ಸಿರುಗುಪ್ಪ: ವಿಶ್ವ ಮಧುಮೇಹ ದಿನದ ಅಂಗವಾಗಿ ನವೆಂಬರ್ 16ರಂದು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸಾಂಕ್ರಾಮಿಕ ರೋಗಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ವೈದ್ಯೆ ಡಾ. ಶ್ರೇಯ ಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 100 ಜನರಿಗೆ ರಕ್ತದೊತ್ತಡ (ಬಿಪಿ) ಮತ್ತು ರಕ್ತದಲ್ಲಿನ ಸಕ್ಕರೆ (ಶುಗರ್) ಪರೀಕ್ಷೆ ನಡೆಸಲಾಯಿತು. ಅಲ್ಲದೆ, ಕ್ಯಾನ್ಸರ್, ಪಾರ್ಶ್ವವಾಯು ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳು, ಅವುಗಳ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆಸ್ಪತ್ರೆಯ ಕೌನ್ಸಿಲರ್ ಮಲ್ಲೇಶಪ್ಪ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಡಾ. ಶ್ರೇಯ ಗೌಡ ಹಾಗೂ ನಿಕಟಪೂರ್ವ ತಾಲೂಕು ನೌಕರರ ಸಂಘದ ಅಧ್ಯಕ್ಷ ಲಿಂಗರಾಜ್ ಅವರು ಮಧುಮೇಹ ಕಾಯಿಲೆಯ ಕುರಿತು ಜಾಗೃತಿ ಮೂಡಿಸಿ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಶುಭ ಜಾದವ್, ಜಿಲ್ಲಾ ಫಾರ್ಮಸಿ ಅಧ್ಯಕ್ಷ ಯೇಸು, ಆಸ್ಪತ್ರೆಯ ಮೆಟ್ರನ್ಗಳಾದ ಮುರುಗಮ್ಮ, ಜಯಂತಿ, ಕೌನ್ಸಿಲರ್ ಮಲ್ಲೇಶಪ್ಪ, ನರೇಶ್, ಶಿವಕುಮಾರ್, ಸಿದ್ದಮ್ಮ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.