Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ವಿಶೇಷ ಲೇಖನ

ಗುರುಪೂರ್ಣಿಮಾ 

ಆಷಾಢ ಮಾಸದಲ್ಲಿ ಬರುವ ಹೂಣ್ಣಿಮೆಗೆ, ವ್ಯಾಸ ಪೂರ್ಣಿಮಾ, ಕಡ್ಲಿಗರ ಹೂಣ್ಣಿಮೆ, ರುದ್ರ ಸಾವರ್ಣಿ ಮನ್ವಾದಿ, ಗೋಕುಲ ವ್ರತ, ಶಿವ ಶಯನೋತ್ಸವ, ಗುರುಪೂರ್ಣಿಮಾ ಎಂದು ಕರೆಯುತ್ತಾರೆ. ಗುರುವಿನ ಮಹಿಮೆ ಅಪಾರವಾಗಿದೆ.        ಶ್ರೀರಾಮಚಂದ್ರನು, ಮರ್ಯಾದ ಪುರುಷೋತ್ತಮನೆಂದು ಕರೆಸಿಕೊಳ್ಳಲು ಅವನಿಗೆ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳೇ ಕಾರಣ. ಅವರ ಮಾರ್ಗದರ್ಶನವೇ ಆತನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು. ಅಂತೆಯೇ ಮಹಾಭಾರತದಲ್ಲಿ ಅರ್ಜುನ ಒಬ್ಬ ಉತ್ತಮ ಬಿಲ್ಲುಗಾರ. ಅದಕ್ಕೆ ಗುರು ದ್ರೋಣಾಚಾರ್ಯರೇ ಕಾರಣ. ಇತಿಹಾಸದಲ್ಲಿ ಹಕ್ಕ ಬುಕ್ಕರು ಶತ್ರುಗಳಿಂದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ವಿದ್ಯಾರಣ್ಯ ಗುರುಗಳು ಕಾರಣವಾದರೆ, ಶಿವಾಜಿ ಮಹಾರಾಜ ಸೋತು ಬಸವಳಿದು ಕಂಗೆಟ್ಟು ಕುಳಿತಾಗ, ರಾಮದಾಸರ ಗುರು-ಉಪದೇಶ, ಆತ್ಮಬಲ ತುಂಬಲು ಕಾರಣವಾಯಿತು. ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮ ಗಾಂಧೀಜಿಯಾಗಲು ಕಾರಣರಾದ ಗುರುಗಳು ಅನೇಕರಿದ್ದಾರೆ. ಅವರ ತತ್ವೋಪದೇಶಗಳು ಗಾಂಧಿಯವರ ಮನಸ್ಸನ್ನೂ ಆಳವಾಗಿ ಹೊಕ್ಕು ಸತ್ಯ ಮತ್ತು ಅಹಿಂಸೆಯ ಬಗ್ಗೆ ಇರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವು. ಆದ್ದರಿಂದ ಭಾರತ ಅಹಿಂಸೆಯಿಂದ ಸ್ವರಾಜ್ಯವನ್ನು ಪಡೆದ ಪ್ರಪಂಚದ ಮೊದಲ ರಾಷ್ಟ್ರವಾಯಿತು. ಈಗಲೂ ನಮ್ಮ ಸುತ್ತಮುತ್ತಲಿನ ಯಾವುದೇ ನಾಯಕರನ್ನು ಕೇಳಿದರೆ ಅವರ ಜೀವನದ ಗುರಿ ಅವರ ಗುರುಗಳು ಹಾಕಿಕೊಟ್ಟ ದಾರಿವೆಂಬದು ಸತ್ಯ. ಗುರುವೆಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವವರು ಮಾತ್ರವಲ್ಲ. ಮನೆಯಲ್ಲಿ ತಾಯಿ-ತಂದೆ, ಅಜ್ಜ-ಅಜ್ಜಿಯರು, ಬಂಧು-ಬಳಗದವರು, ಸ್ನೇಹಿತರು, ಪ್ರತಿನಿತ್ಯ ಮಾತನಾಡಿಸುವ ಸಜ್ಜನರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಸಹೃದಯಿ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ ಮಾನವ ಬಹಳ ಎತ್ತರಕ್ಕೆ ಏರಬಹುದು.
