ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸಿದ್ದಾರೆ.ನೀವು ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದರೆ,ಕುಂಭಮೇಳದೊಂದಿಗೆ, ಪ್ರಯಾಗರಾಜ್ ಸುತ್ತಮುತ್ತಲಿನ ಚಿತ್ರಕೂಟ ಮತ್ತು ರೇವಾ ನಗರಗಳನ್ನು ಭೇಟಿ ಮಾಡುವುದು ಉತ್ತಮ ಆಯ್ಕೆಯಾಗಿದೆ. ಚಿತ್ರಕೂಟದ ಐತಿಹಾಸಿಕ ಸ್ಥಳಗಳು ಮತ್ತು ರೇವಾದ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಿ.
ದೇಶದಲ್ಲಿನ ಹಿಂದೂಗಳಿಗೆ ಈಗ ಹಬ್ಬದ ಸಮಯ ಅಂತಲೇ ಹೇಳಬಹುದು. ನಾಲ್ಕು ಗ್ರಹಗಳು ಸೇರುವ ವಿಶೇಷ ಸಂದರ್ಭ ಇದಾಗಿದೆ ಎನ್ನಲಾಗುತ್ತಿದೆ. ಕೋಟ್ಯಾಂತರ ಜನ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರಯಾಗದಲ್ಲಿ ಸೇರುತ್ತಿದ್ದಾರೆ. ಈ ಮಹಾ ಕುಂಭಮೇಳವನ್ನು ನೀವು ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಇನ್ನು ಈ ಮಹಾಕುಂಭ ಮೇಳದಲ್ಲಿ 40 ಕೋಟಿಗೂ ಹೆಚ್ಚು ಜನ ಭಾಗಹಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಉತ್ತರ ಭಾರತದಲ್ಲಿ ಈಗ ಮೈಕೊರೆಯುವ ಚಳಿ ಇದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಮೈಕೊರೆಯುವ ಚಳಿಯಲ್ಲೂ ಜನ ಸಾಗರವೇ ಪ್ರಯಾಗದಲ್ಲಿ ಸೇರಿದೆ. ಈ ಸಂದರ್ಭದಲ್ಲಿ ನೀವು ಮಹಾ ಕುಂಭಮೇಳದಲ್ಲಿ ಯಾಕೆ ಭಾಗವಹಿಸಬೇಕು ಎನ್ನುವುದಕ್ಕೆ ಪ್ರಮುಖ ಡೀಟೆಲ್ಸ್ ಇಲ್ಲಿದೆ.
ಕುಂಭಮೇಳದಲ್ಲಿ ವಿಶ್ವದಾದ್ಯಂತ ಜನ ಭಾಗವಹಿಸುತ್ತಿದ್ದಾರೆ. ಯಾಕೆಂದರೆ ನಾವು ಜನ್ಮದಲ್ಲಿ ಒಮ್ಮೆ ಮಾತ್ರ ಈ ಮಹಾ ಮೇಳವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಿದೆ. ಈ ಮಹಾಕುಂಭ ಮೇಳದಲ್ಲಿ ನೀವು ಮಾಡಬಹುದಾದ ಪ್ರಮುಖ ವಿಷಯಗಳ ವಿವರ ಇಲ್ಲಿದೆ.
ಪವಿತ್ರ ಸ್ನಾನ: ಮಹಾಕುಂಭ ಮೇಳದ ಕೇಂದ್ರಬಿಂದುವೆಂದರೆ ಪವಿತ್ರ ಸ್ನಾನ ಅಥವಾ ಅಮೃತ ಸ್ನಾನ. ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ 144 ವರ್ಷಗಳಿಗೆ ಒಮ್ಮೆ ನಡೆಯುವ ಈ ಮೇಳದ ವಿಶೇಷವೆಂದರೆ. ಪ್ರಯಾಗರಾಜ್‌ನಲ್ಲಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಒಂದಾಗಿದೆ. ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ವಿಶೇಷವಾಗಿದೆ. ಸಣ್ಣ ದೋಣಿಯ ಮೂಲಕ ಹಿಂದೂ ತೀರ್ಥಯಾತ್ರೆಗಳನ್ನು ಇಲ್ಲಿನ ತ್ರಿವೇಣಿ ಸಂಗಮಕ್ಕೆ ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಇದೆ. ಪುರೋಹಿತರು ಸಹ ಇಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಇಲ್ಲಿ ತ್ರಿವೇಣಿ ಸಂಗಮ ಎನ್ನುವುದು ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಮಾಗಮವಾಗಿದೆ. ಈ ಸಂಗಮದಲ್ಲಿ ನೀವು ಸ್ನಾನ ಮಾಡುವುದರಿಂದ ನಿಮ್ಮ ಪುನರ್‌ಜನ್ಮಗಳ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇದೆ.
ನಾಗಾ ಸಾಧುಗಳನ್ನು ಭೇಟಿ ಮಾಡಿ: ಈ ಕುಂಭ ಮೇಳದಲ್ಲಿ ಸಾವಿರಾರು ಜನ ಸಾಧು – ಸಂತರು ಭಾಗವಹಿಸುತ್ತಾರೆ. ಸಾವಿರಾರು ಜನ ಸಾಧುಗಳನ್ನು ನೀವು ಇಲ್ಲಿ ನೋಡಬಹುದು. ಆದರೆ ಸಾಧುಗಳನ್ನು ನೋಡುವ ಹಾಗೂ ಅವರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ. ಸಾಧುಗಳು ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ನೀವು ಇಲ್ಲಿ ಸಾವಿರಾರು ಜನ ಸಾಧುಗಳನ್ನು ಇಲ್ಲಿ ನೋಡಬಹುದು.
ವಿಶೇಷ ಕಾರ್ಯಕ್ರಮ: ಮಹಾ ಕುಂಭಮೇಳದ ಭಾಗದಲ್ಲಿ ಹಲವು ವಿಶೇಷ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುವುದೇ ವಿಶೇಷವಾಗಿದೆ. ಕೋಟ್ಯಾಂತರ ಜನ ಭಕ್ತಾಧಿಗಳು ಮಹಾಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದು. ಹಲವು ಧಾರ್ಮಿಕ ಪೂಜೆಗಳು ನಡೆಯುತ್ತಿವೆ. ಇದನ್ನು ನೋಡುವುದು ವಿಶೇಷವಾಗಿದೆ. ವಾರಣಾಸಿಗೆ ಹೋಗಬಹುದು: ಇನ್ನು ಪ್ರಯಾಗ್ ರಾಜ್‌ನಿಂದ ಕೆಲವೇ ಕಿ.ಮೀ ದೂರದಲ್ಲಿ ವಾರಣಾಸಿ ಇದೆ. ಕಾಶಿ – ವಾರಣಾಸಿಗೆ ಒಮ್ಮೆಯಾದರೂ ಹೋಗಬೇಕು ಎನ್ನುವುದು ಕೋಟ್ಯಾಂತರ ಹಿಂದೂ ಭಕ್ತರ ಕನಸಾಗಿದೆ. ಉತ್ತರ ಪ್ರದೇಶದ ಈ ಭಾಗದಿಂದ ನೀವು ಕಾಶಿ ಹಾಗೂ ವಾರಣಾಸಿಗೆ ನೀವು ಭೇಟಿ ನೀಡಬಹುದಾಗಿದೆ.
ಚಿತ್ರಕೂಟ: