Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಬಳ್ಳಾರಿ: ಅಂಚೆ ಜೀವ ವಿಮೆ ಸೇವೆಗಳಲ್ಲಿ ನವೆಂಬರ್ 16 ರಿಂದ ತಾತ್ಕಾಲಿಕ ವ್ಯತ್ಯಯ


ಬಳ್ಳಾರಿ,ನ.14
ಅಂಚೆ ಇಲಾಖೆಯು ತನ್ನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಇನ್ಶೂರೆನ್ಸ್ ಮ್ಯಾನೇಜ್ ಮೆಂಟ್ ಸೊಲ್ಯೂಷನ್ ವ್ಯವಸ್ಥೆಗೆ ಬದಲಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.
ನವೆAಬರ್ 16 ರಿಂದ 24 ರವರೆಗೆ ಅಂಚೆ ಕಚೇರಿಗಳು, ಗ್ರಾಹಕ ಸೇವಾ ಕೇಂದ್ರಗಳು ಹಾಗೂ ಆನ್ ಲೈನ್ ಮಾಧ್ಯಮಗಳ ಮೂಲಕ ಪಿಎಲ್‌ಐ/ಆರ್‌ಪಿಎಲ್‌ಐ ಸೇವೆಗಳು ಲಭ್ಯವಿರುವುದಿಲ್ಲ.
*ಗ್ರಾಹಕರಿಗೆ ಸೂಚನೆಗಳು:*
ಗ್ರಾಹಕರು ತಮ್ಮ ಬಾಕಿ ಇರುವ ಅಥವಾ ಪಾವತಿಸಬೇಕಾದ ನವೀಕರಣ ಪ್ರೀಮಿಯಂಗಳನ್ನು ನವೆಂಬರ್ 15 ರ ರಾತ್ರಿ 11.59ರೊಳಗೆ ಕಡ್ಡಾಯವಾಗಿ ಪಾವತಿಸುವಂತೆ ಕೋರಲಾಗಿದೆ. ಬಾಕಿ ಇರುವ ಪಿಎಲ್‌ಐ/ಆರ್‌ಪಿಎಲ್‌ಐ ವಹಿವಾಟುಗಳು ಮತ್ತು ಇತರ ಸೇವಾ ವಿನಂತಿಗಳನ್ನು ಕೂಡ ನಿರ್ದಿಷ್ಟ ದಿನಾಂಕದೊಳಗೆ ಪೂರ್ಣಗೊಳಿಸಬೇಕು.
ಬಾಕಿ ದಾಖಲೆಗಳು ಅಥವಾ ಇತರ ಅವಶ್ಯಕತೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬAಧಪಟ್ಟ ಪಿಎಲ್‌ಐ/ಆರ್‌ಪಿಎಲ್‌ಐ ಪ್ರತಿನಿಧಿಗಳು (ಸೇಲ್ಸ್ ಫೋರ್ಸ್) ಅಥವಾ ಸಿಪಿಸಿ ಅನ್ನು ಸಂಪರ್ಕಿಸಬಹುದಾಗಿದೆ.
ಹೊಸಲ ಇನ್ಶೂರೆನ್ಸ್ ಮ್ಯಾನೇಜ್ ಮೆಂಟ್ ಸೊಲ್ಯೂಷನ್ ವ್ಯವಸ್ಥೆಯು ನವೆಂಬರ್ 25 ರಂದು ದೇಶಾದ್ಯಂತ ಜಾರಿಗೆ ಬರಲಿದೆ. ವ್ಯವಸ್ಥೆ ಮರುಸ್ಥಾಪನೆಯಾದ ಕೂಡಲೇ ಪಿಎಲ್‌ಐ/ಆರ್‌ಪಿಎಲ್‌ಐ ಸೇವೆಗಳು ಮತ್ತೆ ಪುನರಾರಂಭಗೊಳ್ಳಲಿವೆ. ಈ ಸೇವಾ ವ್ಯತ್ಯಯದ ಅವಧಿಯಲ್ಲಿ ವಹಿವಾಟುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಗ್ರಾಹಕರು, ಸಿಸ್ಟಮ್ ಪುನರಾರಂಭಗೊAಡ ನಂತರ ಅನ್ವಯವಾಗುವಂತೆ ತಮ್ಮ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನರ ಬಳಿಗೆ ಸರ್ಕಾರದ ಸೇವೆ; ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ನಾರಾ ಭರತ್ ರೆಡ್ಡಿಜನರ ಬಳಿಗೆ ಸರ್ಕಾರದ ಸೇವೆ; ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ನಾರಾ ಭರತ್ ರೆಡ್ಡಿಜನರ ಬಳಿಗೆ ಸರ್ಕಾರದ ಸೇವೆ; ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿ: ಅಂಚೆ ಜೀವ ವಿಮೆ ಸೇವೆಗಳಲ್ಲಿ ನವೆಂಬರ್ 16 ರಿಂದ ತಾತ್ಕಾಲಿಕ ವ್ಯತ್ಯಯಮಕ್ಕಳ ಪ್ರತಿಭೆ, ಸೃಜನಶೀಲತೆಗೆ ವೇದಿಕೆಯಾದ ಬಾಲಮೇಳಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ತಹಶೀಲ್ದಾರ್ ಭೇಟಿ: ಪರಿಶೀಲನೆಗೃಹಲಕ್ಷ್ಮಿ ಯೋಜನೆ : 3 ಕಂತುಗಳ ಒಟ್ಟು ರೂ. 6000 ಹಣ ಬಿಡುಗಡೆ - ದೀಪಾವಳಿ ಕೊಡುಗೆ : ಸಿ.ಎಸ್. ಚಂದ್ರಭೂಪಾಲ್ಗೃಹಲಕ್ಷ್ಮಿ ಯೋಜನೆ : 3 ಕಂತುಗಳ ಒಟ್ಟು ರೂ. 6000 ಹಣ ಬಿಡುಗಡೆ - ದೀಪಾವಳಿ ಕೊಡುಗೆ : ಸಿ.ಎಸ್. ಚಂದ್ರಭೂಪಾಲ್ಪಟಾಕಿ ಮಾರಾಟ ಮಳಿಗೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ನಿಷೇಧ – ಕಾರ್ಮಿಕ ಇಲಾಖೆ ಎಚ್ಚರಿಕೆಕೆನರಾ ಬ್ಯಾಂಕ್ ಆರ್‌ಸೆಟಿ ವತಿಯಿಂದ ಉಚಿತ ‘ಕೃಷಿ ಉದ್ಯಮಿ’ ತರಬೇತಿಗೆ ಚಾಲನೆ