ಸುನೀಲ್ ಪವಾರ್ ಉದಯೋನ್ಮುಖ ನಟ, ಗೀತೆ ರಚನೆಕಾರ, ಹಾಡುಗಾರ ಜೊತೆಗೆ ಈ ಕಾದಂಬರಿ ಮೂಲಕ ಒಳ್ಳೆಯ ಬರಹಗಾರರು ಮತ್ತು ಬಹುಮುಖ ಪ್ರತಿಭೆಯುಳ್ಳವರು.
ದಿನ ನಿತ್ಯ ಕಾಣುವ, ಅನುಭವಿಸುವ, ಊಹೆಗೆ ನಿಲುಕುವ, ಅಂದುಕೊಂಡದ್ದನ್ನು ಬರಹ ರೂಪದಲ್ಲಿ ಅಕ್ಷರವಾಗಿಸುವ ಮನಸ್ಸು ಪ್ರತಿಯೊಬ್ಬ ಬರಹಗಾರನದ್ದಾದರೂ ಈ ಕಾದಂಬರಿ ವಿಭಿನ್ನ ರೀತಿಯಲ್ಲಿ ಓದಿಸಿಕೊಳ್ಳುತ್ತದೆ.
ಲೇಖಕರ ಮೂಲ ಭಾಷೆ ಬಂಜಾರವಾದರೂ ಉತ್ತರ ಕರ್ನಾಟಕದ ಆಡು ಭಾಷೆ ಈ ಕಾದಂಬರಿಯಲ್ಲಿ ಬಲು ಗಟ್ಟಿಯಾಗಿ ಸೊಗಸಾಗಿ ಕಟ್ಟಿದ್ದಾರೆ. ಪ್ರತಿಯೊಂದು ಪಾತ್ರವೂ ಕೂಡ ಒಂದೊಂದು ತಿರುವಿನ ಸಂದೇಶ ನೀಡುತ್ತವೆ.
ಆಕಸ್ಮಿಕವಾಗಿ ಭೇಟಿಯಾಗುವು ಕೆಲವು ಮನಸ್ಸುಗಳು ಸದಾಕಾಲ ಮನಸಲ್ಲಿ ಉಳಿದುಕೊಂಡು ಕಾಡುತ್ತವೆ. ಕೆಲವೊಮ್ಮೆ ಕೆಲವರ ಭೇಟಿ ಧನಾತ್ಮಕ ಅಥವಾ ಋಣಾತ್ಮಕ ಬದಲಾವಣೆ ತರುತ್ತದೆ. "ಕೊನೆಯ ಭೇಟಿ" ಪ್ರೀತಿಯ ಅರ್ಥವನ್ನು ಸತ್ಯ ಮತ್ತು ಅಮ್ಮುನ ಆತ್ಮವಿಶ್ವಾಸ, ನಂಬಿಕೆ ತ್ಯಾಗದ ಹಿರಿಮೆಯನ್ನು ಎತ್ತಿ ಹಿಡಿದಿದೆ. ಹೀಗೆ ಕೃತಿಯಲ್ಲಿ ಬರುವ ಒಂದೊಂದು ಪಾತ್ರವೂ ಕೂಡ ಒಂದು ಸಂದೇಶ ಸಾರುವ ನಿಟ್ಟಿನಲ್ಲಿ ಬರಹಗಾರರು ಕಟ್ಟಿಕೊಟ್ಟಿದ್ದಾರೆ.
ಸಾಮಾಜಿಕ, ರಾಜಕೀಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರವರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿಸ್ವಾರ್ಥವಾಗಿ ನಿರ್ವಹಿಸುವ ವಿಧಾನವನ್ನು ಸರಳವಾಗಿ ಹೆಣೆದಿದ್ದಾರೆ.
ಹಣ ಆಸ್ತಿ ಪ್ರಭಾವ ಇರದೆ ನಾಯಕನಾಗಬೇಕು, ನಾಯಕ ಸೇವಕನಾಗಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಪಡೆದುಕೊಳ್ಳಬೇಕು. ಮತದಾನ ಜಾಗೃತಿ ಮತ್ತು ನಮ್ಮ ಹಕ್ಕುಗಳನ್ನು ನಾವು ಮರೆಯಬಾರದೆಂಬ ಎಚ್ಚರಿಕೆ ಇದೆ. ಈ ಕೃತಿಯಲ್ಲಿ ಅಡವಿಬಾವಿ ತಾಂಡದ ಗ್ರಾಮಸ್ಥರ ಆತ್ಮವಿಶ್ವಾಸ, ಪ್ರೋತ್ಸಾಹ, ಮಾರ್ಗದರ್ಶನ, ಹಾರೈಕೆ ಬೆಂಬಲ ಇದೆ. ಪ್ರೀತಿ ಪ್ರೇಮದ ಹೊರತಾಗಿಯೂ ಸಂದೇಶವಿದೆ.
ಸತ್ಯ ಮತ್ತು ಅಮ್ಮುವಿನ ತ್ಯಾಗ, ನಿಸ್ವಾರ್ಥ ಇದೆ. ಹೆತ್ತ ಕರುಳ ಬಲವಿದೆ, ತಂಗಿಯ ಧೈರ್ಯ ಇದೆ. ಸಾಹುಕಾರನ ಅಹಂಕಾರ ದರ್ಪ , ಪ್ರತಿಷ್ಠೆ, ಆಮಿಷವಿದೆ.
ನನ್ನ ಆತ್ಮೀಯ ಸ್ನೇಹಿತರು ಸಹೃದಯಿ ಸುನಿಲ್ ಪವಾರ್ ಅವರ ಈ "ಕೊನೆಯ ಭೇಟಿ" ಕಾದಂಬರಿಗೆ ಜಯವಾಗಲಿ. ಹೀಗೆ ಮತ್ತಷ್ಟು ಮಗದಷ್ಟು ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ. ಈ ಕೃತಿ ಓದುಗ ಪ್ರಭುಗಳ ಮೆಚ್ಚುಗೆ ಪಡೆದು ಸಾರಸ್ವತ ಲೋಕದಲ್ಲಿ ಮೆರೆಯಲಿ ಎಂದು ಹಾರೈಸುತ್ತೇನೆ.
ರಾಮು ಎನ್ ರಾಠೋಡ್ ಮಸ್ಕಿ
[email protected]
ಪ್ರತಿಗಳಿಗಾಗಿ ಸಂಪರ್ಕಿಸಿ
*ಸುನೀಲ್ ಪವಾರ್*
*7666573227*