ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ತಾನು ಕಳೆದ ಬಾಲ್ಯದ ನೆನಪುಗಳು ಅವಿಸ್ಮರಣೀಯ ಹಾಗೇ ಕೆಲವೊಂದು ನೆನಪುಗಳು ಮಾತ್ರ ನಮ್ಮ ತಲೇಲಿ ಹಚ್ಚ ಹಸಿರಾಗಿ ಉಳ್ಕೊಂಡುಬಿಡುತ್ವೆ. ಅದ್ರಲ್ಲೂ ಕೆಲವೊಂದು ಸಿಹಿ ನೆನಪುಗಳು ಆದ್ರೆ ಇನ್ನು ಕೆಲವು ಕಹಿ ಆಗಿರುತ್ತೆ. ಬಾಲ್ಯದ ಆ ದಿನಗಳು ಅದೆಷ್ಟು ಸುಂದರ ದಿನಗಳ ಸವಿನೆನಪುನಪುಗಳ ಸುಂದರವಾದ ತೋಟ. ನೆನೆದಷ್ಟು ಮುಗಿಯದ ಸವೆಯದ ಮಧುರವಾದ ಪಯಣ,ಕಾರಣವೇ ಇಲ್ಲದ ನಲಿವು,ಒಲವು ಚಿಕ್ಕ ಚಿಕ್ಕ ಕಾರಣಕ್ಕೂ ಸಂಭ್ರಮೀಸಿದ್ದೇ ಗೆಲುವು.ಅದೊಂದು ಮುಗ್ದತೆಯ ಚೆಲುವು ಬಾಳ ಪಯಣದಲ್ಲಿ ಮುಂದಿದೆ ಬಹುದೊಡ್ಡ ಸವಾಲುಗಳು
ಶಾಲಾ ದಿನಗಳು – ಆರಂಭದ ದಿನ ಹೊಸ ಹುರುಪಿನೊಂದಿಗೆ ಹೊಸ ಪುಸ್ತಕ,ಬ್ಯಾಗ್ ಸ್ಲೇಟ್ಗಳನ್ನೊಳಗೊಂಡ ಹೊಸ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು, ತುಂಬಾ ಖುಷಿಯಿಂದ ಹೋಕ್ತಾ ಇದ್ದದ್ದು. ಹಾಗೇ ಹೊಸ ಪುಸ್ತಕಗಳ ಸುವಾಸನೆ ಬೇರೆಯೇ ಇರ್ತಾ ಇತ್ತು. ಕೈಯಲ್ಲಿ ಪೆನ್ನಿಂದ ಬರೆದು ಅದರ ಪರಿಮಳ ಹೀರೋದು, ಹೊಸ ಪೆನ್ ಮತ್ತೇ ಪೆನ್ಸಿಲ್ ಬಳಸದೆ ಹಳೇ ಪೆನ್ಸಿಲ್ ಮತ್ತೇ ಪೆನ್ಗಳನ್ನೇ ಜೋಡಿಸಿ ಮತ್ತೆ ತಿಂಗಳ ಕಾಲ ಬಳಸಿದ್ದು, ನಮ್ಮ ಪಕ್ಕ ಕುಳಿತವನೇ ಪ್ರಾಣ ಸ್ನೇಹಿತ, ಹಿಂದಿನ ಬೆಂಚ್ ನವರೇ ಶತ್ರುಗಳೆಂಬ ಭಾವನೆ, ಬೆಂಚ್ ಬೆಂಚಿಗೂ ನಡೆಯುತ್ತಿದ್ದ ಶೀತಲ ಸಮರಗಳು, ಗುರುವಿನ ಜೊತೆಗಿನ ನಯ–ವಿನಯದ ಸಾಂಗತ್ಯ, ಪೆನ್ಸಿಲ್–ಬಳಪದ ಕಡ್ಡಿ ಮುರಿದನೆಂದು ನಡಯುತ್ತಿದ್ದ ಜಗಳಗಳು, ವಾರದಲ್ಲೊಮ್ಮೆ ತರಗತಿ ಗುಡಿಸುವ ಸರದಿಯಲ್ಲಿ ತೋರುವ ಉತ್ಸಾಹ ಹಾಗು ಅಸಡ್ಡೆಗಳು, ಶಾಲೆಗೆ ಮುಂಚಿತವಾಗಿ ಬರುವವನೇ ಕಲಿಕೆಯಲ್ಲಿ ಹಿಂದೆ, ತಡವಾಗಿ ಬರುವವನೇ ಮುಂದು ಎಂಬ ಮನೋಭಾವ, ಮೇಲು–ಕೀಳು ವ್ಯತ್ಯಾಸವಿಲ್ಲದೆ ಬೆರೆತು ಸಾಗುತ್ತಿದ್ದ ದಿನಗಳು, ‘ಪಠ್ಯೇತರ ಚಟುವಟಿಕೆ’ಗಳಿಗೆ ಮೀಸಲಿಡುತ್ತಿದ್ದ ಸಮಯಗಳು, ಹಿಟ್ಲರನಂತೆ ವರ್ತಿಸುತ್ತಿದ್ದ ಕ್ಲಾಸ್ ಲೀಡರ್ (ನಮಗೂ ಆ ದಿನ ಬರಲಿ ಎಂಬ ಕಾತರ), ಹಾಗೇ ನಮ್ಮ ನಮ್ಮಲ್ಲೇ ಕೆಲವೊಂದು ಗುಂಪುಗಳು ಕೆಲವೊಂದು ಸಣ್ಣ ಸಣ್ಣ ವಿಷಯಕ್ಕೆ ಜಗಳ ಆಡಿ ಮಾತಾಡೊದು ಬಿಟ್ಟುಹಾಗೇ ಸ್ವಲ್ಪ ದಿನ ಅದ್ಮೇಲೆ ಮತ್ತೇ ಒಂದಾಗೋದು.
ಶಾಲೆಯಲ್ಲಿ ವಾರ್ಷಿಕೋತ್ಸವ ಇದ್ದಾಗ ಡಾನ್ಸ್ ಮಾಡಿದ್ದು ಬರದೇ ಇದ್ರುನು ಬಿಡದೇ ಡಾನ್ಸ್ ಮಾಡಿಸೊ ಟೀಚರ್ ಶಾಲೆಯಲ್ಲಿ ಊಟಕ್ಕೆ ಬಿಟ್ಟಾಗ ಫ್ರೆಂಡ್ಸ್ ಜೊತೆ ಸೇರಿ ಊಟ ಮಾಡೋವಾಗ ಎಲ್ಲರೂ ಟಿಫಿನ್ ತೆಗೆದು ಹಂಚಿ ತಿಂದಿದ್ದು ಮಾತ್ರ ಮರಿಯೊಕೇ ಸಾಧ್ಯನೇ ಇಲ್ಲ.
ಮನೆಯಲ್ಲಿ ಇರೋವಾಗ ಆಟ ಆಡ್ತಾ ಇದ್ದಾಗ ಹಾಗೇ ಟಿವಿ ನೋಡ್ತಾ ನೋಡ್ತಾ ಎಲ್ಲಿ ಅಂದ್ರಲಿ ಮನೇಲಿ ಹಾಗೇ ಮಲಗಿ ಬಿಡ್ತಾ ಇದ್ದಿದ್ದು. ಆದ್ರೆ ಬೆಳ್ಳಿಗೆ ಎದ್ದಾಗ ನೋಡಿದ್ರೆ ಬೆಡ್ ಮೇಲೆ ಇರ್ತಾ ಇದ್ದದ್ದು.ಹಾಗೇ ರಾತ್ರಿ ಅದೆಷ್ಟು ಕನಸುಗಳು ಬೀಳ್ತಾ ಇದವೋ ಗೊತಿಲ್ಲ ಕೆಲವೊಂದು ದಿನ ಮಾತ್ರ ಟಿವಿಯಲ್ಲಿ ನೋಡಿದ ದೆವ್ವದ್ದು ಚಿತ್ರಗಳು ನೋಡಿದ ಆ ದಿನ ರಾತ್ರಿ ದೆವ್ವದ್ದು ಕನಸು ಬೀಳೋದು.ಆದ್ರೆ ಆಗ ಬೀಳ್ತಾ ಇದ್ದ ಕನಸು ಇವಾಗ ಬೀಳ್ತಾ ಇಲ್ಲಾ.