ಆದರೆ ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಅವರಿಗೆ ಮೊದಲಿನಂತೆ ಗೌರವವಿಲ್ಲ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಪೋಷಕರು, ಸಾಮಾಜಿಕ ವ್ಯವಸ್ಥೆ, ಮಾಧ್ಯಮಗಳು ಸಹ ಕಾರಣವಾಗಿದ್ದು, ಇವುಗಳಿಂದಲೇ ನಮ್ಮ ಸಾಮಾಜಿಕ ಬುನಾದಿ ಅಲುಗಾಡುತ್ತಿದೆ. ಸಮಾಜದಲ್ಲಿ  ಗುರುವಿನ ಮಾರ್ಗದರ್ಶನವಿಲ್ಲದೇ ಇಂದು ಅತ್ಯಾಚಾರ, ಅನ್ಯಾಯ, ವಂಚನೆ, ಭ್ರಷ್ಟಾಚಾರ ಮುಂತಾದವುಗಳು ತಾಂಡವವಾಡುತ್ತಿವೆ. ಶಿಕ್ಷಕರು ಮೌಲ್ಯಯುತವಾದ ಪ್ರಜೆಗಳನ್ನು ತಯಾರು ಮಾಡಬೇಕು. ಪ್ರಾಥಮಿಕ ಶಿಕ್ಷಣ ಮನುಷ್ಯನ ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಉತ್ತಮ ಗುರುವಿನ ಮಾರ್ಗರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. 
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’. ಏನು ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ, ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೇ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ಧಿಗಳ ಜೀವನದ ವಿವಿಧ ಹಂತಗಳನ್ನು ಗಮಿನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗರ್ದಕರಾಗಿ ಒಬ್ಬ ಗುರು ಜೊತೆಗಿದ್ದನೆಂಬುದು ತಿಳಿಯುತ್ತದೆ.
ಸರ್ವಜ್ಞ, ಬಸವಣ್ಣ, ಅಕ್ಕಮಹಾದೇವಿ, ಮುಂತಾದವರ ವಚನ ಸಾಹಿತ್ಯದಲ್ಲಿ, ಸಂತ ತುಕಾರಾಮ, ಜ್ಞಾನೇಶ್ವರ, ಚೊಖಾ ಮೇಳ, ಮುಕ್ತಾಬಾಯಿಯವರು ಬರೆದಿರುವ ಅಭಂಗಗಳಲ್ಲಿ ಗುರುವಿನ ಮಹಿಮೆ ಮಾಡಲಾಗಿದೆ.
ನಿಜವಾದ ಸದ್ಗುರು ನಿರಾಕಾರ ಭಗವಂತನಾಗಿದ್ದಾನೆ. ಈ ಪತಿತ ಪ್ರಪಂಚವನ್ನು ಮತ್ತೊಮ್ಮೆ ಪಾವನ ಮಾಡಲು ಸ್ವಯಂ ಸದ್ಗುರುವಾದ ಪರಮಾತ್ಮನು ಈ ಭೂಮಿಯ ಮೇಲೆ ಅವತರಿತನಾಗಿದ್ದಾನೆ. ಅವನು ನಿರಾಕಾರ ಜ್ಯೋತಿರ್ಬಿಂದು ಸ್ವರೂಪದಲ್ಲಿದ್ದಾನೆ. ಅವನು ವಿಶ್ವದ ಸರ್ವ ಆತ್ಮರ ಸತ್ಯ-ಗುರು ಆಗಿದ್ದಾನೆ. ಅವನು ಜ್ಞಾನ, ಪವಿತ್ರತೆ, ಪ್ರೇಮ, ಆನಂದ ಮತ್ತು ಶಕ್ತಿಗಳ ಸಾಗರವಾಗಿದ್ದಾನೆ. ಸದ್ಗುರುವಾಗಿ ನಮ್ಮೆಲ್ಲರಿಗೂ ಮುಕ್ತಿ ಮತ್ತು ಜೀವನಮುಕ್ತಿ ನೀಡಲು ಬಂದಿದ್ದಾನೆ.
ಪರಮಾತ್ಮನನ್ನು ಆರಾಧಿಸುವ ಭಕ್ತರೆಲ್ಲ ಯಾವುದಾದರೂ ಒಂದು ಬೇಡಿಕೆಯನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಪ್ರಾರ್ಥಿಸುತ್ತಾರೆ. ಅಂಥವರಲ್ಲಿ 4 ಪ್ರಕಾರದ ಭಕ್ತರಿದ್ದಾರೆ ಎನ್ನುತ್ತದೆ ಭಗವದ್ಗೀವ್ದತೆ.
