Ad image

169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು ಸೇರಿದಂತೆ ಪತನಗೊಂಡ ವಿಮಾನದಲ್ಲಿ 242 ಪ್ರಯಾಣಿಕರಿದ್ದರು : ಅಧಿಕೃತ ಹೇಳಿಕೆ ನೀಡಿದ ಏರ್ ಇಂಡಿಯಾ

Vijayanagara Vani
169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು ಸೇರಿದಂತೆ ಪತನಗೊಂಡ ವಿಮಾನದಲ್ಲಿ 242 ಪ್ರಯಾಣಿಕರಿದ್ದರು : ಅಧಿಕೃತ ಹೇಳಿಕೆ ನೀಡಿದ ಏರ್ ಇಂಡಿಯಾ

 

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂನ್‌ 12) ಏರ್ ಇಂಡಿಯಾ ವಿಮಾನ ಪತನವಾಗಿದೆ. ಹಾಗಾದ್ರೆ ಈ ವಿಮಾನದಲ್ಲಿ ಯಾವ್ಯಾವ ದೇಶದವರು ಎಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ 242ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತುದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಇದೀಗ ಯಾವ್ಯಾವ ದೇಶದವರು ಎಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು ಎನ್ನುವ ಮಹತ್ವದ ಮಾಹಿತಿ ಸಿಕ್ಕಿದೆ.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ AI-171 ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಂಡನ್‌ಗೆ ಹೊರಟಿದ್ದ ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದ್ದು, ಸುಮಾರು ಮಧ್ಯಾಹ್ನ 1:50ಕ್ಕೆ ಈ ಘಟನೆ ನಡೆದಿದೆ ಎಂದು ಎನ್ನಲಾಗಿದೆ.

ವಿಮಾನದಲ್ಲಿ 242 ಪ್ರಯಾಣಿಕರು:

ಬೋಯಿಂಗ್ 787-8 ಡ್ರೀಮ್‌ಲೈನರ್ ಮಾದರಿಯ ಈ ಮಧ್ಯಮ ಗಾತ್ರದ ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರು ಇದ್ದರು. ಈ ಪೈಕಿ 169 ಮಂದಿ ಭಾರತೀಯರು, 53 ಮಂದಿ ಬ್ರಿಟಿಷ್ ಪ್ರಜೆಗಳು, ಒಬ್ಬ ಕೆನಡಾ ಪೌರ, ಮತ್ತು 7 ಮಂದಿ ಪೋರ್ಚುಗೀಸ್ ಮೂಲದವರು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ

ಟೇಕ್ಆಫ್ ನಂತರವೇ MAYDAY ಕರೆ: ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 23ರಿಂದ ಟೇಕ್ಆಫ್ ಆದ ಈ ವಿಮಾನವು 625 ಅಡಿ ಎತ್ತರ ತಲುಪಿದಾಗ MAYDAY ಕರೆ ನೀಡಿತು. ಆದರೆ ನಂತರ ವಿಮಾನವು ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಂಪರ್ಕದಿಂದ ದೂರವಾಯಿತು. ಅಪಘಾತದ ಸ್ಥಳವು ಅಹಮದಾಬಾದ್‌ನ ಮೇಘಾನಿ ನಗರ ಪ್ರದೇಶದ ಬಳಿ ಪತ್ತೆಯಾಯಿತು.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ: ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. 50 ಕ್ಕೂ ಹೆಚ್ಚು ಬ್ರಿಟಿಷ್ ನಾಗರಿಕರು ಈ ವಿಮಾನದಲ್ಲಿ ಇದ್ದರು ಎಂಬ ವರದಿಗಳು ಹೊರಬಿದ್ದಿವೆ. ಪ್ರಮುಖವಾಗಿ, ಮಾಜಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಈ ವಿಮಾನದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದು ವರದಿಯಾಗಿದೆಯಾದರೂ, ಅಧಿಕೃತ ದೃಢೀಕರಣ ಇನ್ನೂ ನಿರೀಕ್ಷೆಯಲ್ಲಿದೆ

ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪೈಲಟ್‌ಗಳ ವಿವರ: ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಹಾಗೂ 10 ಕ್ಯಾಬಿನ್ ಸಿಬ್ಬಂದಿ ಸೇರಿ ಒಟ್ಟು 243 ಮಂದಿ ಇದ್ದರು. ಕ್ಯಾಪ್ಟನ್ ಸುಮೀತ್ ಸಭರ್ವಾಲ್, 8200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದು, ಫಸ್ಟ್ ಆಫಿಸರ್ ಕ್ಲೈವ್ ಕುಂದರ್ ಸಹ-ಪೈಲಟ್ ಆಗಿದ್ದರು. ಅವರಿಬ್ಬರೂ ತಕ್ಷಣದ MAYDAY ಕರೆ ನೀಡಿದರೂ ನಂತರ ಸಂಪರ್ಕ ಕಳಕೊಂಡರು

