Ad image

ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಹೊಸ ಐತಿಹಾಸಿಕ ದಾಖಲೆ

Vijayanagara Vani
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಹೊಸ ಐತಿಹಾಸಿಕ ದಾಖಲೆ

ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಹೊಸ ಐತಿಹಾಸಿಕ ದಾಖಲೆ ನಿರ್ಮಿಸುವ ಅಂಚಿನಲ್ಲಿದ್ದಾರೆ. ಐಪಿಎಲ್ 2024 ಮುಂಬರುವ ಪಂದ್ಯದಲ್ಲಿ ಬೃಹತ್ ಬ್ಯಾಟಿಂಗ್ ಮೈಲಿಗಲ್ಲು ಸಾಧಿಸುವ ಅವಕಾಶ ವಿರಾಟ್ ಕೊಹ್ಲಿಗಿದೆ.ವಿರಾಟ್ ಕೊಹ್ಲಿ ಕ್ರಿಕೆಟ್ ಚುಟುಕು ಸ್ವರೂಪದಲ್ಲಿ ತಮ್ಮ ಸ್ಟ್ರೈಕ್ ರೇಟ್ ಪ್ರಶ್ನಿಸಿದಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

- Advertisement -
Ad imageAd image

ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ಬಲಗೈ ಅನುಭವಿ ಬ್ಯಾಟರ್ ಅತಿ ಹೆಚ್ಚು ರನ್ ಗಳಿಸಿಆರೆಂಜ್ ಕ್ಯಾಪ್ಹೋಲ್ಡರ್ ಆಗಿದ್ದಾರೆ. ವಿರಾಟ್ ಕೊಹ್ಲಿ ಆಡಿದ 14 ಇನ್ನಿಂಗ್ಸ್ಗಳಲ್ಲಿ 64.36 ಸರಾಸರಿ ಮತ್ತು 155.60 ಸ್ಟ್ರೈಕ್ ರೇಟ್ನಲ್ಲಿ 708 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.ಮೊದಲ 8 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಏಳು ಸೋಲುಗಳ ನಂತರ, ಆರ್ಸಿಬಿ ತಂಡದ ಪುನರಾಗಮನದಲ್ಲಿ 35 ವರ್ಷದ ಬ್ಯಾಟರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಐಪಿಎಲ್ 2024 ಪ್ಲೇಆಫ್ ಹಂತವನ್ನು ತಲುಪಲು ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು ಕೊನೆಯ ಆರು ಪಂದ್ಯಗಳಲ್ಲಿ ಸತತ ಗೆಲುವು ಪಡೆದುಕೊಂಡಿದೆ.

ಇದು 14 ಅಂಕಗಳು ಮತ್ತು +0.459 ನೆಟ್ ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆಯಲು ನೆರವಾಯಿತು. ಆರ್ಸಿಬಿ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಲು ಮತ್ತು ಕ್ವಾಲಿಫೈಯರ್ 2 ತಲುಪಲು ಎದುರು ನೋಡುತ್ತಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ತಂಡವು ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲನ್ನು ಅನುಭವಿಸಿತು ಮತ್ತು ಒಂದು ಮಳೆಯಿಂದಾಗಿ ರದ್ದಾಗಿದೆ.

8 ಶತಕಗಳು ಮತ್ತು 55 ಅರ್ಧಶತಕಗಳು ಒಳಗೊಂಡಂತೆ 38.69 ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್ನಲ್ಲಿ 7971 ರನ್ ಗಳಿಸಿದ್ದಾರೆ. ಇನ್ನು 222 ಪಂದ್ಯಗಳಲ್ಲಿ 35.25 ಸರಾಸರಿಯಲ್ಲಿ 6769 ರನ್ ಗಳಿಸಿರುವ ಶಿಖರ್ ಧವನ್ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನಂತರ ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ಇದ್ದಾರೆ. ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ದಾಖಲೆಯನ್ನು ಬ್ಯಾಟರ್ಗಳು ಶೀಘ್ರದಲ್ಲೇ ಮುರಿಯುವ ಸಾಧ್ಯತೆಯಿಲ್ ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ತಂಡ ಮೂರು ಬಾರಿ (2009, 2011, ಮತ್ತು 2016ರಲ್ಲಿ) ಐಪಿಎಲ್ ಫೈನಲ್ ತಲುಪಿದ್ದಾರೆ. ಆದರೆ ಇನ್ನೂ ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. 2016ರಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ 81ಕ್ಕಿಂತ ಹೆಚ್ಚು ಸರಾಸರಿ ಮತ್ತು 152 ಸ್ಟ್ರೈಕ್ ರೇಟ್ನಲ್ಲಿ ದಾಖಲೆಯ 973 ರನ್ ಗಳಿಸಿದ್ದರು. ಆಗ 113 ರನ್ಗಳ ಅತ್ಯುತ್ತಮ ಸ್ಕೋರ್ನೊಂದಿಗೆ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದರು.
ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದರು. ಐಪಿಎಲ್ನಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ಗಳ ತಮ್ಮದೇ ದಾಖಲೆಯನ್ನು ಹಿಂದಿಕ್ಕಲು ಅನುಭವಿ ಬ್ಯಾಟರ್ಗೆ ಇನ್ನೂ 266 ರನ್ಗಳ ಅಗತ್ಯವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಭಾವ್ಯ ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಿದರೆ ಮೈಲಿಗಲ್ಲು ಸಾಧಿಸುವ ಅವಕಾಶವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ.

Share This Article
error: Content is protected !!
";