Ad image

ಈ ಕೀಟ ತಿಂದರೆ ಇಲ್ಲ ತೊಂದರೆ… ಸಿಂಗಾಪುರದಲ್ಲಿ 16 ಜಾತಿಯ ಕೀಟಗಳ ಸೇವನೆಗೆ ಒಪ್ಪಿಗೆ

Vijayanagara Vani
ಈ ಕೀಟ ತಿಂದರೆ ಇಲ್ಲ ತೊಂದರೆ… ಸಿಂಗಾಪುರದಲ್ಲಿ 16 ಜಾತಿಯ ಕೀಟಗಳ ಸೇವನೆಗೆ ಒಪ್ಪಿಗೆ

ಸಿಂಗಾಪುರದ ಆಹಾರ ಪ್ರಾಧಿಕಾರ (ಎಸ್‌ಎಫ್‌ಎ) ಜುಲೈ 8 ರಂದು ಸುಮಾರು 16 ಕೀಟ ಪ್ರಭೇದಗಳನ್ನು ಆಹಾರದಲ್ಲಿ ಬಳಕೆಗೆ ಅನುಮೋದಿಸಿದೆ. ಕ್ರಿಕೆಟ್‌ಗಳು, ಮಿಡತೆಗಳು ಮತ್ತು ಹುಳುಗಳು ಈ ಪಟ್ಟಿಯಲ್ಲಿ ಸೇರಿವೆ.

- Advertisement -
Ad imageAd image

ಹೌಸ್ ಆಫ್ ಸೀಫುಡ್’ ರೆಸ್ಟೋರೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಫ್ರಾನ್ಸಿಸ್ ಇಂಗ್ ಅವರು 30 ಕೀಟಗಳ ಮೆನುವನ್ನು ಸಿದ್ಧಪಡಿಸಿ ಇವುಗಳನ್ನು ಸೇವನೆಗೆ ಅಥವಾ ಆಹಾರದಲ್ಲಿ ಬಳಕೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದರು. ಇವುಗಳ ಪೈಕಿ 16 ವಿವಿಧ ಪ್ರಭೇದಗಳ ಕೀಟಗಳಿಗೆ ಅನುಮೋದನೆ ಸಿಕ್ಕಿದೆ. ಹೀಗಾಗಿ ಇಂದಿನಿಂದ ಸಿಂಗಾಪರ ರೆಸ್ಟೋರೆಂಟ್‌ಗಳಲ್ಲಿ 16 ಬಗೆಯ ಹುಳುಗಳು ಮತ್ತು ಕ್ರಿಕೆಟ್‌ಗಳನ್ನು ಆಹಾರದಲ್ಲಿ ಬಳಸಲಾಗುತ್ತದೆ.

ಅನುಮೋದನೆಯನ್ನು ಪಡೆದ ಮೊದಲ ದಿನವೇ, ರೆಸ್ಟೋರೆಂಟ್ ಕೀಟ-ಆಧಾರಿತ ಭಕ್ಷ್ಯಗಳಿಗಾಗಿ ಕೋರಿ ದಿನಕ್ಕೆ ಐದರಿಂದ ಆರು ಕರೆಗಳನ್ನು ಸ್ವೀಕರಿಸಿದೆ ಎಂದು ಫ್ರಾನ್ಸಿಸ್ ಹೇಳಿದ್ದಾರೆ. ಅನೇಕ ಗ್ರಾಹಕರು ವಿಶೇಷವಾಗಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇಂಥಹ ಕೀಟಗಳ ಖಾದ್ಯಗಳನ್ನು ಸೇವಿಸಲು ಬಯಸುತ್ತಾರೆ. ವಿವಿಧ ಕೀಟಗಳ ರುಚಿ ನೋಡಲು ಇಷ್ಟಪಡುತ್ತಾರೆ. ಹಾಗಾಗಿ ನಾವು ಅವರಿಗೆ ಹಲವು ಆಯ್ಕೆಗಳನ್ನು ನೀಡುತ್ತೇನೆ ಎಂದು ಫ್ರಾನ್ಸಿಸ್ ಖುಷಿಯಿಂದ ಹೇಳಿಕೊಂಡಿದ್ದಾರೆ. ಕೀಟಗಳ ಆಹಾರದ ಮಾರಾಟದಿಂದ ಅವರ ಆದಾಯ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಫ್ರಾನ್ಸಿಸ್ ಅವರು ನಿರೀಕ್ಷಿಸುತ್ತಾರೆ.

ಸ್ಟ್ರೈಟ್ಸ್ ಟೈಮ್ಸ್ ಅಕ್ಟೋಬರ್ 2022 ರಲ್ಲಿ ಸಿಂಗಾಪುರದ ಆಹಾರ ಪ್ರಾಧಿಕಾರ 16 ಕೀಟಗಳ ಸೇವನೆಯನ್ನು ಅನುಮೋದಿಸುವ ಸಾಧ್ಯತೆಯ ಕುರಿತು ಸಾರ್ವಜನಿಕ ಚರ್ಚೆಗಳನ್ನು ಪ್ರಾರಂಭಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ಅನುಮತಿ ಸಿಕ್ಕ ಬೆನ್ನಲ್ಲೆ ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಈ ಕೀಟಗಳ ಸೇವನೆಯನ್ನು ಅನುಮೋದಿಸುವುದಾಗಿ ಸಂಸ್ಥೆಯು ಹೇಳಿತ್ತು. ಆದರೆ ಅದನ್ನು ಈ ವರ್ಷದಲ್ಲಿ ಅನುಮೋದಿಸಲಾಗಿದೆ

ಈ ಸಂದರ್ಭದಲ್ಲಿ ಸಿಂಗಾಪುರದ ಆಹಾರ ಸಂಸ್ಥೆಯು ಮಾನವ ಸೇವಿಸಲು ಕೀಟಗಳನ್ನು ಬೆಳೆಸಲು ಯೋಜಿಸುವವರು ಸಂಸ್ಥೆಯ ಮಾರ್ಗಸೂಚಿಗಳನ್ನು ಪೂರೈಸಬೇಕು ಎಂದು ಹೇಳಿದೆ.

Share This Article
error: Content is protected !!
";