ಬಳ್ಳಾರಿ,ಅ.28
ಬಳ್ಳಾರಿ ನಗರ ಹಾಗೂ ಅನೌಪಚಾರಿಕ ಪಡಿತರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಜಪ್ತಿ ಮಾಡಲಾದ ಒಟ್ಟು 1,265.60 ಕ್ವಿಂಟಾಲ್ ಅಕ್ಕಿಯನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಜಿಲ್ಲಾಡಳಿತ ಆದೇಶಿಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ದಾಖಲಿಸಲಾದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಈ ಅಕ್ಕಿಯನ್ನು ನವೆಂಬರ್ 06 ರಂದು ಬೆಳಗ್ಗೆ 11:30 ಗಂಟೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಪಿಎಂಸಿ ಸಗಟು ಗೋದಾಮಿನಲ್ಲಿ ‘ಹೇಗಿದೆಯೋ ಹಾಗೆ’ ಆಧಾರದ ಮೇಲೆ ಪ್ರತ್ಯೇಕವಾಗಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.
2025-26ನೇ ಸಾಲಿನಲ್ಲಿ 19 ಪ್ರಕರಣಗಳಲ್ಲಿ ಜಪ್ತು ಮಾಡಲಾದ ಒಟ್ಟು 980.90 ಕ್ವಿಂಟಾಲ್ ಅಕ್ಕಿ. 2021-24ನೇ ಸಾಲಿನಲ್ಲಿ 6 ಪ್ರಕರಣಗಳಲ್ಲಿ ಜಪ್ತು ಮಾಡಲಾದ ಒಟ್ಟು 284.70 ಕ್ವಿಂಟಾಲ್ ಅಕ್ಕಿ.
ವಶಪಡಿಸಿಕೊಂಡ ಸಂಪೂರ್ಣ ಅಕ್ಕಿಯನ್ನು ಬಳ್ಳಾರಿ ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ.
ಆಸಕ್ತ ಬಿಡ್ಡುದಾರರು ನಿಗದಿತ ಷರತ್ತುಗಳೊಂದಿಗೆ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