ಚತುರ್ವಿಧಾ ಭಜಂತೇ ಮಾಂ ಜನಾ: ಸುಕೃತಿನೋ$ರ್ಜುನ | ಆರ್ತೋಜಿe ಜ್ಞಾಸುರರ್ಥಾರ್ಥೀ  ಜ್ಞಾನೀ ಚ ಭರತರ್ಷಭ || (ಗೀ: ಅ-7; ಶ್ಲೋಕ-16)
ಆರ್ತ(ದು:ಖಿ), ಅರ್ಥಾರ್ಥಿ(ಧನದಾಹಿ),  ಜಿಜ್ಞಾಸು(ಪ್ರಶ್ನಾರ್ಥಕ ವಿದ್ಯಾರ್ಥಿ),  ಜ್ಞಾನಿ(ದೇವರನ್ನು ಯಥಾರ್ಥವಾಗಿ ತಿಳಿದಿರುವವನು) ಹೀಗೆ 4 ಪ್ರಕಾರದ ಭಕ್ತರ ಬಗ್ಗೆ ಗೀತೆ ಹೇಳಿದೆ. ಭಕ್ತರು ಭಕ್ತರೇ, ಭಗವಂತ ಭಗವಂತನೇ. ಭಕ್ತರೇ ಭಗವಂತನಾಗಿದ್ದಾನೆಂದರೆ ಮಗನಿಗೆ ಅಪ್ಪನಿಲ್ಲ, ಮಗನೇ ಅಪ್ಪ ಎಂದು ತಿಳುವಳಿಕೆ ಕೊಟ್ಟಂತೆ. ಆದ್ದರಿಂದ ಭಕ್ತರೂ ಇದ್ದಾರೆ, ಭಗವಂತನೂ ಇದ್ದಾನೆ. ಭಗವಂತನೆಂದೂ ಭಕ್ತನಾಗಲಾರ. ಭಕ್ತನೂ ಭಗವಂತನಾಗಲಾರ. ಏಕೆಂದರೆ ಭಗವಂತನು ಜನನ-ಮರಣ ರಹಿತ, ಪರಮಾತ್ಮ ಅಕಾಯ, ಪರಮಾತ್ಮ ಅಭೋಕ್ತ, ಪರಮಾತ್ಮ ಅಹಿಂಸಕ, ಈ ಮಹಿಮೆಗಳು ಭಕ್ತನಿಗೆ ಇಲ್ಲ. ಆದ್ದರಿಂದ ಪರಮಾತ್ಮನೇ ಬೇರೆ, ಭಕ್ತರೇ ಬೇರೆ. ಈ ಕಾರಣದಿಂದ ಪರಮಾತ್ಮನು ಸರ್ವವ್ಯಾಪಿ ಅಲ್ಲ. ಸರ್ವಾಂತರ್ಯಾಮಿಯಲ್ಲ. ಆದ್ದರಿಂದ ಪರಮಾತ್ಮ ಯಾರು? ಹೇಗಿದ್ದಾನೆ ಎಂಬುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.
ಜ್ಯೋತಿಷಾಮಪಿ ತಜ್ಜ್ಯೋತಿಸ್ತಮಸ: ಪರಮುಚ್ಯತೇ| ಜ್ಞಾನಂ ಜ್ಞೇಯಂ  ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್|| (ಗೀ-ಅ-13; ಶ್ಲೋ-17)
ಸರ್ವಜ್ಯೋತಿ ಸ್ವರೂಪಗಳಾದ ಚೈತನ್ಯ ಆತ್ಮಗಳಿಗೂ ಪರಮ ಶ್ರೇಷ್ಠನು ಪರಮಜ್ಯೋತಿ ಪರಮಾತ್ಮನಾಗಿದ್ದಾನೆ. ಪರಮಾತ್ಮನು ಸರ್ವ ಆತ್ಮರುಗಳ  ಅಜ್ಞಾನನವೆಂಬ ಕತ್ತಲೆಯನ್ನು ಕಳೆಯಬಲ್ಲ ಸರ್ವಜ್ಞನೂ,  ಜ್ಞಾನೇಶ್ವರನೂ,  ಜ್ಞಾನಸಾಗರನೂ ಆಗಿದ್ದಾನೆ. ಪರಮಾತ್ಮನನ್ನು  ಜ್ಞಾನದಿಂದಲೇ ಅರಿಯಬೇಕಾಗಿದೆ.  ಜ್ಞಾನಬಲದ ಬುದ್ಧಿಯಿಂದ ಪರಮಾತ್ಮನನ್ನು ಪಡೆಯಬಹುದಾಗಿದೆ ಎಂದು ಗೀತೆ ಹೇಳಿದೆ. 
ವಿಶ್ವದ ಸರ್ವ ದು:ಖಿ ಆತ್ಮರುಗಳನ್ನು ದು:ಖಗಳಿಂದ ಮುಕ್ತರನ್ನಾಗಿ ಮಾಡಲು, ಈ ಹಳೆಯ ಪತಿತ ಕಲಿಯುಗಿ ಸೃಷ್ಠಿಯನ್ನು ಮತ್ತೊಮ್ಮೆ ಪಾವನ ಸತ್ಯಯುಗಿ ಸೃಷ್ಠಿಯನ್ನಾಗಿ ಮಾಡಲು, ವಿಕಾರಿ ಮನುಷ್ಯರನ್ನು ಮತ್ತೊಮ್ಮೆ ಶ್ರೇಷ್ಠಾಚಾರಿ ದೇವತೆಗಳನ್ನಾಗಿ ಮಾಡಲು ಸದ್ಗುರು ಪರಮಾತ್ಮನು ಬಂದಿದ್ದಾನೆ. 
{ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ  ದುಷ್ಕೃತಾಮ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ (ಅ-4 ಶ್ಲೋ-8)}
ಪರಮಾತ್ಮನು ಜ್ಞಾನ-ಸಾಗರನಾಗಿದ್ದು, ವರ್ತಮಾನ ಸಮಯದಲ್ಲಿ ನಾವು ಆತ್ಮರುಗಳಿಗೆ ಆಧ್ಯಾತ್ಮಿಕ ಜ್ಞಾನ ಮತ್ತು ಸಹಜ ರಾಜಯೋಗದ ಶಿಕ್ಷಣವನ್ನು ನೀಡುತ್ತಿದ್ದಾನೆ. ಸಹಜ ರಾಜಯೋಗದಿಂದ ಆತ್ಮದ ಎಲ್ಲಾ ಪಾಪ ಕರ್ಮಗಳು ಭಸ್ಮವಾಗಿ, ಆತ್ಮವು ಮತ್ತೊಮ್ಮೆ ಪಾವನವಾಗಿ ಸತೋಪ್ರಧಾನವಾಗುತ್ತದೆ. ರಾಜಯೋಗದಿಂದ ಮನುಷ್ಯಾತ್ಮರು ಮತ್ತೊಮ್ಮೆ ದೇವಾತ್ಮರಾಗುತ್ತಾರೆ.
ಹಾಗಾದರೆ ಬನ್ನಿ, ಈ ಹೂಣ್ಣಿಮೆಗೆ, ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಹೋಗಿ, ಸತ್ಯ ಗುರುವಿನ ಪರಿಚಯ ತಿಳಿದು, ಮುಕ್ತಿ ಜೀವನಮುಕ್ತಿಗೆ ಪಾತ್ರರಾಗೋಣ. 
--ವಿಶ್ವಾಸ. ಸೋಹೋನಿ.
  ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,
9483937106

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಲಾಖೆ ನಿಯಮಾನುಸಾರ ಶಾಂತಿ ಸು ವ್ಯವಸ್ಥೆಯೊಂದಿಗೆ  ಶ್ರೀ ಗೌರಿ ಗಣೇಶ ಹಬ್ಬ ಆಚರಿಸಿ : ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ .ಡಿ ಪನ್ನೇಕರ್ ಕರೆಬದಲಿ ಕೃಷಿ ಕ್ರಾಂತಿ: ‘ದೃಢ ಕರ್ನಾಟಕ ಸಂಕಲ್ಪ’ ದಡಿ ಸಾಗುತ್ತಿದೆ ಪ್ರಗತಿಯ ರಥ ಭೂಮಿ, ನೀರು ಮತ್ತು ತಂತ್ರಜ್ಞಾನದ ಸಂಗಮ: ಸರ್ಕಾರದ ನೂರು ದಿನಗಳ ಪಯಣದಲ್ಲಿ ಅನ್ನದಾತನ ಬದುಕಿಗೆ ಹೊಸ ಭರವಸೆ ನೇಗಿಲ ಯೋಗಿಯಿಂದ ಡಿಜಿಟಲ್ ಮಿಷನ್‌ವರೆಗೆ: ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿರುವ ದೃಢ ಸರ್ಕಾರದ ನೂತನ ಉಪಕ್ರಮಗಳುಮನೆ ಬಾಗಿಲಿಗೆ ನಮ್ಮ ಸರ್ಕಾರ: ಗುಡೇಕೋಟೆ ಹೋಬಳಿಯಲ್ಲಿ ಇಂದು ಪ್ರಜಾ ಆಂದೋಲನ ವಿಶೇಷ ಕಾರ್ಯಕ್ರಮಸಮ್ಮೇಳನ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಡಾ  ಮಧುಸೂದನ ಕಾರಿಗನೂರ ಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶ: ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿವಾರಣಾಸಿಯ ಗಂಗಾ ಆರತಿಯ ಮಾದರಿಯಲ್ಲಿ ಶ್ರೀಕ್ಷೇತ್ರ ಹುಲಿಗಿಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಸಂಭ್ರಮ ----ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅರ್ಥಪೂರ್ಣ ಆಚರಣೆಗೆ ಸಿದ್ಧತೆ- ಎಡಿಸಿ ಮಹಮ್ಮದ್ ಝುಬೇರ್ ಸೂಚನೆಪಡಿತರ ಪಡೆಯುವ ಪ್ರತಿಯೋಬ್ಬರು ಇ-ಕೆವೈಸಿ ಮಾಡಿಸಲು ಸೆ.30 ರಂದು ಕೊನೆಯ ದಿನ