ವಿಶ್ವಸಂಸ್ಥೆಯ ಯುನಿಸೆಫ್ ನ ದತ್ತಿ ಕ್ಯಾಲೆಂಡರ್ ಗಾಗಿ 2007 ರಲ್ಲಿ ನಡೆದ ಫೋಟೋ ಶೂಟಿಂಗಿನಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ಪುಟ್ಟ ಮಗುವೊಂದನ್ನು ಎತ್ತಿಕೊಂಡಿದ್ದರು.... ಆ ಪುಟ್ಟ ಮಗುವೇ ನೆನ್ನೆ ರಾತ್ರಿ ನಡೆದ 2026ರ ಫಿಫಾ ವರ್ಲ್ಡ್ ಕಪ್ ಫೈನಲ್‌ನಲ್ಲಿ ಮೆಸ್ಸಿ ಅವರಿಗೆ ಪ್ರಬಲ ಎದುರಾಳಿ ತಂಡದ ಸ್ಪೇನ್ ದೇಶದ 18ರ ಹರೆಯದ ಯುವಕ ಲ್ಯಾಮಿನೆ ಯಮಾಲ್.
ಈ ಜಗತ್ತಿನ ಅತ್ಯಂತ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬನಾಗಿರುವ 18 ವರ್ಷದ ಬಾಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾನೆ. ಸಹಜವಾಗಿಯೇ ವರದಿಗಾರರು ಆತನಿಗೆ "ನೀವು ಒತ್ತಡಗಳನ್ನು ಅದು ಹೇಗೆ ನಿಭಾಯಿಸುತ್ತೀರಿ" ಎಂದು ಕೇಳಿದರು..ಈ ಕುರಿತು ತನಗೆ ಏನೂ ಅನ್ನಿಸುವುದಿಲ್ಲ ಎಂಬ ಯುವಕನ ಉತ್ತರವನ್ನು ಕೇಳಿ ಎಲ್ಲರೂ ಸ್ತಬ್ಧರಾದರು... "ನೀವು ನಿಮ್ಮದೇ ಪಾಲಕರನ್ನು ತುಸು ಬೇರೆಯ ರೀತಿಯಲ್ಲಿ ನೋಡಬೇಕು ಎಂದು ಏಕೆ ಬಯಸುತ್ತೀರಿ " ಎಂದು ಆತ ಕೇಳಿದಾಗ ಪ್ರಶ್ನೆ ಕೇಳಿದ ಪತ್ರಕರ್ತರನ್ನು ಸೇರಿ ಅಲ್ಲಿದ್ದ ಉಳಿದವರು ಕೂಡ ದಂಗಾದರು. ಆ ಯುವಕ ಬೇರಾರೂ ಅಲ್ಲ ಲ್ಯಾಮಿನೆ ಯಮಾಲ್....ಇದೇ ಬೇಸಿಗೆಯಲ್ಲಿ ಆತ ತನ್ನ 18ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ.
ಈಗಾಗಲೇ ಫುಟ್ಬಾಲ್ ನ ಸೂಪರ್ ಸ್ಟಾರ್ ಎಂದೆನಿಸಿಕೊಂಡಿರುವ ಲ್ಯಾಮಿನೆ ಯಮಾಲ್. ಆತ ಬಾರ್ಸಿಲೋನ್ ಫುಟ್ಬಾಲ್ ಕ್ಲಬ್ ನ ಸದಸ್ಯ ಹಾಗೂ ಸ್ಪಾನಿಶ್ ದೇಶದ ರಾಷ್ಟ್ರೀಯ ಆಟಗಾರನಾಗಿದ್ದು, ಫುಟ್ಬಾಲ್ ಕ್ರೀಡೆಯ ಜಗತ್ತಿನ ಕೆಲವೇ ಅತ್ಯದ್ಭುತ ಆಟಗಾರರಲ್ಲಿ ಒಬ್ಬನಾಗಿದ್ದಾನೆ.
