ಜಾಮೂನ್ ಹಣ್ಣು ಎಂದೂ ಕರೆಯಲ್ಪಡುವ ನೇರಳೆ ಹಣ್ಣು ಆರೋಗ್ಯಕರವಾದ, ರುಚಿಕರವಾದ ಹಣ್ಣಾಗಿದೆ. ಬೇಸಿಗೆ ಕಾಲದಲ್ಲಿ ಸಿಗುವಂಥ ಈ ಹಣ್ಣನ್ನು ನೀವು ಮಾರುಕಟ್ಟೆಯಲ್ಲಿ ಬುಟ್ಟಿಯಲ್ಲಿಟ್ಟುಕೊಂಡು ಮಾರಾಟ ಮಾಡುವುದನ್ನು ನೋಡಿಯೇ ಇರುತ್ತೀರಿ.
ನಮ್ಮಲ್ಲಿ ಸಿಗುವಂಥ ಸ್ಥಳೀಯ ಹಣ್ಣುಗಳು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಹಾಗೆಯೇ ಆಯಾ ಸೀಸನ್ಗಳಲ್ಲಿ ಬರುವಂಥ ಹಣ್ಣುಗಳೂ ಸಹ ಬಹಳಷ್ಟು ಪ್ರಯೋಜನಕಾರಿ. ಅವುಗಳಲ್ಲಿ ಪ್ರತಿಯೊಂದು ಹಣ್ಣುಗಳೂ ಬೇರೆ ಬೇರೆ ಪೋಷಕಾಂಶಗಳನ್ನು ನೀಡುತ್ತವೆ. ಹಾಗೆ ಬಹಳಷ್ಟು ಪ್ರಯೋಜನಕಾರಿಯಾಗಿರು ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು.
ನೇರಳೆ ಬೀಜಗಳ ಪುಡಿಯ ಪ್ರಯೋಜನಗಳು ಹಲವು: ನೇರಳೆ ಬೀಜಗಳು ಕೂಡ ಹಣ್ಣಿನಷ್ಟೇ ಪ್ರಯೋಜನಕಾರಿ. ಹಲವಾರು ಆರೋಗ್ಯ ಪ್ರಯೋಜನಗಳ ಜೊತೆಗೆ ನೇರಳೆ ಹಣ್ಣಿನ ಬೀಜಗಳ ವೈಶಿಷ್ಟ್ಯವೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾರ‍್ಥ್ಯ
ಅವು ಮಧುಮೇಹವನ್ನು ನರ‍್ವಹಿಸಲು ಸಹಾಯ ಮಾಡುತ್ತದಲ್ಲದೇ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ ಇತರ ಹಲವಾರು ಪ್ರಯೋಜನಕಾರಿ ಅಂಶಗಳನ್ನು ಈ ಹಣ್ಣು ಹೊಂದಿದೆ.
ಸಾಮಾನ್ಯವಾಗಿ ಎಲ್ಲರೂ ನೇರಳೆ ಹಣ್ಣುಗಳನ್ನು ತಿಂದು ಬೀಜಗಳನ್ನು ಬಿಸಾಡುತ್ತಾರೆ. ಆದರೆ ಈ ಬೀಜಗಳಲ್ಲಿ ಹಲವಾರು ಆರೋಗ್ಯಕರ ಅಂಶಗಳಿವೆ. ಈ ಬಗ್ಗೆ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನೀವು ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಲೇಬೇಕು. ಆದರೆ ಇದರ ಬೀಜದ ಪುಡಿಯ ಬಗ್ಗೆ ತಿಳಿದಿದ್ದೀರಾ? ಹೌದು, ನೀವು ಸರಿಯಾಗಿ ಓದಿದ್ದೀರಿ. ಬೇಸಿಗೆ ಹಣ್ಣಾದ ನೇರಳೆ ಹಣ್ಣಿನ ಬೀಜಗಳು ವಿವಿಧ ಆರೋಗ್ಯ ಪರಿಸ್ಥಿತಿಗಳನ್ನು ನರ‍್ವಹಿಸಲು ಉಪಯುಕ್ತವಾಗಿದೆ” ಎಂದು ಅವರು ಬರೆದಿದ್ದಾರೆ.
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ
ನೇರಳೆ ಹಣ್ಣಿನ ಬೀಜಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ಇವು ಜಂಬೋಲಿನ್ ಮತ್ತು ಜಾಂಬೋಸಿನ್ ಎಂಬ ಸಕ್ರಿಯ ಪದರ‍್ಥಗಳನ್ನು ಹೊಂದಿದ್ದು, ಅದು ರಕ್ತಕ್ಕೆ ಬಿಡುಗಡೆಯಾಗುವ ಸಕ್ಕರೆಯ ಪ್ರಮಾಣವನ್ನು ನಿಧಾನಗೊಳಿಸುತ್ತದೆ. ಹಾಗೆಯೇ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವಂತೆ ಮಾಡುತ್ತದೆ. ವೈಜ್ಞಾನಿಕವಾಗಿ ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಇದು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ.
. ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ ನೇರಳೆ ಬೀಜಗಳು ದೇಹದಿಂದ ವಿಷವನ್ನು, ಬೇಡದಿರುವ ಅಂಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿವೆ. ಇವು ನರ‍್ವಿಷಗೊಳಿಸುವ ಮೂಲಿಕೆಯಂತೆ ಕೆಲಸ ಮಾಡುತ್ತವೆ. ನೈರ‍್ಗಿಕವಾಗಿ ಮೂತ್ರ ವಿರ‍್ಜನೆ ಮತ್ತು ಬೆವರುವಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಉತ್ರ‍್ಷಣ ನಿರೋಧಕ ಗುಣಯಕೃತ್ತಿನ ಉತ್ತೇಜಕವಾಗಿ ನೇರಳೆ ಹಣ್ಣಿನ ಬೀಜಗಳು ಕರ‍್ಯನರ‍್ವಹಿಸುತ್ತದೆ. ಉತ್ರ‍್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯ ವಿರುದ್ಧ ಹೋರಾಡುತ್ತವೆ. ಯಕೃತ್ತಿನ ಜೀವಕೋಶಗಳನ್ನು ರಕ್ಷಿಸುತ್ತವೆ. ಈ ಬೀಜಗಳು ಯಕೃತ್ತಿನಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿನೇರಳೆ ಬೀಜಗಳ ಪುಡಿಯು ಎಲಾಜಿಕ್ ಆಸಿಡ್ ಎಂಬ ಉತ್ರ‍್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ರಕ್ತದೊತ್ತಡದ ಏರಿಳಿತಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.
ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ಕೊಲ್ಲುತ್ತವೆನೇರಳೆ ಬೀಜಗಳ ಪುಡಿಯು ಫ್ಲೇವನಾಯ್ಡ್ಗಳು ಮತ್ತು ಫೀನಾಲಿಕ್ ಸಂಯುಕ್ತಗಳಂತಹ ಶಕ್ತಿಯುತವಾದ ಉತ್ರ‍್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದನ್ನು ಸೇವಿಸುವುದರಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