ಕ್ರಿಕೆಟ್ ಆಡೋದು ಅಂದ್ರೆ ತುಂಬಾನೇ ಇಷ್ಟ ಫ್ರೆಂಡ್ಸ್ ಜೊತೆ ಮನೆ ಮುಂದೆ ಕ್ರಿಕೆಟ್ ಅಡೊವಾಗ ಅದೆಷ್ಟು ಸಲ ನಮ್ಮ ಮನೆ ಎದುರುಗಡೆ ಇರೋ ಗ್ಲಾಸ್ ಪೂರ್ತಿ ಪುಡಿ ಪುಡಿ ಆಗಿದ್ದು ಅದೆಷ್ಟು ಸಲ ಹೇಳಿದ್ರು ಬೈಸಿಕೊಂಡಿದ್ದು ಜಾಸ್ತಿನೆ. ಹಾಗೇ ಭಾನುವಾರ ಬಂದಾಗ ಮೈದಾನಕ್ಕೆ ಹೋಕ್ತಾ ಇದ್ದಿದ್ದು ತುಂಬಾನೇ ಖುಷಿ ಆಗ್ತಾ ಇತ್ತು.
ಅದೇನೋ ಸ್ವಾತಂತ್ರ್ಯ ದಿನ (ಆಗಸ್ಟ್ 15) ಹಾಗೇ ಜನವರಿ 26 (ಗಣರಾಜ್ಯೋತ್ಸವ) ಆಚರಿಸುವ ದಿನ ಬಂದ್ರೆ ಮುಗಿತು. ಆ ಉತ್ಸಾಹ,ಉಲ್ಲಾಸ ಅದೆಷ್ಟು ಅಂದ್ರೆ ಮುಂಜಾನೆ ಬೆಳಿಗ್ಗೆ ಎದ್ದು 5ಗಂಟೆಗೆ ಸರಿಯಾಗಿ ಬಿಳಿ ಬಟ್ಟೆ, ಶೂ, ಬೆಲ್ಟು ಹಾಕಿಕೊಂಡು ಸೈಕಲ್ ತಗೊಂಡ ಸೈಕಲ್ ಮುಂದುಗಡೆ ನಮ್ಮ ರಾಷ್ಟ್ರಧ್ವಜ ಇಟ್ಟುಕೊಂಡು ಶಾಲೆಗೆ ಹೋಕ್ತಾ ಇದ್ರೆ ಒಂದೂ ಖುಷಿ ಆಮೇಲೆ ಶಾಲೆ ಎದುರುಗಡೆ ಹಾಜರು ಆಗ್ತಾ ಇದ್ದದ್ದು ಅದರೆ ಆ ವೇಳೆಗೆ ನಮ್ಮ ಟೀಚೆರ್ಸ್ ಕೂಡ ಅಷ್ಟು ಬೇಗ ಬರ್ತಾ ಇರ್ಲಿಲ್ಲ. ಅರ್ಧ ಗಂಟೆ ಒಂದೂ ಗಂಟೆ ಆದ್ಮೇಲೆ ಬರ್ತಾ ಇದ್ರು. ಆಗಿನ ಉತ್ಸಾಹ ಇವಾಗ ಕಡಿಮೆ ಅನ್ಸುತ್ತೆ. ಬಾಲ್ಯಕ್ಕೆ ವ್ಯಾಲಿಡಿಟಿ ಕಮ್ಮಿ ಇದ್ರು ನೆನಪುಗಳ ಶೇಖರಣೆ ಮಾತ್ರ ಜಾಸ್ತಿ ಇರುತ್ತೆ.
