Ad image

ಮಂತ್ರಿ ಮಂಡಲದಲ್ಲಿ ಶಾಸಕ ಪುಟ್ಟ ರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನಿಡುವಂತೆ ಉಪ್ಪಾರ ಸಮಾಜದ ಮುಖಂಡರಿಂದ ಮನವಿ

Vijayanagara Vani
ಮಂತ್ರಿ ಮಂಡಲದಲ್ಲಿ ಶಾಸಕ ಪುಟ್ಟ ರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನಿಡುವಂತೆ ಉಪ್ಪಾರ ಸಮಾಜದ ಮುಖಂಡರಿಂದ ಮನವಿ

ಬಳ್ಳಾರಿ: ಜೂ 13 ಮುಂಬರುವ ಅಧಿವೇಶನದಲ್ಲಿ ಉಪ್ಪಾರ ಸಮುದಾಯದ ಏಕೈಕ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವರಾದ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಹಿಂದುಳಿದ ಜನಾಂಗದವರಿಗೆ ಆಧ್ಯತೆಯನ್ನು ನೀಡಬೇಕೆಂದು ಉಪ್ಪಾರ ಸಮಾಜದ ಮುಖಂಡರಾದ ಕೊಳಗಲ್ಲು ಎರ್ರಿಸ್ವಾಮಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಅವರು ಇಂದು ನಗರದ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮುದಾಯ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು ರಾಜ್ಯದ 33 ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ನಿರ್ಣಾಯಕ ಮತದಾರರಾಗಿರುತ್ತಾರೆ. ಆದರೆ ಇಲ್ಲಿಯವರೆಗೆ ಅಂದರೆ ಸುಮಾರು 80ರ ದಶಕದಲ್ಲಿ ಸಂಡೂರಿನ ದಿವಂಗತ ಭೂಪತಿ ಅವರನ್ನು ಬಿಟ್ಟರೆ ಚಾಮರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪುಟ್ಟರಂಗಶೆಟ್ಟಿಯವರು ಸತತವಾಗಿ ನಾಲ್ಕೂ ಬಾರಿ ಗೆಲ್ಲುವ ಮೂಲಕ ಸೊಲಿಲ್ಲದ ಸರ್ದಾರೆಂದು ಪ್ರಖ್ಯಾತಿ ಪಡೆದಿದ್ದು ಅವರಿಗೆ ಘನತೆವೆತ್ತ ಸರಕಾರ ಸಚಿವ ಸ್ಥಾನನಿಡದೆ ಇರುವುದು ಉಪ್ಪಾರ ಸಮಾಜಕ್ಕೆ ಅನ್ಯಾಯವನ್ನು ಮಾಡಲಾಗಿದೆ ಎಂದರು.

ಈಗಲಾದರು ನಮ್ಮ ಸಮಾಜದ ಸೊಲಿಲ್ಲದ ಸರದಾರ ನಿಷ್ಟಾವಂತ ಶಾಸಕರಾದ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿ ಸಮಪಾಲು ಸಮಬಾಳು ಎಂಬ ಧ್ಯೆಯವಾಕ್ಯವನ್ನು ಸಾಬೀತು ಮಾಡಬೇಕೆಂದು ರಾಜ್ಯದ ಅಜಾತಶತ್ರು, ಬಡವರ ಭಾಗ್ಯ ವಿಧಾತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಮನವಿ ಮಾಡಿದ್ದಾರೆ.

Share This Article
error: Content is protected !!
";