ದಾಳಿಯ ನಂತರ ಡೊನಾಲ್ಡ್ ಟ್ರಂಪ್ ತನ್ನ ಮುಷ್ಟಿಯನ್ನು ತೋರಿಸಿದ್ದು ಏಕೆ?

Vijayanagara Vani
ದಾಳಿಯ ನಂತರ ಡೊನಾಲ್ಡ್ ಟ್ರಂಪ್ ತನ್ನ ಮುಷ್ಟಿಯನ್ನು ತೋರಿಸಿದ್ದು ಏಕೆ?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಕೊರ ಟ್ರಂಪ್‌ ಗುರಿಯಾಗಿಸಿ ದಾಳಿ ನಡೆಸಿದ್ದು, ಅವರ ಮುಖಕ್ಕೆ ಗಾಯವಾಗಿದೆ. ದಾಳಿಯಿಂದಾಗಿ ಟ್ರಂಪ್‌ ಅವರ ಕಿವಿ ಹಾಗೂ ಮುಖದ ಮೇಲೆ ರಕ್ತ ಕಾಣಿಸಿಕೊಂಡಿದೆ. ಸಿಕ್ರೇಟ್‌ ಸರ್ವಿಸ್ ಏಜೆಂಟರು ಟ್ರಂಪ್‌ ಅವರನ್ನು ಸುತ್ತು ವರೆದು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ದಾಳಿಯಲ್ಲಿ ಟ್ರಂಪ್‌ ಅವರನ್ನು ಸುತ್ತು ವರೆದು ರಕ್ಷಿಸುವಲ್ಲಿ ಪ್ರತಿ ದಾಳಿ ನಡೆಸಿ ದಾಳಿಕೋರನನ್ನು ಕೊಂದಿದ್ದಾರೆ. ಇದೇ ವೇಳೆ ಟ್ರಂಪ್ ಅಭಿಮಾನಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಅಭಿಮಾನಿ ಗಾಯಗೊಂಡಿದ್ದಾರೆ. ಈ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಟ್ರಂಪ್‌ ಮೇಲೆ ದಾಳಿ ನಡೆಸುವ ಮೊದಲು ದಾಳಿಕೋರ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದನು. 1981ರ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಆಗಲಿ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಆಗಲಿ ಗುಂಡಿನ ದಾಳಿ ನಡೆದಿದ್ದು, ಇದೆ ಮೊದಲು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈ ದಾಳಿಯನ್ನು ಖಂಡಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕದಲ್ಲಿ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳ ಕಾವು ಬಿಸಿ ಪಡೆಯುತ್ತಿದ್ದಂತೆ ಟ್ರಂಪ್ ಮೇಲಿನ ದಾಳಿ ಹಲವು ಸಂಶಯಗಳಿಗೆ ಕಾರವಾಗಿದೆ. ಟ್ರಂಪ್‌ ಸಭೆಯಲ್ಲಿ ಸಭೀಕರನ್ನು ಉದ್ದೇಶಿಸಿ ಮಾತನಾಡುವಾಗ ದಾಳಿಕೋರ ದಾಳಿ ನಡೆಸಿದ್ದಾನೆ. ಟ್ರಂಪ್‌ ಮುಷ್ಠಿ ತೋರಿಸಿದ್ದು ಏಕೆ? ದಾಳಿಯ ವೇಳೆ ದಾಳಿಕೋರ ಎರಡು ಗುಂಡುಗಳನ್ನು ಹಾರಿಸಿದ್ದಾನೆ. ಈ ಗುಂಡುಗಳ ಬಾಯಿ ಹಾಗೂ ಕಿವಿಯ ಹತ್ತಿರ ತಲುಗಿ ರಕ್ತ ಕಾಣಿಸಿಕೊಂಡಿತು. ತಕ್ಷಣವೇ ಟ್ರಂಪ್‌ ಬಾಯಿಯ ಹತ್ತಿರ ಕೈ ಹಿಡಿದು ಓಹ್ ಎಂದು ಭಾಷಣ ಮಾಡುತ್ತಿದ್ದಲ್ಲಿ ಅಡಿಗಿಕೊಂಡರು.

ಬಳಿಕ ಸಿಕ್ರೇಟ್‌ ಏಜೆಂಟರು ಬಂದು ಅವರನ್ನು ಸುತ್ತು ವರೆದು ರಕ್ಷಣೆ ನೀಡಿದರು. ಈ ವೇಳೆ ಟ್ರಂಪ್‌ ಮುಷ್ಠಿ ಎತ್ತಿ ಗಾಳಿಯಲ್ಲಿ ಗುದ್ದಿದರು. ವಾಹನ ಏರುವ ಮುನ್ನವೂ ಟ್ರಂಪ್‌ ಡೊನಾಲ್ಡ್ ಟ್ರಂಪ್ ಗುಂಪಿನ ಕಡೆಗೆ ತಿರುಗಿ ತನ್ನ ಮುಷ್ಟಿಯನ್ನು ತೋರಿಸಿದರು. ಹೀಗೆ ಮುಷ್ಠಿ ತೋರಿಸುವ ಮೂಲಕ ನಾನು ಯಾವುದಕ್ಕೂ ವಿಚಲಿತನಾಗುವುದಿಲ್ಲ ಎಂದು ಸಂದೇಶ ರವಾನಿಸಿದರು. ಇದೇ ವೇಳೆ ತಮ್ಮ ರಕ್ಷಿಸಿದ ಸಿಕ್ರೇಟ್‌ ಏಜೆಂಟ್‌ಗಳಿಗೆ ಟ್ರಂಪ್‌ ಧನ್ಯವಾದ ತಿಳಿಸಿದರು. ವರದಿಯ ಪ್ರಕಾರ ಟ್ರಂಪ್‌ ವೈದ್ಯರ ಮೇಲ್ವಿಚಾರಣೆಯಲ್ಲಿ ಚೇತರಿಕೆ ಕಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಅಮೆರಿಕಾದ ಧ್ವಜದ ಮುಂದೆ ತನ್ನ ಮುಷ್ಟಿಯನ್ನು ಎತ್ತುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಮೆರಿಕವನ್ನು ಉಳಿಸಲು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ದಾಳಿಯನ್ನು ಖಂಡಿಸಿರುವ ಬೈಡನ್‌ 1981 ರಲ್ಲಿ ಡೊನಾಲ್ಡ್ ರೇಗನ್ ಹತ್ಯೆಯ ನಂತರ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಇದು ಮೊದಲ ಹತ್ಯೆಯ ಪ್ರಯತ್ನವಾಗಿದೆ. 4 ತಿಂಗಳ ನಂತರ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು ನಾವು ನಿಮಗೆ ಹೇಳೋಣ. ಒಂದು ದೇಶವಾಗಿ ನಾವು ಈ ಘಟನೆಯನ್ನು ಖಂಡಿಸಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಬಿಡೆನ್ ಅವರು ಟ್ರಂಪ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಗುಂಡಿನ ದಾಳಿಯನ್ನು ಖಂಡಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!