ಬೇಸಿಗೆ ರಜೆ ಅಂದರೆ ಸಾಕು ನಮಗೆಲ್ಲ ಅದೇನೋ ಸಂತೋಷ ಆ ದಿನಗಳ ನಮ್ಮ ದಿನಚರಿಯೇ ಬೇರೆ. ಬೆಳಿಗ್ಗೆಯ ಟಿಫಿನ್ ಅಯಿತು ಅಂದ್ರೆ ಸಾಕು ಎಲ್ಲ ಫ್ರೆಂಡ್ಸ್ ಸೇರಿ ಮನೆಲ್ಲಿ ಆಟ ಆಡ್ತಾ ಇದ್ವಿ ಬಿಸಿಲು ಜಾಸ್ತಿ ಇರ್ತಾ ಇತ್ತು ಅದಕ್ಕೆ ಮನೇಲಿ ಹೊರಗಡೆ ಬಿಡ್ತಾ ಇರ್ಲಿಲ್ಲ ಬಿಟ್ರು ಫ್ರೆಂಡ್ಸ್ ಮನೇಲಿ ಆಟ ಆಡ್ತಾ ಇದ್ವಿ. ಜಾತ್ರೆ ಬಂತು ಅಂದ್ರೆ ಸಾಕು ಮನೇಲಿ ಎಲ್ಲರು ಹೋಕ್ತಾ ಇದ್ದದ್ದು ಹಾಗೇ ನಾವೆಲ್ಲರು ಜಾತ್ರೆಯಲ್ಲಿ ಇರೋ ಕನ್ನಡಕ,ಕಾರು, ಹಾಗೇ ಕ್ರಿಕೆಟ್ ಬ್ಯಾಟ್, ಶಿಳ್ಳೆ, ಅದೆಲ್ಲ ಒಂದೂ 5-6 ದಿನ ಮಾತ್ರ ಚನ್ನಾಗಿ ಬರ್ತಾ ಇತ್ತು. ಕನ್ನಡಕ ಹಾಕೊಂಡ್ರೇ ಟಿವಿ ಅಲ್ಲಿ ಬರೋ ಹೀರೊ ಕೂಡ ನಮ್ಮ ಹಿಂದೆನೆ ಅಷ್ಟೊಂದು ಆಗ ಉತ್ಸಾಹ, ಹಾಗೇ ಖುಷಿ. ಈ ಎಲ್ಲ ಆಟಗಳು ಇಂದು ಕಣ್ಮರೆಯಾಗುತ್ತಿವೆ. ಟೀವಿ, ಟ್ಯಾಬ್, ಗಣಕಯಂತ್ರ, ವೀಡಿಯೊ ಗೇಮ್ಸ್ ಹಾಗೂ ಇಲೆಕ್ಟ್ರಾನಿಕ್ ಸಲಕರಣೆಗಳ ಮದ್ಯೆ ಕಳೆದು ಹೋಗಿವೆ. ಎಳೆ ವಯಸ್ಸು ಸ್ವಚ್ಚ ಮನಸ್ಸು. ಎಲ್ಲರ ಬಾಳಿನಲ್ಲಿಯೂ ಸಿಹಿನೆನಪುಗಳನ್ನು ಯಾವತ್ತು ಶಾಶ್ವತ. ಈಗ ಬಂದಿರೊ ಫೇಸ್ಬುಕ್,ಟ್ವಿಟರ್, ಜಗತ್ತು ಮುಂದುವರಿದಂತೆ ಹಾಗೇ ನಮ್ಮ ಹಳೇ ದಿನಗಳು ಮಾಸಿ ಹೋಗುತ್ತಿರುವುದು ನಿಜ.