DGCA ತನಿಖೆ ಆರಂಭ: ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಪಘಾತದ ತನಿಖೆಗೆ ತನಿಖಾ ತಂಡವನ್ನು ನೇಮಿಸಿದೆ. ವಿಮಾನವು ಏಕೆ ಕೇವಲ 625 ಅಡಿ ಎತ್ತರದಲ್ಲಿ MAYDAY ಕರೆ ನೀಡಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕಲಾಗುತ್ತಿದೆ. ವಿಮಾನವು ಅಪಘಾತಕ್ಕೀಡಾದ ಸಮಯದಲ್ಲಿ 174 ನಾಟ್ ವೇಗದಲ್ಲಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರ ಸಹಾಯಕ್ಕಾಗಿ ವಿಶೇಷ ಹಾಟ್‌ಲೈನ್ಆಪತ್ಕಾಲೀನ ಪರಿಸ್ಥಿತಿಯಲ್ಲಿ ಸಂಬಂಧಿತವರಿಗೆ ತಕ್ಷಣದ ಮಾಹಿತಿ ನೀಡಲು ಏರ್ ಇಂಡಿಯಾ 1800 5691 444 ಎಂಬ ಸಹಾಯವಾಣಿ ನಂಬರ್ ಅನ್ನು ಬಿಡುಗಡೆ ಮಾಡಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರ ಸಂಬಂಧಿಕರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ಏರ್ ಇಂಡಿಯಾ ಅಧಿಕೃತ ಪ್ರತಿಕ್ರಿಯೆ: ಏರ್ ಇಂಡಿಯಾ ತಮ್ಮ ಅಧಿಕೃತ ಪ್ರಕಟಣೆಯಲ್ಲಿ, “ಅಹಮದಾಬಾದ್-ಲಂಡನ್ ಗ್ಯಾಟ್‌ವಿಕ್ ನಡುವಿನ AI171 ವಿಮಾನವು ಇಂದು ಒಂದು ಅಪಘಾತದಲ್ಲಿ ಭಾಗಿಯಾಗಿದ್ದು, ನಾವು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ” ಎಂದು ತಿಳಿಸಿದೆ. ಅವರು ತಮ್ಮ X (ಹಿಂದೆ Twitter) ಖಾತೆಯಲ್ಲಿ ನವೀಕರಣಗಳನ್ನು ನೀಡಲು ಬದ್ಧರಾಗಿದ್ದಾರೆ.

https://x.com/airindia/status/1933100970399166759?ref_src=twsrc%5Etfw%7Ctwcamp%5Etweetembed%7Ctwterm%5E1933100970399166759%7Ctwgr%5E1f35da5938c957609fa2034891df781abdbabc4e%7Ctwcon%5Es1_c10&ref_url=https%3A%2F%2Fkannada.goodreturns.in%2Fnews%2Fair-india-flight-ai171-crashes-near-ahmedabad-30-dead-rescue-ops-underway-031573.html

 

 

 

ಕೇಂದ್ರ ಸರ್ಕಾರದ ತ್ವರಿತ ಸ್ಪಂದನೆ: ಘಟನೆಯ ಬಗ್ಗೆ ತಿಳಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಕ್ಷಣ ಗುಜರಾತ್ ಮುಖ್ಯಮಂತ್ರಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಂಪರ್ಕ ನಡೆಸಿದರು. ಅಗತ್ಯವಿರುವ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಅವರು ಭರವಸೆ ನೀಡಿದರು. ಅಪಘಾತದ ತೀವ್ರತೆ ಕಂಡು ಕೇಂದ್ರ ಮತ್ತು ರಾಜ್ಯ ಮಟ್ಟದ ಸಂಯುಕ್ತ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ: ವಿಮಾನ ಅಪಘಾತದ ಬಳಿಕ, ಅಹಮದಾಬಾದ್ ವಿಮಾನ ನಿಲ್ದಾಣದ ಎಲ್ಲಾ ನಿರ್ಗಮನಾ ಮತ್ತು ಆಗಮನಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ನಿಲ್ದಾಣವನ್ನು ಸಂಪೂರ್ಣವಾಗಿ ಮೀಸಲಾಗಿಡಲಾಗಿದೆ.

Share This Article
error: Content is protected !!
";