Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಸೋಮಲಾಪುರ ಕಾಯ್ದಿಟ್ಟ ಅರಣ್ಯ ಜಮೀನು ಖರಾಬು ಆಗಿಲ್ಲ: ಅರಣ್ಯ ಹಾಗೂ ಕಂದಾಯ ಇಲಾಖೆ ಸ್ಪಷ್ಟನೆ

ಬಳ್ಳಾರಿ,ಆ.29
ಸೋಮಲಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮಬಾಹಿರವಾಗಿ ಖರಾಬು ಜಮೀನನ್ನಾಗಿ ಪರಿವರ್ತಿಸಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿರುವ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಹಾಗೂ ನಿರಾಧಾರವಾದದ್ದು ಎಂದು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
1890ರಲ್ಲೇ ಕಾಯ್ದಿಟ್ಟ ಅರಣ್ಯ ಘೋಷಣೆ ಸೋಮಲಾಪುರ ಕಾಯ್ದಿಟ್ಟ ಅರಣ್ಯವನ್ನು ಅಧಿಸೂಚನೆ ಸಂಖ್ಯೆ 226ರ ಅನ್ವಯ ದಿನಾಂಕ 18.04.1890 ರಂದೇ ಅಧಿಕೃತವಾಗಿ ಕಾಯ್ದಿಟ್ಟ ಅರಣ್ಯವೆಂದು ಘೋಷಿಸಲಾಗಿದೆ. ಇದು ಒಟ್ಟು 2393.88 ಎಕರೆ (968.77 ಹೆಕ್ಟೇರ್) ವಿಸ್ತೀರ್ಣವನ್ನು ಹೊಂದಿದ್ದು, ಮೂರು ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳನ್ನು ಒಳಗೊಂಡಿದೆ. ಪ್ರಸ್ತುತ ಸದರಿ ಜಮೀನು ಸಂಪೂರ್ಣವಾಗಿ ಅರಣ್ಯ ಇಲಾಖೆಯ ವಶದಲ್ಲೇ ಇದೆ.
ಸೋಮಲಾಪುರ ಗ್ರಾಮದ ಸ.ನಂ. 1, 165/ಎ, 165/ಬಿ ಹಾಗೂ 177/ಸಿ ವ್ಯಾಪ್ತಿಯಲ್ಲಿ ಬರುವ 1096.79 ಎಕರೆ ಪ್ರದೇಶವನ್ನು ಖರಾಬು ಮಾಡಲಾಗಿದೆ ಎಂಬುದು ಮಾಧ್ಯಮದ ಆರೋಪವಾಗಿತ್ತು.
ದಿನಾಂಕ 2.01.2024 ರಂದು ಉಪ ವಿಭಾಗ ದಂಡಾಧಿಕಾರಿಗಳ ನ್ಯಾಯಾಲಯದ ನಿರ್ದೇಶನದಂತೆ, ಸಂಡೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಭೂಸ್ವಾಧೀನ ಹಾಗೂ ಮಂಜೂರಾದ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ಹಳ್ಳ, ಪರಂಪೋಕು, ಗುಡ್ಡ ಮತ್ತು ಇತರ ಖರಾಬು ಜಮೀನುಗಳು ದುರುಪಯೋಗವಾಗುವುದನ್ನು ತಡೆಯಲು ಪಹಣಿ ಕಾಲಂ 3ರ ಫೂಟ್ ಖರಾಬು ಕಾಲಂನಲ್ಲಿ ನಮೂದಿಸಲು ತಹಶೀಲ್ದಾರರಿಗೆ ಸೂಚಿಸಲಾಗಿತ್ತು.
ಈ ಪ್ರಕ್ರಿಯೆಯ ಭಾಗವಾಗಿ ಪಹಣಿ ದಾಖಲೆಗಳ ಕಾಲಂನಲ್ಲಿ ‘ಸರ್ಕಾರ ಬ ಖರಾಬು' ಎಂದು ತಾಂತ್ರಿಕವಾಗಿ ನಮೂದಾಗಿದ್ದು, ಸ್ವಾಧೀನತೆ ರೀತಿಯ ಕಾಲಂನಲ್ಲಿ ಈ ಹಿಂದಿನAತೆಯೇ ‘ಆರ್‌ಎಫ್ ಕಾಯ್ದಿಟ್ಟ ಅರಣ್ಯ/ಕಾಯ್ದಿರಿಸಿದ ಅರಣ್ಯ/ಅಡವಿ' ಎಂದೇ ಮುಂದುವರಿಸಲಾಗಿತ್ತು. ಆದರೆ, ಈ ಬದಲಾವಣೆಯು ಪ್ರಸ್ತುತ ವರ್ಷದ ಪಹಣಿಯಲ್ಲಿ ಸರಿಯಾಗಿ ಬಿಂಬಿತವಾಗದೇ ಇರುವುದು ಕಂಡುಬAದಿದೆ.
