ಇಂದು ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ

Vijayanagara Vani
ಇಂದು ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ

ಹೊಸಪೇಟೆ (ವಿಜಯನಗರ)ಹೊಸಪೇಟೆಯ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರವ್ಯಾಪ್ತಿಗೆ ಒಳಪಡುವ ಸುತ್ತ್ತಲಿನ ಪ್ರದೇಶದಲ್ಲಿ ಮೇ 16ರಂದು ಬೆಳಿಗ್ಗೆ 9 ಗಂಟೆಯಿAದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಮೆಂಟೆನೆನ್ಸ್ ವರ್ಕ್ ಹಾಗೂ ಇತರೆ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಹೊಸಪೇಟೆ ನಗರದ ಸದರಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಸುತ್ತಲಿನ ಪ್ರದೇಶಗಳಾದ ಬಸವೇಶ್ವರ ಬಡವಾಣೆ, ಜಬ್ಬಲ್ ಸರ್ಕಲ್, ಶಾನಬಾಗ ಸರ್ಕಲ್, ರಾಜೀವ ನಗರ, ರೆಲ್ವೆ ಸ್ಪೆಷನ್, ಅಮರಾವತಿ, ಚಿತ್ತವಾಡಗಿ, ಶುಗರ್ ಫ್ಯಾಕ್ಟರಿ, ಹಂಪಿರೋಡ್, ಗಣೇಶ ಗುಡಿ, ನೌಕರ ಕಾಲೋನಿ, ಗಾಂಧಿ ಸರ್ಕಲ್, ಬಸ್ ಸ್ಟ್ಯಾಂಡ್, ಮೇನ್ ಬಜಾರ್, ಕೋಟ್, ರಾಣಿಪೇಟೆ, ಭಟ್ರಹಳ್ಳಿ, ಬೆನಕಾಪುರ, ಬಸವನದುರ್ಗ, ನಾಗೇನಹಳ್ಳಿ ಹಾಗೂ ನರಸಾಪುರ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕು ಎಂದು ಹೊಸಪೇಟೆಯ ಜಿಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
Ad imageAd image
Share This Article
error: Content is protected !!
";