ಜನಪದ ಕಲಾವಿದ ದಿವಂಗತ ಯಲ್ಲಪ್ಪ ಸಂಕಲ್ ಇವರಿಗೆ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮ

Vijayanagara Vani
ಜನಪದ ಕಲಾವಿದ ದಿವಂಗತ ಯಲ್ಲಪ್ಪ ಸಂಕಲ್ ಇವರಿಗೆ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮ

ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ನಿವಾಸಿಯಾಗಿದ್ದ ರಾಯಚೂರು ಜಿಲ್ಲೆ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಜನಪದ ಕಲಾವಿದರಾದ ಯಲ್ಲಪ್ಪ ಸಂಕಲ್ ಮಾಸ್ಟರ್ ನಿಧನ ಹೊಂದಿದಕ್ಕೆ ದೇವದುರ್ಗ ಪಟ್ಟಣದ ಮಾಳೆಗಡ್ಡಿ ಶಾಂತಿನಗರ ಹಗಲುವೇಷ ಸಾಂಸ್ಕೃತಿಕ ವೇದಿಕೆ ಆವರಣದಲ್ಲಿ ದೇವದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪ್ರಗತಿಪರುವಕೂಟ ಕನ್ನಡಪರ ಸಂಘ ಸಂಸ್ಥೆಯ ಒಕ್ಕೂಟ ಜಿಲ್ಲಾ ಎಮ್ ಆರ್ ಎಚ್ ಎಸ್ ಡಿ ಎಸ್ ಎಸ್ ಎನ್ ಮೂರ್ತಿ ಬಣ ಅಗಲುವೇಷ ಸಾಂಸ್ಕೃತಿಕ ವೇದಿಕೆ ವತಿಯಿಂದ ಅಗಲಿದ ಜನಪದ ಕಲಾವಿದ ಇವರಿಗೆ ಶ್ರದ್ಧಾಂಜಲಿ ನುಡಿ ನಮನ ಸಲ್ಲಿಸಲಾಯಿತು. ಹಿರಿಯ ಜನಪದ ಕಲಾವಿದರಾದ ಈರಣ್ಣ ರುದ್ರಾಕ್ಷಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹನುಮಂತಪ್ಪ ಮನ್ನಾಪುರ್ ಮಾತನಾಡಿ ಯಲ್ಲಪ್ಪ ಸಂಕಲ್ ಜನಪದ ಸಾಂಸ್ಕೃತಿಕ ಬಹುಮುಖ ಪ್ರತಿಭೆ ಹೊಂದಿದ ಕಲಾವಿದರು ಅನೇಕ ಬೈಲಾಟಗಳಲ್ಲಿ ಸಾಮಾಜಿಕ ಐತಿಹಾಸಿಕ ಪಾತ್ರಗಳಲ್ಲಿ ಮಿಂಚಿದ್ದಾರೆ ಅಲ್ಲದೆ ತಬಲ ವೀಣೆ ಪಿಟೀಲು ಅನೇಕ ವಾದ್ಯಗಳನ್ನು ನುಡಿಸುತ್ತಿದ್ದರು ಇವರ ಸೇವೆ ಜನಪದ ಸಾಹಿತ್ಯ ಲೋಕಕ್ಕೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ಮಾತನಾಡಿದ ದೇವದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ ಶಿವರಾಜ್ ಮಾತನಾಡಿ ಯಲ್ಲಪ್ಪ ಸಂಕಲ್ ಇವರಿಗೆ ರಾಯಚೂರು ಜಿಲ್ಲಾ ಯುವ ಜನ ಮೇಳ ಪ್ರಶಸ್ತಿ ಜಿಲ್ಲಾ ಪ್ರಶಸ್ತಿ ಗಿರಿ ಜನ ಉಸ್ತವ ಪ್ರಶಸ್ತಿ ಬೆಳಗಾವಲ್ಲಿ ನಡೆದ 2011ರಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಸನ್ಮಾನಿಸಲಾಗಿದೆ ಇಂತಹ ಅದ್ಭುತ ಜನಪದ ಕಲಾವಿದರ ಅಗಲಿಕೆ ಬಯಲಾಟ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿ ದೆ ಎಂದರು ಜಂಬಣ್ಣ ಬಾಲಣ್ಣ ಶಂಭುಲಿಂಗ ಹೂನ್ನಾಲಿಂಗ ರವಿಚಂದ್ರ ದುರ್ಗಪ್ಪ ಗೋಪಾಲ್ ಭಾಗ್ಯಮ್ಮ ರುದ್ರಾಕ್ಷಿ ಶರಣಮ್ಮ ಸೊಲ್ಲಾಪುರ್ ಬಸವರಾಜ್ ಶಿವು ಮೈಬೂಬ್ ಹಾಗೂ ರಂಗಪ್ಪ ಬಲಿದವ ಕೋತಿಗುಡ್ಡ ಅಜಿವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತು ಶಿವರಾಜ್ ರುದ್ರಾಕ್ಷಿ ಸಂಘಟನಾ ಕಾರ್ಯದರ್ಶಿಗಳು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಂಜನೇಯ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಸಾಹಿತ್ಯ ಅಭಿಮಾನಿಗಳು ಸಂಗೀತ ಪ್ರೇಮಿಗಳು ಕಲಾ ಪ್ರೇಮಿಗಳು ಮುದ್ದು ಮಕ್ಕಳು ಸೇರಿದಂತೆ ಇತರರು ಭಾಗವಹಿಸಿದ್ದರು

WhatsApp Group Join Now
Telegram Group Join Now
Share This Article
error: Content is protected !!