ಫುಟ್ಬಾಲ್ ಕ್ರೀಡೆ ಒಂದು ಗುಂಪು ಆಟವಾಗಿದ್ದು ಇದರಲ್ಲಿ ವೈಯುಕ್ತಿಕವಾಗಿ ಅತಿ ಹೆಚ್ಚು ಸಾಧಿಸಿದ ವ್ಯಕ್ತಿಗೆ ನೀಡುವ ಗೌರವಕ್ಕೆ ಆತ ಪಾತ್ರನಾಗಿದ್ದಾನೆ. ಬ್ಯಾಲೆನ್ ಡಿ ಆರ್ ರನ್ನರ್ ಪ್ರಶಸ್ತಿ ಆತನದಾಗಿದೆ. ಆತನ ಕುರಿತ ಫುಟ್ಬಾಲ್ ಪ್ರೇಮಿಗಳ ನಿರೀಕ್ಷೆ ಕೂಡಾ ಹೆಚ್ಚೇ ಆಗಿದೆ.
ಅಂತೆಯೇ ಸ್ಪಾನಿಶ್ ದೇಶದ ಆಕಾಶವಾಣಿಯ ಸಂದರ್ಶಕರಾದ ಕೆಡೆನಾ ಸರ್ ಅವರು ತಮ್ಮ ಹೆಗಲ ಮೇಲೆ ಅತಿ ದೊಡ್ಡ ನಿರೀಕ್ಷೆಯ ಭಾರವನ್ನು ಹೊತ್ತಿರುವ ಈ ಫುಟ್ಬಾಲ್ ಆಟಗಾರರನ್ನು ಮೇಲಿನ ಪ್ರಶ್ನೆ ಕೇಳಿ ದರು. ಲ್ಯಾಮಿನೆ ಯಮಾಲ್ ಅದಕ್ಕೆ ಉತ್ತರವನ್ನು ಹೇಳಿದ ನಾನು ಅತ್ಯಂತ ಪ್ರೀತಿಯಿಂದ ಫುಟ್ಬಾಲ್ ಆಡುತ್ತೇನೆ ಆದ್ದರಿಂದ ನನಗೆ ಇಲ್ಲಿ ಒತ್ತಡದ ಪ್ರಶ್ನೆಯೇ ಉದ್ಭವಿಸುವುದಿಲ್ಲ... ನಮ್ಮ ಕ್ರೀಡೆಯಲ್ಲಿ ಇದನ್ನು ಕಠಿಣ ಎಂದು ಭಾವಿಸುವವರು ಇರಬಹುದು.
ನನ್ನ ತಾಯಿ ಕೇವಲ 16 ವರ್ಷದವಳಿರುವಾಗ ನನಗೆ ಜನ್ಮ ನೀಡಿದಳು.... ನಿಜ ಹೇಳಬೇಕೆಂದರೆ ಅದು ನಿಜವಾದ ಒತ್ತಡ. ನಮ್ಮ ಇಡೀ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ನನ್ನ ತಂದೆ ರಸ್ತೆಯಲ್ಲಿನ ಕಸ,ಚಿಂದಿ ಬಟ್ಟೆಗಳನ್ನು ಆರಿಸಬೇಕಾಗುತ್ತಿತ್ತು. ಅದು ನಿಜವಾದ ಕಷ್ಟಪಡುವಿಕೆ... ನಾನು ಕೇವಲ ಫುಟ್ಬಾಲ್ ಆಡುತ್ತಿದ್ದೇನೆ.. ಇದರಲ್ಲಿ ಏನು ಹೆಚ್ಚುಗಾರಿಕೆ ಇದೆ ಎಂಬಂತೆ ಹೇಳುವ ಆ ಯುವಕನ ಮಾತಿನಲ್ಲಿಯೇ ಆತ ಬದುಕನ್ನು ಗ್ರಹಿಸಿರುವ ರೀತಿಯನ್ನು ನಾವು ಕಾಣಬಹುದು.