ನಮ್ಮ ಜೀವನದಲ್ಲಿ ಮರೆಯಲಾಗದ ಕೆಲವು ನೆನಪುಗಳು ಅಂದರೆ ಅದು ನಮ್ಮ ಬಾಲ್ಯ ಜೀವನ ಮಾತ್ರ, ನಮ್ಮ ತಂದೆ 45 ವರ್ಷ ಹಿಂದಿನ ಅವರ ಬಾಲ್ಯದ ದಿನ ಇನ್ನು ನೆನಪಿದೆ. ನಮ್ಮ ತಾತ ಕೂಡ 10ನೇ ವರೆಗೂ ಓದಿದ್ದು. ಅವರಿಗೂ ಅವರ ಬಾಲ್ಯದ ಬಗ್ಗೆ ಅವರಿಗೂ ನೆನಪಿದೆ. ಬಹುಶ ಸವಿ ನೆನಪು ಅದ್ರೆ ಅದೇ ಇರಬೇಕು. ನಮ್ಮ ನಿಮ್ಮ ಗುರುಗಳು ಎಷ್ಟೋ ಬಾರಿ ನಮಗೆ ಹೇಳುತ್ತಿದ್ದ ವಾಕ್ಯ ಒಂದೇ “ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್’’ ಅಂತ ನಮಗೆ ಆಗ ಅನಿಸುತ್ತಿದ್ದಿದ್ದು ಮನೆಲಿ ನೋಡಿದ್ರೆ ಅ ಕೆಲ್ಸ ಇ ಕೆಲ್ಸ ಅಂತ ಕಾಟ, ಶಾಲೆಗೆ ಬಂದ್ರೆ ಪಾಠ, ಹೋಂ ವರ್ಕ್ ಅಂತ ಕಾಟ ಈ ಜೀವನ ಗೋಲ್ಡನ್ ಲೈಫ್ ಅಂತ ಯಾವ ನನ್ ಮಗ ಹೇಳಿದ್ದು ಅಂತ ನಮಗೆ ಗೋತಿಲದ್ದೇ ಬೈತಾ ಇದ್ದಿದ್ದು ಆ ಜೀವನ ಇವಾಗ ಬರಕೊಡದೇ ಅಂತ ಬಾಲ್ಯದಲ್ಲಿ ನಾವು ಎಷ್ಟು ಖುಷಿಯಾಗಿರುತ್ತಿವಿ ಅಲ್ವಾ? ರಜೆ ಬಂದರೆ ಅಜ್ಜಿ ಮನೆ ಅಲ್ಲಿರುವ ಸ್ನೆಹಿತರ ಜೋತೆ ಅದು ಇದು ಮಾಡಿ ಮನೆಗೆ ದೂರುಗಳು ತರುವುದು ಈ ಎಲ್ಲ ನೆನಪುಗಳು ಸದಾ ಬೂದಿ ಮುಚ್ಚಿದ ಕೆಂಡದ ಹಾಗೇ ಸದಾ ನಮ್ಮಲ್ಲಿಯೇ ಇರುತ್ತವೆ. ಅದ್ರೆ ಬೆಳಿತ ನಾವು ಅ ರೀತಿ ಖುಷಿಯನ್ನು ಮತ್ತೆ ಏಂದೂ ಪಡೆಯಲು ಸಾಧ್ಯವಾಗುವುದೇ ಇಲ್ಲ. ಚಿಕ್ಕ ವಯಸ್ಸಿನಲ್ಲಿ ನಾವು ಏನು ಮಾಡಿದರು ಯಾರು ಎನು ಅನ್ನೊಲ್ಲ ಅದ್ರೆ, ಇವಗ ಒಳ್ಳೆದು ಮಾಡಿದರು ಯಾಕೆ ಮಾಡಿದೆ ಅಂತರೆ ಏಂಥ ಪರಿಸ್ಥಿತಿ ಬಂತು ನೋಡಿ.
ಇನ್ನೂ ಬಾಲ್ಯ ವಯಸ್ಸನ್ನು ದಾಟಿ ಯಾವ್ವನಕ್ಕೆ ಬಂದರೆ ಕಾಲೇಜಿಗೆ ಹೋಗುವ ಮೊದಲ ದಿನವನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ. ಪೋಷಕರಿಗೆ ತಮ್ಮ ಮಕ್ಕಳು ಕಾಲೇಜಿಗೆ ಹೋಗುವ ಮೊದಲ ದಿನವನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ. ಪೋಷಕರಿಗೆ ತಮ್ಮ ಮಕ್ಕಳು ಕಾಲೇಜು ವಯಸ್ಸಿಗೆ ಬಂದರೆ ಮುಗಿತು. ಅದು ಮಾಡಬೇಡ, ಇದು ಮಾಡಬೇಡ, ಹೀಗೆ ಇರಬೇಕು ಅಂತ ನಮ್ಮ ಸುತ್ತ ಒಂದು ಮೈದಾನದ ರಚನೆ ಮಾಡಿರುತ್ತಾರೆ. ಅದನ್ನು ದಾಟಿದರೆ ಹೆತ್ತವರಿಗೆ ಕೋಪ, ದಾಟಲಿಲ್ಲ ಅಂದರೆ ನಮ್ಮ ವಯಸ್ಸಿಗೆ ಅವಮಾನ ಏಂತ ಧರ್ಮ ಸಂಕಟ ಅಲ್ವಾ. ಪೋಷಕರಿಗೆ ಪ್ರತಿ ಕ್ಷಣ ಮಕ್ಕಳ ಬಗ್ಗೆ ಯೋಚನೆ ಶುರು ಅವರು ಭಯ ಪಡುವುದಕ್ಕೂ ಬಲವಾದ ಕಾರಣ ಇದೆ 16 ರಿಂದ 20 ರ ವಯಸ್ಸಿನಲ್ಲಿ ಮನಸ್ಸು ತುಂಬಾ ಚಂಚಲ ನೋಡಿ ನನ್ ಮಗನ್ದ್ ಹೇಳಿದ ಮಾತು ಕೇಳೋಲ್ಲ ಅಂತದೇ ಪೋಷಕರು ಯಾವುದು ಮಾಡಬೇಡಿ ಅಂತರೋ ಅದೇ ಬೇಕು ಅಂತ ಮಾಡೊದು ಅವರತ್ರ ಬೈಸಿಕೊಳ್ಳುವುದು ಸರ್ವೆ ಸಾಮಾನ್ಯ.
ಕರ್ಮ ಅದ್ರೆ ಇದೇ ನೋಡಿ ಕಾಲೇಜು ಜೀವನ ಮುಗಿದ ತಕ್ಷಣ ದಿಢಿರನೇ ನಮ್ಮ ಸ್ವಾತಂತ್ರ್ಯಕ್ಕೆ ಬ್ರೇಕ್ ಬಿದ್ದಿರುತ್ತದೆ.
ಯಾಕೆ ಅಂತಿರಾ ಹೆಗಲ ಮೇಲೆ ಕೆಲಸ, ಮನೆ ಜವಾಬ್ದಾರಿ, ಸಂಪಾದನೆ ಎಂಬ ಶತ್ರುಗಳು ಒಂದೇ ಬಾರಿ ನಮ್ಮ ಮೇಲೆ ದಾಳಿ ಮಾಡಿ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡು ನಮ್ಮನ್ನು ಬಂಧಿಗಳನ್ನಾಗಿ ಮಾಡಿಬೀಡುತ್ತವೆ. ಅವುಗಳ ಬಂಧನದಿಂದ ಹೊರಬರುವುದು ಅದ್ರೆ ಸತ್ತ ವ್ಯಕ್ತಿ ಎದ್ದು ಬಂದ ಹಾಗೆನೇ. ಮುಂದೆ ಅದೇ ನಮ್ಮ ದಿನಚರಿಯಾಗಿ ಬಿಡುತ್ತದೆ. ಅ ಬಂಧನದಲ್ಲಿಯೂ ನಾವು ಖುಷಿಯಾಗಿರುವಂತೆ ಮಾಡುವುದು ಅದೇ ಹಳೆಯ ನೆನಪುಗಳು, ನೆನಪುಗಳು ಯಾರನ್ನು ಬೀಡುವುದಿಲ್ಲ ಕೆಲವರಿಗೆ ಸವಿ ನೆನಪುಗಳನ್ನು ನೀಡಿ ಜೀವನದಲ್ಲಿ ಆನಂದವಾಗುವಂತೆ ಮಾಡುತ್ತದೆ, ಇನ್ನೂ ಕೆಲವರಿಗೆ ದುಃಖದ ನೆನಪುಗಳನ್ನು ನೀಡಿ ಜೀವನವನ್ನು ನರಕದ ಕೋಪವನ್ನಾಗಿ ಮಾಡುತ್ತದೆ. ಕಾಲ ನಮ್ಮ ಕೈಲಿ ಇಲ್ಲ ನಿಜ ಅದರೆ, ನೆನಪುಗಳು ನಮ್ಮ ಕೈಯಲ್ಲಿಯೆ ಇದೆ ಇದು ತಿಳಿಯಾದ ಕೆಲವರು ತಾವು ನೋವು ಪಡುವುದಲ್ಲದೆ ತಮ್ಮ ಸುತ್ತಲಿನವರಿಗೋ ನೋವು ನೀಡುತ್ತಾರೆ. ಅದಕ್ಕೆ ನಮ್ಮ ಗುರುಗಳು ಹೇಳುತ್ತಿದ್ದರು, ‘ಕಹಿ ನೆನಪುಗಳು ಗಾಯದ ನೋವಾಗಬೇಕು ಸಿಹಿ ನೆನಪುಗಳು ಗಾಯದ ಗುರುತುಗಳಾಗಬೇಕು ಅಂತ’ ಅಂದರೆ ಗಾಯದ ನೋವು ಕೆಲ ಕಾಲ ಮಾತ್ರ ಇರುತ್ತದೇ ಅದರೆ ಗಾಯದ ಗುರುತು ಜೀವನ ಪೂರ್ತಿ ಇರುತ್ತದೆ ಅದ್ದರಿಂದ ಕಹಿ ನೆನಪುಗಳನ್ನು ಮರೆತು, ಸಿಹಿ ನೆನಪುಗಳನ್ನು ಸದಾ ಮೆಲಕು ಹಾಕಿಕೊಂಡು ಸಂತೋಷದಿಂದ ಸುಖಕರವಾದ ಜೀವನವನ್ನು ನಡೆಸಬೇಕುಏನೇ ಆದರೂ ಆ ದಿನಗಳು ಮತ್ತೆಂದು ಮರಳಿ ಬರಲಾರವು. ಆ ದಿನಗಳನ್ನು ಖುಷಿಯಿಂದ ಕಳೆದ ಕ್ಷಣಗಳು ಮತ್ತೇ ಬರಲು ಸಾಧ್ಯವಿಲ್ಲ ಅದರೆ ನಾವೂ ಕಳೆದ ಪ್ರತಿಯೊಂದು ಕ್ಷಣಗಳು ನೆನಪು ಮಾತ್ರ ನಮ್ಮಲ್ಲಿ ಶಾಶ್ವತವಾಗಿರೊದು ಸತ್ಯ