Ad image

ಹೊಟ್ಟೆಯಲ್ಲಿ ಅಸ್ವಸ್ಥತೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ,ಕರುಳಿನ ಕ್ಯಾನ್ಸರ್ ಲಕ್ಷಣಗಳೇನು

Vijayanagara Vani
ಹೊಟ್ಟೆಯಲ್ಲಿ ಅಸ್ವಸ್ಥತೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ,ಕರುಳಿನ ಕ್ಯಾನ್ಸರ್ ಲಕ್ಷಣಗಳೇನು

ಕರುಳಿನ ಕ್ಯಾನ್ಸರ್ ಲಕ್ಷಣಗಳೇನು? ಯಾವಾಗ ವೈದ್ಯರನ್ನು ಕಾಣಬೇಕು, ಇದರ ಲಕ್ಷಣಗಳೇನು ಎಂಬೆಲ್ಲಾ ಮಾಹಿತಿ ತಿಳಿಯೋಣ:

ಕರುಳಿನ ಕ್ಯಾನ್ಸರ್ ಲಕ್ಷಣಗಳು

* ಆಗಾಗ ಹೊಟ್ಟೆಯ ಆರೋಗ್ಯದಲ್ಲಿ ಬದಲಾವಣೆಯಾಗುವುದು ಅಂದರೆ ಬೇಧಿ ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಈ ರೀತಿ ಪದೇ ಪದೇ ಉಂಟಾಗುತ್ತಿದ್ದರೆ ನರ‍್ಲಕ್ಷ್ಯ ಮಾಡಬೇಡಿ.

* ಗುದಧ್ವಾರದಲ್ಲಿ ರಕ್ತಸ್ರಾವ

* ಹೊಟ್ಟೆಯಲ್ಲಿ ಅಸ್ವಸ್ಥತೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ

* ಗ್ಯಾಸ್ ಸಂಪರ‍್ಣ ಹೊರ ಹೋದಂತೆ ಅನಿಸದೇ ಇರುವುದು

* ಸುಸ್ತು, ತಲೆಸುತ್ತು

* ಇದ್ದಕ್ಕಿದ್ದಂತೆ ತೂಕ ಇಳಿಕೆ ಈ ಲಕ್ಷಣಗಳು ಕಂಡು ಬಂದರೆ ನರ‍್ಲಕ್ಷ್ಯ ಮಾಡದೆ ವೈದ್ಯರ ಬಳಿ ತೋರಿಸುವುದು ಒಳ್ಳೆಯದು. ಸೂಚನೆ: ಗ್ಯಾಸ್ಟ್ರಿಕ್ ಅಂತ ಕೆಲವರು ಸ್ವ ಚಿಕಿತ್ಸೆ ಮಾಡುತ್ತಾರೆ, ವೈದ್ಯರ ಬಳಿ ಹೋಗುವುದೇ ಇಲ್ಲ, ತಾವೇ ಗ್ಯಾಸ್ಟ್ರಿಕ್ ಮಾತ್ರೆ ತೆಗೆದು ಸುಮ್ಮನಾಗುತ್ತಾರೆ, ಆ ತಪ್ಪುಗಳನ್ನು ಮಾಡಲೇಬೇಡಿ, ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ಒಳ್ಳೆಯ ವೈದ್ಯರಿಗೆ ತೋರಿಸಿ.

ಕರುಳಿನ ಕ್ಯಾನ್ಸರ್ ಕಾರಣಗಳೇನು? ಕರುಳಿನ ಕ್ಯಾನ್ರ‍್ಗೆ ನರ‍್ದಿಷ್ಟವಾದ ಕಾರಣಗಳಿಲ್ಲ, ಈ ಕಾರಣಗಳಿಂದಾಗಿ ಕರುಳಿನ ಕ್ಯಾನ್ಸರ್ ಉಂಟಾಗುವುದು. ಆರೋಗ್ಯಕರ ಕಣಗಳು ಸರಿಯಾದ ರೀತಿಯಲ್ಲಿ ವಿಭಾಗವಾಗಿ ದೇಹದ ಅಂಗಾಂಗಗಳು ಕರ‍್ಯನರ‍್ವಹಿಸುವಂತೆ ಮಾಡುತ್ತದೆ, ಆದರೆ ಡಿಎನ್ಎಗೆ ಹಾನಿಯುಂಟಾದಾಗ ಅದು ಕ್ಯಾನ್ರ‍್ಕಣಗಳಾಗುವುದು.

ಯಾರಿಗೆ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚು? ವಯಸ್ಸಾದವರಿಗೆ: ಯಾವುದೇ ವಯಸ್ಸಿನಲ್ಲಿ ಕ್ಯಾನ್ಸರ್ ಬರಬಹುದು, ಆದರೆ ಸಾಮಾನ್ಯವಾಗಿ ೫೦ ರ‍್ಷ ಮೇಲ್ಪಟ್ಟವರಲ್ಲಿ ಕಂಡು ಬರುವುದು. ಆಫ್ರಿಕನ್-ಅಮೆರಿಕನ್ರಿಗೆ ಹೆಚ್ಚಾಗಿ ಕಂಡು ಬರುವುದು. ಕರುಳಿನ ಪಾಲಿಪ್ಸ್ ಇರುವವರಿಗೆ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚು * ವಂಶವಾಹಿಯಾಗಿಯೂ ಬರುವ ಸಾಧ್ಯತೆ ಇದೆ.