ಇಡೀ ಮೈದಾನದಲ್ಲಿ ಜನರ ಕೇಕೆ ಕೂಗುಗಳ ಮಧ್ಯದಲ್ಲಿ ಯಮಾಲ್ ಚೆಂಡನ್ನು ಬೌಂಡರಿಯ ಕಡೆ ಹೊಡೆಯುತ್ತಾನೆ... ನಿಜವಾಗಿಯೂ ಇದು ಆತನ ಪಾಲಿಗೆ ಒತ್ತಡವಲ್ಲ ಬದಲಾಗಿ ಬದುಕು ಆತನಿಗೆ ಕೊಡ ಮಾಡಿರುವ ಅದ್ಭುತ ಅವಕಾಶ.
ಅದುವೆ ಆತನ ವ್ಯಕ್ತಿತ್ವ.... ಬದುಕಿನ ನಿಜವಾದ ಭಾರವನ್ನು ಭಯವನ್ನು ಅಸಾಧಾರಣ ಧೈರ್ಯದಿಂದ ವರ್ಷಗಳ ಮೊದಲೇ ಹೊತ್ತವರು ಆತನನ್ನು ಬೆಳೆಸಿದ ಪಾಲಕರು...ಏಕೆಂದರೆ ಆತ ಮಾತನಾಡುವ ಪ್ರತಿಯೊಂದು ಮಾತು ತೂಕದ್ದಾಗಿದ್ದು ಅವು ಆತನ ಹೃದಯದಿಂದ, ಆತನ ಪಾಲಕರ ಶ್ರಮದಿಂದ ಬಂದ ಮಾತುಗಳಾಗಿವೆ.
ಬಾರ್ಸಿಲೋನಾ ಬಳಿಯ ಮಾತಾರೋ ಎಂಬ ಪುಟ್ಟ ಪಟ್ಟಣದ ರೊಕಾಫೊಂಡಾ ಎಂಬಲ್ಲಿ ದಿನಗೂಲಿ ಕಾರ್ಮಿಕರ ಕುಟುಂಬಗಳ ಮಧ್ಯದಲ್ಲಿ ಬೆಳೆದವನು ಆತ. ಅಂತಹ ಕಾರ್ಮಿಕ ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ ಎಂಬುದನ್ನು ಕೂಡ ಮರೆತಿರುವ ರೀತಿಯಲ್ಲಿ ಬದುಕನ್ನು ಅತ್ಯಂತ ದಾರುಣವಾದ ಬಡತನದ ಬದುಕನ್ನು ನಡೆಸುತ್ತಿದ್ದಾರೆ.
ಆತನ ತಾಯಿ ಶೀಲಾ ಯಬಾನ ಇಕ್ವೇಟೋರಿಯಲ್ ಗಿನಿ ಪ್ರಾಂತ್ಯದಿಂದ ಸ್ಪೇನ್‌ಗೆ ವಲಸೆ ಬಂದಿದ್ದು . ಆತನ ತಂದೆ ಮೌನಿರ ನಸ್ರೋಯಿ ಮೊರಕ್ಕೋ ದಿಂದ ವಲಸೆ ಬಂದ ಕೂಲಿ ಕಾರ್ಮಿಕ. ಅವರಿಬ್ಬರೂ ಹರೆಯದ ಜೋಡಿಗಳಾಗಿದ್ದರೂ ಮೂಲಭೂತ ಸೌಲಭ್ಯಗಳನ್ನು ಹೊಂದಿಸಿಕೊಳ್ಳಲು ಕೂಡ ಅವರು ಒದ್ದಾಡುತ್ತಿದ್ದರು. ಮನೆಯ ಬಾಡಿಗೆ ಕಟ್ಟಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ತಮಗೆ ಸಹಾಯ ಮಾಡಿದ ಇಬ್ಬರು ಸ್ನೇಹಿತರಾದ ಲ್ಯಾಮಿನೆ ಮತ್ತು ಯಮಾಲ್ ರು ಮುಂದೆ ಬಂದು ಆ ಯುವ ದಂಪತಿಗಳಿಗೆ ಬದುಕಿನಲ್ಲಿ ನೆಲೆಯೂರಲು ಸಹಾಯ ಮಾಡಿದ್ದರು. ಆ ಇಬ್ಬರು ಸ್ನೇಹಿತರ ಸಹಾಯವನ್ನು ನೆನೆದು ಕೃತಜ್ಞತೆಯಿಂದ ತಮಗೆ ಹುಟ್ಟಿದ ಮಗನಿಗೆ ಅವರ ಹೆಸರನ್ನು ಆ ಯುವ ದಂಪತಿಗಳು ಇಟ್ಟಿದ್ದರು.
