Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ | ರಾಜ್ಯ ಸುದ್ದಿ

ಬಳ್ಳಾರಿ: ‘ಶಾಶ್ವತ ನಿವಾಸಿ ಪ್ರಮಾಣ ಪತ್ರ' ವಿತರಣೆ ಪ್ರಕ್ರಿಯೆ ಆರಂಭ

ಬಳ್ಳಾರಿ,ಸೆ.04
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟಲ್ ಸೇವಾ ವ್ಯವಸ್ಥೆಯಡಿ ನಾಗರಿಕರಿಗೆ ‘ಶಾಶ್ವತ ನಿವಾಸಿ ಪ್ರಮಾಣ ಪತ್ರ’ ವಿತರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಸಾರ್ವಜನಿಕರು ಆನ್‌ಲೈನ್ ಅಥವಾ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಸರ್ಕಾರಿ ಪ್ರಮಾಣಪತ್ರಗಳು ಮತ್ತು ನಾಗರಿಕ ಸೇವೆಗಳನ್ನು ಸುಲಭವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರವು ಇತ್ತೀಚೆಗೆ ಹೊರಡಿಸಿರುವ ಆದೇಶ ಹಾಗೂ ಪ್ರಮಾಣಿತ ಕಾರ್ಯವಿಧಾನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಅರ್ಹ ನಾಗರಿಕರು ಕೆಳಕಂಡ ಕೇಂದ್ರಗಳಲ್ಲಿ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಗ್ರಾಮ ಪಂಚಾಯತಿಗಳಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ ಕೌಂಟರ್‌ಗಳು. ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳು. ಸಿಎಸ್‌ಸಿ ಹಾಗೂ ಬಾಪೂಜಿ ಸೇವಾ ಕೇಂದ್ರಗಳು.
ನೇರವಾಗಿ ಆನ್‌ಲೈನ್ ಮೂಲಕ https://ajsk.karnataka.gov.in/nk5_online/Login/Login_Public ಜಾಲತಾಣದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
*ಯಾರೆಲ್ಲಾ ಅರ್ಹರು? ಸಲ್ಲಿಸಬೇಕಾದ ದಾಖಲೆಗಳ ವಿವರ:*
ರಾಜ್ಯದಲ್ಲಿ ಜನಿಸಿ ಕನಿಷ್ಠ 10 ವರ್ಷ ವಾಸವಾಗಿರುವವರು, ಜನನ ಪ್ರಮಾಣ ಪತ್ರ (ಆನ್‌ಲೈನ್‌ನಿಂದ ಪಡೆಯಬಹುದು), ಕರ್ನಾಟಕದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 10 ವರ್ಷ ವ್ಯಾಸಂಗ (ದ್ವಿತೀಯ ಪಿಯುಸಿ/12ನೇ ತರಗತಿವರೆಗೆ) ಮಾಡಿದ ಶಾಲಾ ದಾಖಲೆ, ಅಥವಾ ಕನಿಷ್ಠ 10 ವರ್ಷಗಳ ಆಸ್ತಿ ದಾಖಲೆ/ವಾಸ್ತವ್ಯದ ದಾಖಲೆ.
*ನಿರಂತರವಾಗಿ 10 ವರ್ಷಗಳಿಂದ ರಾಜ್ಯದ ನಿವಾಸಿಯಾಗಿರುವವರು:*
10 ವರ್ಷಗಳ ಶಾಲಾ ಪ್ರಮಾಣಪತ್ರ, ಅಥವಾ ಕನಿಷ್ಠ 10 ವರ್ಷಗಳ ಸರ್ಕಾರಿ/ಸಾರ್ವಜನಿಕ ಉದ್ಯೋಗ ದೃಢೀಕರಣ ಪತ್ರ, ಅಥವಾ 10 ವರ್ಷಗಳ ಆಸ್ತಿ ಮಾಲೀಕತ್ವದ ದಾಖಲೆಗಳು.
*ಕರ್ನಾಟಕದಲ್ಲಿ 10 ವರ್ಷ ಶಿಕ್ಷಣ ಪೂರೈಸಿದವರು:*
ರಾಜ್ಯದ ಮಾನ್ಯತೆ ಪಡೆದ ಶಾಲೆ/ಕಾಲೇಜುಗಳಲ್ಲಿ 12ನೇ ತರಗತಿ/ದ್ವಿತೀಯ ಪಿಯುಸಿವರೆಗೆ ಕನಿಷ್ಠ 10 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರ.
*ಪೋಷಕರು ಅಥವಾ ಪತಿ/ಪತ್ನಿ 10 ವರ್ಷ ನಿವಾಸಿಯಾಗಿದ್ದರೆ:*
ಪೋಷಕರು/ಪತಿ/ಪತ್ನಿಯ 10 ವರ್ಷಗಳ ವ್ಯಾಸಂಗ ಪ್ರಮಾಣಪತ್ರ, ಅಥವಾ 2002ರ ಮತದಾರರ ಪಟ್ಟಿಯ ದಾಖಲೆ, ಅಥವಾ ಆಸ್ತಿ ಮಾಲೀಕತ್ವದ ಪತ್ರ.
*ಸ್ವಂತ ಮನೆ ಹೊಂದಿರುವವರು:*
ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳಿಂದ ಸ್ವಂತ ವಾಸದ ಮನೆ ಹೊಂದಿರುವ ಮಾಲೀಕತ್ವದ ದಾಖಲೆ.
*ಹಳೆಯ ಸರ್ಕಾರಿ ಗುರುತಿನ ಚೀಟಿ ಹೊಂದಿರುವವರು:*
ಕನಿಷ್ಠ 10 ವರ್ಷ ಅಥವಾ ಅದಕ್ಕಿಂತ ಹಳೆಯ ಕರ್ನಾಟಕ ವಿಳಾಸವಿರುವ ಆಧಾರ್ ಕಾರ್ಡ್, ಅಥವಾ 10 ವರ್ಷ ಹಳೆಯ ರೇಷನ್ ಕಾರ್ಡ್/ಕಂದಾಯ ದಾಖಲೆಗಳು.
*ಸರ್ಕಾರಿ ನೌಕರರು (7 ವರ್ಷಗಳ ಸೇವೆ):*
ಅರ್ಜಿದಾರರು ಅಥವಾ ಅವರ ತಂದೆ/ತಾಯಿ ಕರ್ನಾಟಕದ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕನಿಷ್ಠ 7 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಗ್ಗೆ ಇಲಾಖಾ ಮುಖ್ಯಸ್ಥರಿಂದ ನೀಡಲ್ಪಟ್ಟ ಪ್ರಮಾಣಪತ್ರ.
*ಶಾಶ್ವತ ನಿವಾಸಿ ಪ್ರಮಾಣ ಪತ್ರ ಹೊಂದಿರುವವರನ್ನು ವಿವಾಹವಾದವರು:*
ವಿವಾಹ ಪ್ರಮಾಣಪತ್ರದೊಂದಿಗೆ ಪತಿ ಅಥವಾ ಪತ್ನಿಯ ಶಾಶ್ವತ ನಿವಾಸ ಪ್ರಮಾಣ ಪತ್ರ, 10 ವರ್ಷಗಳ ಶಿಕ್ಷಣ ದಾಖಲೆ, ಉದ್ಯೋಗ ಪತ್ರ ಅಥವಾ ನಿವಾಸ ದೃಢೀಕರಣ ದಾಖಲೆಗಳು.
ಅರ್ಹ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಶೋಧನೆಯಲ್ಲಿ ವಿಭಿನ್ನತೆ ಕುಂಠಿತ: ಪ್ರೊ.ಪಿ.ಎಲ್ ಧರ್ಮ ಅಭಿಪ್ರಾಯಭದ್ರಾ ಮೇಲ್ದಂಡೆ ಯೋಜನೆ - ನದಿ ಪಾತ್ರದ ಜನರಿಗೆ ಎಚ್ಚರಿಕೆಕಲ್ಯಾಣ ಕರ್ನಾಟಕ ಉತ್ಸವ: ಸೆಪ್ಟೆಂಬರ್ 8 ರಂದು ಪೂರ್ವಭಾವಿ ಸಿದ್ಧತಾ ಸಭೆದೃಷ್ಟಿಹೀನತೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಶಿವಾನಂದ ವಿ.ಪಿ ಕರೆಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಿತ ಪ್ರದೇಶ ಘೋಷಣೆಬಳ್ಳಾರಿ: ‘ಶಾಶ್ವತ ನಿವಾಸಿ ಪ್ರಮಾಣ ಪತ್ರ' ವಿತರಣೆ ಪ್ರಕ್ರಿಯೆ ಆರಂಭಮೊಬೈಲ್ ಕ್ಯಾಂಟೀನ್ ವಾಹನ ಹಸ್ತಾಂತರಿಸಿದ ಶಾಸಕ ಜೆ.ಎನ್.ಗಣೇಶ್ತುಂಗಭದ್ರಾ ಎಡದಂಡೆ ನಾಲೆ: ಕೊನೆಯ ಭಾಗದ ರೈತರಿಗೆ ನ್ಯಾಯಯುತ ನೀರು ಪೂರೈಕೆಗೆ ಸೂಚನೆತುಂಗಭದ್ರಾ ಎಡದಂಡೆ ನಾಲೆ: ಕೊನೆಯ ಭಾಗದ ರೈತರಿಗೆ ನ್ಯಾಯಯುತ ನೀರು ಪೂರೈಕೆಗೆ ಸೂಚನೆತುಂಗಭದ್ರಾ ಎಡದಂಡೆ ನಾಲೆ: ಕೊನೆಯ ಭಾಗದ ರೈತರಿಗೆ ನ್ಯಾಯಯುತ ನೀರು ಪೂರೈಕೆಗೆ ಸೂಚನೆ