ರಾಯಚೂರು: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೂತನ ಪದಾಧಿಕಾರಿಗಳ ನೇಮಕ; ಆದೇಶ ಪತ್ರ ವಿತರಣೆ

Vijayanagara Vani
ರಾಯಚೂರು: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೂತನ ಪದಾಧಿಕಾರಿಗಳ ನೇಮಕ; ಆದೇಶ ಪತ್ರ ವಿತರಣೆ
oplus_0
ರಾಯಚೂರು (ಮೇ.22): ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ರಾಯಚೂರು ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ರಾಯಚೂರು ನಗರದ ಕನ್ನಡ ಭವನದಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷರಾಗಿರುವ ಶರಣಬಸವ ನಾಯಕ ಜಾನೇಕಲ್ ರವರು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು‌.
ಈ ವೇಳೆ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಅರುಣ್ ಕುಮಾರ್ ದೊರೆ, ಪಕೀರಪ್ಪ ನಾಯಕ ಸಿಂಧನೂರು, ಶಿವರಾಯ ನಾಯಕ ದೇವದುರ್ಗ, ನರಸಪ್ಪ ನಾಯಕ ರಾಯಚೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ವೆಂಕಟೇಶ್ ನಾಯಕ, ಶರಣು ನಾಯಕ ಮಸ್ಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಹನುಮಂತ ಗುಂಜಳ್ಳಿ, ಮಹಾದೇವ ನಾಯಕ ದದ್ದಲ್, ಯಲ್ಲಪ್ಪ ನಾಯಕ ಮಲ್ಲಾಪೂರ, ಉದಯ ನಾಯಕ ಮಟಮಾರಿ, ರಂಗನಾಥ ನಾಯಕ ರಾಯಚೂರು ಐಬಿ ಕಾಲೋನಿ, ಜಂಟಿ ಕಾರ್ಯದರ್ಶಿಯನ್ನಾಗಿ ಮುಕಪ್ಪ ನಾಯಕ ಬಳಗಾನೂರು, ಖಜಾಂಚಿಯಾಗಿ ವೆಂಕನಗೌಡ ಸಿಂಧನೂರು, ಕಾರ್ಯದರ್ಶಿಯಾಗಿ ಬಿ ಸುರೇಶ್ ನಾಯಕ ದಿನ್ನಿರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದರು.
ಈ ಸಂದರ್ಭದಲ್ಲಿ ಸಿಂಧನೂರು ತಾಲೂಕು ಅಧ್ಯಕ್ಷ ಮಲ್ಲಯ್ಯ ನಾಯಕ, ಮಸ್ಕಿ ತಾಲೂಕು ಅಧ್ಯಕ್ಷ ಮೌನೇಶ್ ನಾಯಕ ಕಣ್ಣೂರು ಮಸ್ಕಿ, ದೇವದುರ್ಗ ತಾಲೂಕು ಅಧ್ಯಕ್ಷ ಬುದ್ದಯ್ಯ ನಾಯಕ, ರಾಯಚೂರು ಗ್ರಾಮೀಣ ಅಧ್ಯಕ್ಷ ಉರುಕುಂದಪ್ಪ ನಾಯಕ, ರಾಯಚೂರು ನಗರ ಘಟಕ ಅಧ್ಯಕ್ಷ ವೀರುಪಾಕ್ಷ ನಾಯಕ, ರಾಣಾ ನಾಯಕ, ವೀರೇಶ ನಾಯಕ, ಮಂಜು ನಾಯಕ ದದ್ದಲ್, ಶರಣು ನಾಯಕ ತಿಮಲಾಪೂರು, ಬಸವರಾಜ ನಾಯಕ, ಮುಕ್ಕಣ್ಣ ನಾಯಕ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.
WhatsApp Group Join Now
Telegram Group Join Now
Share This Article
error: Content is protected !!