Ad imageAd image

ಬಸವಣ್ಣ ಕ್ಯಾಂಪ್ ಮಾರ್ಗದಲ್ಲಿ 450 ಬತ್ತದ ಮೂಟೆ ತುಂಬಿದ ಲಾರಿ ಪಲ್ಟಿ.

Vijayanagara Vani

ಕಾರಟಗಿ : ಸಮೀಪದ ಬಸವಣ್ಣ ಕ್ಯಾಂಪ್  ಗೆ ಹೋಗುವ ಮಾರ್ಗ ಮಧ್ಯದಲ್ಲಿ 450  ಕ್ಕೂ ಅಧಿಕ ಬತ್ತದ ಮೂಟೆ ತುಂಬಿದ ಲಾರಿಯೊಂದು  ಚಾಲಕನ ನಿಯಂತ್ರಣ ತಪ್ಪಿ ka.36,7378 ನಂಬರಿನ  ಲಾರಿ ಯೊಂದು ಹುಲ್ಲಿನ ಬಣವೆಗೆ  ತಾಗಿ ಪಲ್ಟಿಯಾಗಿದೆ  ಈ ಲಾರಿಯು ಹಗರಿಬೊಮ್ಮನಹಳ್ಳಿಯಿಂದ ಕಾರಟಗಿಯ ಲಕ್ಷ್ಮಿ ವಿನಾಯಕ ರೈಸ್ ಮಿಲ್ಲಿಗೆ ಹೊರಟಿದ್ದು, ವ್ಯಾಪಾರದ ನಂತರ  ವೆಬ್ರಿಡ್ ಮಾಡಿಸಿಕೊಂಡು ನಂತರ ಬಸವಣ್ಣ ಕ್ಯಾಂಪ್ ಹೋಗುವ ಮಾರ್ಗದಲ್ಲಿರುವ ಗೋಡೌನ್ ಗೆ ರವಾನಿಸುವ  ವೇಳೆ ಈ ಘಟನೆ ಸಂಭವಿಸಿದೆ

- Advertisement -
Ad imageAd image

ಅದೃಷ್ಟವಶಾತ್ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ  ಪಾರಾಗಿದ್ದಾನೆ, ಸ್ಥಳೀಯ  ರೈತ ಯುವ ಮುಖಂಡ ಸಿದ್ದು ಪನ್ನಾಪುರವರು ಮಾತನಾಡಿ ಸುಮಾರು ವರ್ಷಗಳಿಂದ ಅತಿ ಭಾರವಾದ ಲಾರಿಗಳಿಗೆ ನಿಗದಿಪಡಿಸಿದ ಭಾರಕ್ಕಿಂತ ಹೆಚ್ಚಿನ  ಭಾರ ಹಾಕಿಕೊಂಡು ಚಲಿಸುವುದರಿಂದ ಇಂತಹ ಅಪಘಾತಗಳಾಗುತ್ತವೆ, ಇವುಗಳಿಂದ ರಸ್ತೆಗಳು ಕುಸಿದು ಹಾಳಾಗುತ್ತಿವೆ, ಕಾರಣ ರಸ್ತೆಗಳು ಅಗಲೀಕರಣವಾಗಬೇಕಾಗಿದೆ,

ಮತ್ತು ಗೋಡೌನ್ಗಳಲ್ಲಿ ಬತ್ತ ಸ್ಟಾಕ್ ಮಾಡುವಂತಹ ದಲಾಲಿ ವರ್ತಕರಾಗಲಿ,ದಲಾಲಿ ವರ್ತಕರಾಗಲಿ, ಲಾರಿಯಲ್ಲಿ  ನಿಗದಿತವಾಗಿ ಬತ್ತ ಹಾಕಿಕೊಂಡು ರವಾನಿಸಬೇಕು, ಈ ನಿಯಮವನ್ನು ಪಾಲಿಸದಿದ್ದಲ್ಲಿ  ಅಪಘಾತವಾಗಿ ಸಾವು ನೋವು ಸಂಭವಿಸಿದಲ್ಲಿ ಬತ್ತದ ಮಾಲಕರು ಖರೀದಿಸಿದ  ಮಿಲ್ಲರ್ಸ್ ಮತ್ತು ದಲಾಲಿ ವರ್ತಕರಾಗಲಿ ಕಾರಣರಾಗುತ್ತಾರೆ  ಎಂದರು,ಈ ಸಂದರ್ಭದಲ್ಲಿ ಗ್ರಾಮಗಳ ಯುವಕರು ರೈತರು ಗ್ರಾಮದ ಹಿರಿಯರು ಇದ್ದರು

 

WhatsApp Group Join Now
Telegram Group Join Now
Share This Article
error: Content is protected !!