ಹದಿಹರೆಯದ ತಾಯಿ, ತಮ್ಮ ಬದುಕಿನ ಬಂಡಿಯನ್ನು ಸಾಗಿಸಲು, ಮೇಜಿನ ಮೇಲೆ ಪ್ರತಿ ದಿನದ ಅಡುಗೆಯನ್ನು ಹೊಂದಿಸಲು ಯಾವುದೇ ರೀತಿಯ ಕೆಲಸಕ್ಕೂ ಸಿದ್ಧನಾದ ತಂದೆ, ನೆರೆಹೊರೆಯವರ ಅಪಾರ ಕರುಣೆಯ ನಡುವೆ ಬೆಳೆದ ಲ್ಯಾಮಿನೇಗೆ ಬದುಕಿನಲ್ಲಿ ಮುಳುಗುವ ಮತ್ತು ತೇಲುವುದರ ಅರಿವು ಚೆನ್ನಾಗಿಯೇ
ಇತ್ತು. ಬಾಲಕ ಲ್ಯಾಮಿನೆ ಯಾವಾಗಲೂ ತನ್ನ ಪುಟ್ಟ ಹಳ್ಳಿಯ ಸಣ್ಣ ಗಾರೆಯ ಚೌಕದಲ್ಲಿ ಗಂಟೆಗಟ್ಟಲೆ ಫುಟ್ಬಾಲ್ ಆಡುತ್ತಲೇ ಬೆಳೆದ. ಆತನ ದೈತ್ಯ ಪ್ರತಿಭೆ ಅಂತಿಮವಾಗಿ ಗುರುತಿಸಲ್ಪಟ್ಟು ಬಾರ್ಸಿಲೋನಾದ ಯುತ್ ಅಕಾಡೆಮಿಗೆ ಆತನನ್ನು ಮತ್ತೋರ್ವ ದಂತಕಥೆ ಲಾ ಮಾಸಿಯ ಕರೆ ತಂದರು.
ಮುಂದಿನ ಕೆಲವೇ ವರ್ಷಗಳಲ್ಲಿ ತನ್ನ ಆಟದಲ್ಲಿ ಅದ್ಭುತ ಕೌಶಲವನ್ನು ಸಾಧಿಸಿದ ಆತ ಫುಟ್ಬಾಲ್ ಜಗತ್ತಿನಲ್ಲಿ ಅದ್ಭುತ ಆಟಗಾರನಾಗುವತ್ತ ಹೆಜ್ಜೆ ಇರಿಸಿದ. ಅಷ್ಟಾಗಿಯೂ ಕೂಡ ಆತ ಬದುಕಿನಲ್ಲಿ ನಡೆದು ಬಂದ ಹಾದಿಯನ್ನು ಎಂದು ಮರೆತಿಲ್ಲ.
ತನ್ನ ಪುಟ್ಟ ಊರು ರೊಕಾಫೊಂಡದ ಪೋಸ್ಟಲ್ ಕೋಡ್ ನ ಕೊನೆಯ ಮೂರು ಸಂಖ್ಯೆಗಳನ್ನು ತನ್ನ ಜರ್ಸಿ ನಂಬರ್ (304 ) ಮಾಡಿಕೊಂಡಿರುವ ಆತ ತಾನು ಪ್ರತಿ ಬಾರಿ ಗೋಲು ಬಾರಿಸಿದಾಗಲೂ ಕೈಯಿಂದ 304ನ್ನು ಗಾಳಿಯಲ್ಲಿ ಬರೆಯುವ ಮೂಲಕ ತನ್ನ ಇಂದಿನ ಬದುಕಿಗೆ ಕಾರಣವಾದ ಬಾಲ್ಯದ ಬದುಕಿನ ಹಳೆಯ ಪುಟಗಳನ್ನು, ನೆರೆಹೊರೆಯವರನ್ನು ನೆನೆಯುತ್ತಾನೆ.