ದಾಖಲೆಗಳ ಇಂದೀಕರಣ ಪ್ರಕ್ರಿಯೆ ಅಂತಿಮ ಹಂತದಲ್ಲಿ ಈ ತಾಂತ್ರಿಕ ಲೋಪಗಳನ್ನು ಸರಿಪಡಿಸಲು ದಿನಾಂಕ 09.03.2026 ಹಾಗೂ 21.05.2026 ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸೋಮಲಾಪುರ ಕಾಯ್ದಿಟ್ಟ ಅರಣ್ಯದ ನಾಲ್ಕು ಸರ್ವೆ ನಂಬರ್‌ಗಳು ಸೇರಿದಂತೆ ಬಳ್ಳಾರಿ ಜಿಲ್ಲೆಯ ಒಟ್ಟು 92 ಸರ್ವೇ ನಂಬರ್‌ಗಳ ಸುಮಾರು 23,800 ಎಕರೆ (9637 ಹೆಕ್ಟೇರ್) ಅರಣ್ಯ ಪ್ರದೇಶದ ವಿವರಗಳನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇಂದೀಕರಣ (ಮ್ಯುಟೇಶನ್) ಮಾಡುವ ಕಾರ್ಯ ಪ್ರಸ್ತುತ ಅಂತಿಮ ಹಂತದಲ್ಲಿದೆ.
ಹಾಗಾಗಿ, ಮಾಧ್ಯಮದಲ್ಲಿ ಪ್ರಸಾರವಾದ ವರದಿಯು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಬಳ್ಳಾರಿ ಉಪ-ವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋಮಲಾಪುರ ಕಾಯ್ದಿಟ್ಟ ಅರಣ್ಯ ಜಮೀನು ಖರಾಬು ಆಗಿಲ್ಲ: ಅರಣ್ಯ ಹಾಗೂ ಕಂದಾಯ ಇಲಾಖೆ ಸ್ಪಷ್ಟನೆಶಾಲೆಗೆ ಮದ್ಯದ ಅಮಲು: ಶಿಕ್ಷಕನ ವರ್ತನೆಗೆ ಪೋಷಕರ ಆಕ್ರೋಶಶಾಲೆಗೆ ಮದ್ಯದ ಅಮಲು: ಶಿಕ್ಷಕನ ವರ್ತನೆಗೆ ಪೋಷಕರ ಆಕ್ರೋಶಶಾಲೆಗೆ ಮದ್ಯದ ಅಮಲಿನಲ್ಲಿ ಬಂದ ಶಿಕ್ಷಕ !: ಶಿಕ್ಷಕನ ವರ್ತನೆಗೆ ಪೋಷಕರ ಆಕ್ರೋಶಕುರುಗೋಡಿನಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆಕ್ಷಯರೋಗ ಮುಕ್ತ ಸಮಾಜಕ್ಕಾಗಿ ಕೈಜೋಡಿಸಿ: ಡಾ. ಇಂದ್ರಾಣಿ ವಿ. ಕರೆಆಸ್ಪತ್ರೆಗಳ ಸುತ್ತಮುತ್ತ ತಂಬಾಕು ಮುಕ್ತ ವಲಯ ಜಾರಿ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ - ತಹಶೀಲ್ದಾರ ವಿಶ್ವಜಿತ್ ಮೆಹೆತಾವಿಠ್ಲಾಪುರದಲ್ಲಿ  'ಜಾನಪದ ಚಿತ್ತ ಕಾಲೇಜಿನತ್ತ' ಕಾರ್ಯಕ್ರಮ ಯಶಸ್ವಿ: ಜಾನಪದ ವಿದ್ಯಾರ್ಥಿಗಳಿಗೆ ಭಾಷಾ ಜ್ಞಾನವನ್ನು ಸುಲಭವಾಗಿ ಪರಿಚಯಿಸುತ್ತದೆ ಸಿ.ಮಂಜುನಾಥಕೊಪ್ಪಳ ಅಂಚೆ ವಿಭಾಗ: ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ -------------ನೇಪಾಳ ಪ್ರವಾಹ: ಬಳ್ಳಾರಿ ಜಿಲ್ಲೆಯ ಪ್ರವಾಸಿಗರು, ನಾಗರಿಕರ ನೆರವಿಗೆ ಸಹಾಯವಾಣಿ ಆರಂಭ