್ಳಾರಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎ.ಪಿ.ಎಂ.ಸಿ ಸಗಟು ಗೋದಾಮಿನಲ್ಲಿ ನಡೆಯಲಿದೆ.
ಆಸಕ್ತಿಯುಳ್ಳ ಬಿಡ್ದಾರರು ನಿಗದಿತ ಷರತ್ತುಗಳೊಂದಿಗೆ ಈ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಬಳ್ಳಾರಿ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.