ಕೇವಲ 18ರ ಹರಯದ ಯುವಕನ ಈ ಕೆಲಸ ನಾವೆಂದೂ ನಮ್ಮ ಹಿಂದಿನ ಬದುಕಿನಲ್ಲಿ ನಡೆದು ಬಂದ ಹಾದಿಯನ್ನು ಮರೆಯಬಾರದು ಎಂಬುದನ್ನು ಸ್ಪಷ್ಟಪಡಿಸುತ್ತದೆ. ದಿನಗೂಲಿ ಕಾರ್ಮಿಕರ ಸಮುದಾಯದ ಕುರಿತ ಕೃತಜ್ಞತಾ ಭಾವ, ತನ್ನ ಪಾಲಕರು ತನಗಾಗಿ ಪಟ್ಟ ಕಷ್ಟ ಎಲ್ಲದರ ಅರಿವನ್ನು ಅತ ಹೊಂದಿದ್ದಾನೆ. ,
ನನ್ನ ಪಾಲಕರು ತನಗಾಗಿ ಮಾಡಿದ ತ್ಯಾಗವನ್ನು ಸದಾ ನೆನೆಯುವ ಆತ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ್ದರೂ ಕೂಡ ತನಗೆ ಆಡಲು ಅವಕಾಶವನ್ನು ಸೃಷ್ಟಿಸಿಕೊಟ್ಟ ಪಾಲಕರ ನಡೆಯನ್ನು ನೆನೆಯುತ್ತಾ , ನನಗೆ ಈ ಅವಕಾಶ ಸಿಕ್ಕರೂ ಕೂಡ ನಾನು ನನ್ನ ಮಕ್ಕಳಿಗೆ ಇಷ್ಟೊಂದು ಅನುಕೂಲವನ್ನು ಒದಗಿಸಿಕೊಡಬಲ್ಲೆನೆ ? ಎಂದು ನನ್ನ ಪಾಲಕರನ್ನು ನೋಡಿದಾಗ ನನಗೆ ಸದಾ ಬಾಸವಾಗುತ್ತದೆ ಎಂದು ಹೇಳುತ್ತಾನೆ.
ಸ್ನೇಹಿತರೆ, ಎಲ್ಲರ ಬದುಕು ಅತ್ಯಂತ ಸುಲಭವಾಗಿ ಇರುವುದಿಲ್ಲ. ಹಲವಾರು ಸವಾಲುಗಳನ್ನು, ಏರಿಳಿತಗಳನ್ನು, ಹತ್ತು ಹಲವಾರು ಎಡರು ತೊಡರುಗಳನ್ನು ಅವಡುಗಚ್ಚಿ ಸಹಿಸಿ, ಶ್ರಮಿಸುವ ವ್ಯಕ್ತಿ ಇತಿಹಾಸವನ್ನು ಸೃಷ್ಟಿಸುತ್ತಾನೆ. ತನ್ನ ಬೆವರಿನಿಂದ ತುಂಬಿದ ವ್ಯಕ್ತಿ ಅಚ್ಚಳಿಯದ ಹೆಸರನ್ನು ಹೊಂದುತ್ತಾನೆ ಎಂಬುದಕ್ಕೆ ಲ್ಯಾಮಿನೆ ಯಮಾಲ್ ಎಂಬ ಈ ಯುವಕನೆ ಸಾಕ್ಷಿ.
ನೆನ್ನೆ ತಾನೆ ನಡೆದ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ನಲ್ಲಿ
ಐತಿಹಾಸಿಕ ಜಯವನ್ನು ಸಾಧಿಸಿದ ಸ್ಪೇನ್ ದೇಶದ
ಯುವ ಕ್ರೀಡಾಳು ಲ್ಯಾಮಿನೆ ಯಮಾಲ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
