Ad image

ತಾಲೂಕಿನ ಹೆರಕಲ್ ಗ್ರಾಮದಲ್ಲಿರುವ ಶ್ರೀ ಮರಿ ಶಿವಯೋಗಿಗಳ ಮಠದಲ್ಲಿ ಆರಂಭಿಸಲಾದ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿ ಪುರಾಣ ಪ್ರಾರಂಭ

Vijayanagara Vani
ತಾಲೂಕಿನ ಹೆರಕಲ್ ಗ್ರಾಮದಲ್ಲಿರುವ ಶ್ರೀ ಮರಿ ಶಿವಯೋಗಿಗಳ ಮಠದಲ್ಲಿ ಆರಂಭಿಸಲಾದ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿ ಪುರಾಣ  ಪ್ರಾರಂಭ

ಸಿರುಗುಪ್ಪ ಎಪ್ರಿಲ್. 28. ಸಜ್ಜಲಗುಡ್ಡದ ಶರಣಮ್ಮ ತಾಯಿ ಅನೇಕ ಪವಾಡಗಳ ಮೂಲಕ ಭಕ್ತರನ್ನು ರಕ್ಷಿಸಿದ ಮಹಾ ಶರಣೆ ಎಂದು  ಕಲ್ಯಾಣ ಮಠದ ಶ್ರೀ ಕಲ್ಯಾಣ ಮಹಾಸ್ವಾಮಿಗಳು ತಿಳಿಸಿದರು.

 ತಾಲೂಕಿನ ಹೆರಕಲ್ ಗ್ರಾಮದಲ್ಲಿರುವ ಶ್ರೀ ಮರಿ ಶಿವಯೋಗಿಗಳ ಮಠದಲ್ಲಿ ಆರಂಭಿಸಲಾದ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು ಲಿಂಗೈಕ್ಯ ಚಿದಾನಂದಯ್ಯ ತಾತನವರ ಸಂಕಲ್ಪದಂತೆ ವರ್ಷ ಅವರ ಅನುಪಸ್ಥಿತಿಯಲ್ಲಿ ಪುರಾಣ ಪ್ರವಚನ ಕಾರ್ಯಕ್ರಮವನ್ನು  ಶ್ರೀ ಭುವನೇಶ್ವರಿ ಅಮ್ಮನವರ ನೇತೃತ್ವದಲ್ಲಿ ನೆರವೇರುತ್ತಿರುವುದು ಸಂತೋಷದ ವಿಷಯವಾಗಿದೆ. ಸಮಾಜದಲ್ಲಿ ಸಜ್ಜಲಗುಡ್ಡದ ಶರಣಮ್ಮನಂತೆ ಅನೇಕ ಮಹಿಳೆಯರು ಸಾಧನೆಗೈದು ಮಹಾತ್ಮರಾಗಿದ್ದಾರೆ.

 ಸಜ್ಜಲಗುಡ್ಡದ ಶರಣಮ್ಮ. ಆಧೋನಿ ಲಕ್ಷ್ಮಮ್ಮ . ರಾಯಚೂರು ಹನುಮಂತವ್ವ ಅನೇಕ ಶರಣರು ಆಧ್ಯಾತ್ಮದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಬೆಳಕನ್ನು ನೀಡಿದವರಾಗಿದ್ದಾರೆ. ಶರಣರ ಬದುಕು ಮತ್ತು ಅವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ,ಶಿವಯೋಗಿ ಶಿವಾಚಾರ್ಯರು,ಗುರು ನೀಲಕಂಠಾರ್ಯ ಸ್ವಾಮೀಜಿ,ಇದ್ದರು ಪುರಾಣ ಪ್ರವಚನಕಾರ ಪ್ರಭಯ್ಯ ಶಾಸ್ತ್ರಿ , ಸಂಗೀತಗಾರ  ಜಗನ್ನಾಥ್ ಗವಾಯಿ, ತಬಲವಾದಕ ಮೌನೇಶ ಆಚಾರ ಮತ್ತು ವಿವಿಧ ಗ್ರಾಮಗಳ ಭಕ್ತರು ಇದ್ದರು.

Share This Article
error: Content is protected !!
";