Ad image

ಮಠಕ್ಕೆ ಸೇರಿದ ಜಮೀನನ್ನು ಮಠಕ್ಕೆ ಬಿಟ್ಟುಕೊಡಿಸಿ;ವಿ ಎಸ್ ಶಂಕರ್

Vijayanagara Vani
ಮಠಕ್ಕೆ ಸೇರಿದ ಜಮೀನನ್ನು ಮಠಕ್ಕೆ ಬಿಟ್ಟುಕೊಡಿಸಿ;ವಿ ಎಸ್ ಶಂಕರ್

ಸಂಡೂರು ತಾಲೂಕು ತೋರಣಗಲ್ಲು ಹೋಬಳಿ ಡಿ.ಅಂತಾಪುರ ಗ್ರಾಮದಲ್ಲಿನ

- Advertisement -
Ad imageAd image

ಶ್ರೀಶ್ರೀಶ್ರೀ ಅಲ್ಲಿಪುರ ಸ್ವಾಮಿಗಳ ಆಶ್ರಮ ಜಾಗದ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಉಳುಮೆ ಮಾಡುತ್ತಿದ್ದು ಅದನ್ನು ಸಂಬಂಧಪಟ್ಟ ಅಧಿಕಾರಿಗಳು ತಡೆದು ಭಕ್ತಾದಿಗಳಿಗೆ ಅನೂಕೂಲ ಮಾಡಿಕೊಡಬೇಕೆಂದು ರೈತಪರ ಹೋರಾಟಗಾರ, ಬಿಜೆಪಿ ರೈತ ಮೋರ್ಚಾದ ಮುಖಂಡರಾದ ವಿ ಎಸ್ ಶಂಕರ್ ಅವರು  ಒತ್ತಾಯಿಸಿದ್ದಾರೆಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರಿಗೆ ಮನವಿಪತ್ರವನ್ನು ಸಲ್ಲಿಸಿ ಮಾತನಾಡಿ.ತೋರಣಗಲ್ಲು ಹೋಬಳಿ ಡಿ.ಅಂತಾಪುರ ಗ್ರಾಮದ ಸರ್ವೆ ನಂ:146/, ವಿಸ್ತೀರ್ಣ : 1-30 ಸೆಂಟ್ಸ್ ವುಳ್ಳ ಜಮೀನುನಲ್ಲಿ 1968 ರಿಂದ ಜಾಗದಲ್ಲಿ ಆಶ್ರಮ ಕಟ್ಟಿಕೊಂಡು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ಸಾವಿರಾರು ಭಕ್ತಾದಿಗಳು ಧ್ಯಾನ, ಭಜನೆ, ವಿಚಾರ, ಕಾರ್ಯಕ್ರಮಗಳು ಮಾಡುತ್ತಾ ಭಕ್ತಿ ಪೂರ್ವಕವಾಗಿ ಸಾವಿರಾರು ಭಕ್ತಾದಿಗಳು ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ.

 ಮಠಕ್ಕೆ ಸೇರಿಸ ಜಮೀನಿಗೆ ಸಂಬಂದಪಟ್ಟಂತೆ  ಸರ್ವೆ ನಂ:146/,ರಲ್ಲಿ ಶ್ರೀಶ್ರೀಶ್ರೀ ಅಲ್ಲೀಪುರ ಸ್ವಾಮಿಗಳ ಟ್ರಸ್ಟ್ ಆಶ್ರಮ ಎಂದು ಸಾಗುವಳಿ ಕಾಲಂ ನಲ್ಲಿ ಹಾಗೂ 1994-95ರಲ್ಲಿನ ಹಳೆ ಪಹಣಿಯಲ್ಲಿರುತ್ತದೆ.

 ಸಂಬಂಧಪಟ್ಟ ಅಧಿಕಾರಿಗಳು ಮನವಿಯನ್ನು ಪರಿಶೀಲಿಸಿ,ಖುದ್ದು ಸ್ಥಳಪರಿಶೀಲನೆಯನ್ನು ಮಾಡಿ ಸದ್ಯ ಜಮೀನಿನಲ್ಲಿ ಈಗ ಅಕ್ರಮವಾಗಿ ಪ್ರವೇಶ ಮಾಡಿ ಜಮೀನು ಸಾಗುವಳಿ ಮಾಡುತ್ತಿರುವ ಅಗಸರ ಹನುಮಂತಪ್ಪ ಮತ್ತು ಕುಟುಂಬಸ್ಥರ ಮೇಲೆ ಸೂಕ್ತ ರೀತಿಯ ಕ್ರಮಗಳನ್ನು ಜರುಗಿಸಿ ಮಠಕ್ಕೆ  ಮತ್ತು ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯನ್ನು ಮಾಡಿಕೊಂಡರು.

ಸಂಧರ್ಭದಲ್ಲಿ ರೈತರು, ಮಠದ ಭಕ್ತಾದಿಗಳು ಹಾಗೂ ಇತರರು ಇದ್ದರು

Share This Article
error: Content is protected !!
";