ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಬೀದಿ ನಾಟಕ ಪ್ರದರ್ಶನ

Vijayanagara Vani
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಬೀದಿ ನಾಟಕ ಪ್ರದರ್ಶನ

ಕೊಟ್ಟೂರು :ತಾಲೂಕಿನ ನಿಂಬಳಗೇರಿ ವಲಯದ ಸೂಲದಹಳ್ಳಿ ಕಾರ್ಯ ಕ್ಷೇತ್ರದಲ್ಲಿ ಬೀದಿ ನಾಟಕದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲಾಯಿತು.  ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಾರ್ಲಾಪುರ ಕಲಾ ತಂಡ ಬೀದಿ ನಾಟಕ ಪ್ರದರ್ಶನ ನೀಡಿ ನೀರು ಉಳಿಸಿ ಅಭಿಯಾನ ಮತ್ತು ಶೌಚಾಲಯ ಬಳಕೆ ಬಗ್ಗೆ ಹಾಗೂ ಅದರ ಉಪಯುಕ್ತತೆ ಕುರಿತು ಕಾರ್ಯಕ್ರಮ ಮೂಲಕ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಿದರು. ಈ ಕಾರ್ಯಕ್ರಮಕ್ಕೆ  ಯೋಜನಾಧಿಕಾರಿಗಳು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಊರಿನ ಗಣ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಹಾಗೂ ಸೇವಾಪ್ರತಿನಿಧಿ vle ಹಾಗೂ ಸಂಘದ ಸದಸ್ಯರು ಹಾಗೂ ಊರಿನ ಸದಸ್ಯರು ಉಪಸ್ಥಿತರಿದ್ದರು.

- Advertisement -
Ad imageAd image
Share This Article
error: Content is protected !!
";