* ಕಡಿಮೆ ನಾರಿನಂಶ ಹಾಗೂ ಅಧಿಕ ಕೊಬ್ಬಿನಂಶದ ಆಹಾರ ಸೇವನೆ

* ಮಧುಮೇಹಿಗಳಿಗೆ

* ಒಬೆಸಿಟಿ ಸಮಸ್ಯೆ ಇರುವವರಿಗೆ

* ಧೂಮಪಾನಿಗಳಿಗೆ

* ಅತಿಯಾದ ಮದ್ಯಪಾನಿಗಳಿಗೆ

‘ * ಕ್ಯಾನ್ರ‍್ಗೆ ಕೀಮೋಥೆರಪಿ ಮಾಡಿಸಿದವರಿಗೆ ಕರುಳಿನ ಕ್ಯಾನ್ಸರ್ ತಡೆಗಟ್ಟಲು ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ

* ತುಂಬಾ ಬಗೆಯ ಹಣ್ಣುಗಳನ್ನು ಸೇವಿಸಿ ಆಯಾ ಸೀಸನ್ನಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸಿ, ದಿನದಲ್ಲಿ ೪-೫ ಬಗೆಯ ಹಣ್ಣುಗಳನ್ನು ಸೇವಿಸಿ.

ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅಲ್ಲದೆ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತದೆ.

* ನಾರಿನ ಪದರ‍್ಥಗಳನ್ನು ಹೆಚ್ಚಾಗಿ ಸೇವಿಸಿ ನಾರು ಪದರ‍್ಥಗಳು ಜರ‍್ಣಕ್ರಿಯೆಗೆ ಒಳ್ಳೆಯದು. ಜರ‍್ಣಕ್ರಿಯೆ ಚೆನ್ನಾಗಿ ನಡೆದರೆ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

ನಾರಿನ ಪದರ‍್ಥಗಳು ಕಡಿಮೆಯಾದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಬೇಡದ ಕಶ್ಮಲಗಳು ದೇಹದಲ್ಲಿ ಉಳಿದುಕೊಳ್ಳುತ್ತದೆ, ಇದರಿಂದ ಕೂಡ ಕ್ಯಾನ್ರ‍್ಕಣಗಳು ಉಂಟಾಗುವುದು. ಸೊಪ್ಪು ಹಾಗೂ ತರಕಾರಿ ನಿಮ್ಮ ಆಹಾರಕ್ರಮದಲ್ಲಿ ಹೆಚ್ಚಾಗಿ ಬಳಸಿ.

* ಮದ್ಯಪಾನ ಮಿತಿಯಲ್ಲಿರಲಿ ಅತಿಯಾದ ಮದ್ಯಪಾನದಿಂದ ಕರುಳಿನ ಆರೋಗ್ಯ ಹಾಳಾಗುವುದು, ಇದರಿಂದ ಕರುಳಿನಲ್ಲಿರುವ ಜೀವ ಕಣಗಳಿಗೆ ಹಾನಿಯುಂಟಾಗಿ ಕ್ಯಾನ್ಸರ್ ಗಡ್ಡೆಗಳಾಗುವುದು. ಮದ್ಯಪಾನ ಮಿತಿಯಲ್ಲಿ ಮಾಡಿ.

* ಧೂಮಪಾನ ಮಾಡಬೇಡಿ: ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಮಾತ್ರವಲ್ಲ ಕರುಳಿನ ಕ್ಯಾನ್ಸರ್ ಉಂಟಾಗುವುದು.

* ವ್ಯಾಯಾಮ ಮಾಡಿ ದಿನಾ ರ‍್ಧ ಗಂಟೆ ವ್ಯಾಯಾಮ ಮಾಡಿ, ರ‍್ಧ ಗಂಟೆ ನಡೆಯಿರಿ. ಇದರಿಂದ ಇಡೀ ದೇಹದ ಆರೋಗ್ಯಕ್ಕೆ ಒಳ್ಳೆಯದು. ನೀವು ತೋಟದಲ್ಲಿ ಕೆಲಸ ಮಾಡುವವರಾದರೆ ಅಥವಾ ದೈಹಿಕ ಶ್ರಮದ ಕೆಲಸ ಮಾಡುವವರಾದರೆ ನಿಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ, ಆದರೆ ಒಂದೇ ಕಡೆ ಕೂತು ಮಾಡುವ ಕೆಲಸ ಅಥವಾ ಆಫೀಸ್ ರ‍್ಕ್ ಆದರೆ ವ್ಯಾಯಾಮ ಮಾಡಲೇಬೇಕು.

* ಆರೋಗ್ಯಕರ ಮೈ ತೂಕ ಹೊಂದಿ ನೀವು ಆರೋಗ್ಯಕರ ಮೈ ತೂಕ ಹೊಂದುವತ್ತ ಗಮನ ನೀಡಿ. ಆರೋಗ್ಯಕರ ಆಹಾರಕ್ರಮ ಹಾಗೂ ವ್ಯಾಯಾಮ ಆರೋಗ್ಯಕರ ಮೈ ತೂಕ ನೀಡುವುದು. ಇದರಿಂದ ಅನೇಕ ಬಗೆಯ ಕಾಯಿಲೆ ತಡೆಗಟ್ಟಬಹುದು.

Share This Article
error: Content is protected !!
";