ಬಳ್ಳಾರಿ,ಅ.6
ನಗರದ 33ನೇ ವಾರ್ಡ್ನ ನಾಗರಕಟ್ಟೆ ಅಲ್ಲೀಪುರ ಪ್ರದೇಶದ ನೀರಿನ ಹೊಂಡದ ಬಳಿ ಯಾರೋ ಅಪರಿಚಿತರು ಎಸೆದು ಹೋಗಿದ್ದ ಸುಮಾರು ಒಂದು ತಿಂಗಳ ಗಂಡು ಮಗುವನ್ನು ರಕ್ಷಿಸಲ್ಪಟ್ಟಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ‘ಸರ್ಕಾರಿ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆ’ಗೆ ದಾಖಲಿಸಲಾಗಿದೆ. ಮಗುವಿನ ಪೋಷಕರ ಪತ್ತೆಗಾಗಿ ಸಹಕರಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.
*ಮಗುವಿನ ಗುರುತಿನ ವಿವರ:*
ಸುಮಾರು 1 ತಿಂಗಳು, ತೂಕ 1.800 ಕೆ.ಜಿ., ಎತ್ತರ 44 ಸೆಂ.ಮೀ., ಸಾಧಾರಣ ಮೈಕಟ್ಟು, ಉದ್ದ ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾನೆ.
ಮಗು ಅಥವಾ ಮಗುವಿನ ಪೋಷಕರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಲ್ಲಿ ಅಧೀಕ್ಷಕರು, ಸರ್ಕಾರಿ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆ, ಬಳ್ಳಾರಿ, ಇಲ್ಲವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿಧಾಮ ಆವರಣ, ಕಂಟೋನ್ಮೆAಟ್, ಬಳ್ಳಾರಿ ಅಥವಾ ದೂ: 08392-242065, ಮೊ: 9986315615 (ಅಧೀಕ್ಷಕರು), 9742019519 (ಸಮಾಲೋಚಕರು) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.