Ad image

ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನನೀಡಿದ ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತೇಶ್ವರ ಸ್ವಾಮೀಜಿ.

Vijayanagara Vani
ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನನೀಡಿದ ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತೇಶ್ವರ ಸ್ವಾಮೀಜಿ.

ಶರಣರು, ಸಂತರು ವಿಶಿಷ್ಟ ಸ್ಥಾನ ಪಡೆದಿದ್ದಾರೆ ಭಾರತಿಯ ಸಂಸ್ಕೃತಿಯಲ್ಲಿಶರಣರು, ಸಂತರು, ದಾಸರು ಅತ್ಯಂತ ವಿಶಿಷ್ಟ ಸ್ಥಾನಪಡೆದವರು, ಮಾನವನ ಮನಸ್ಸಿಗೆ ಮುದವನ್ನು ನೀಡುವಅನುಭಾವವನ್ನು ದಯಪಾಲಿಸಿದವರೆ ಶರಣರು ಮತ್ತುಸಂತರು. ಅವರಿಂದಲೇ ಮಾನವೀಯತೆ ಮತ್ತು ಲೋಕ ಹಿತಭಾವನೆಗಳು ಪ್ರಪಂಚದಲ್ಲಿ ಉಳಿದುಕೊಂಡಿವೆ ಎಂದು ಹಾಲ್ವಿಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತೇಶ್ವರ ಸ್ವಾಮೀಜಿತಿಳಿಸಿದರು.ತಾಲೂಕಿನ ಹೆರಕಲ್ಲು ಗ್ರಾಮದಲ್ಲಿ ನಡೆದ ಶಿವಶರಣೆಸಜ್ಜಲಗುಡ್ಡದ ಶರಣಮ್ಮ ಪುರಾಣ ಪ್ರವಚನಕಾರ್ಯಕ್ರಮದಲ್ಲಿ ಆಶೀರ್ವಚನನೀಡಿದ ಶ್ರೀಗಳು ಅವರುಅಸಂಭವವಾದುದನ್ನು ಸಂಭವಾಗಿಸುವ ಅಸಾಧಾರಣ ಶಕ್ತಿಉಳ್ಳವರು, ಅವರೆಲ್ಲರು ಪರಮಾತ್ಮ ತತ್ವವನ್ನು ಆರಾಧಿಸಿವಿಶ್ವಾತ್ಮರಾದವರು. ಅವರ ಹೃದಯವು ಪ್ರೇಮ,ಕರುಣೆಗಳ ಅಪಾರ ಸಾಗರ, ಅವರ ಕರ್ಮಗಳೆಲ್ಲಾ, ನಿಷ್ಕಾಮಕರ್ಮಗಳು, ಎಲ್ಲೆಲ್ಲಿಯೂ ಭಗವಂತನನ್ನು ಕಾಣುವ ಅವರುಉದಾರ ಚರಿತರು, ವಿಶ್ವಕುಟುಂಬಿಗಳು.ಸಂತ, ಭಗವಂತ ಒಂದೇ ಎಂಬ ಮಾತು ಬಹುಪ್ರಚಲಿತವಾಗಿದ್ದರೂ ಕಣ್ಣಿಗೆ ಕಾಣದ ಭಗವಂತನಿಗಿAತಲೂಲೋಕದ ಜನರೊಡನೆ ಬದುಕು ಸಾಗಿಸುವ ಸಂತ ಶರಣರುಭಗವಂತನಿಗಿAತಲೂ ಮಿಗಿಲಾದವರು. ಶರಣರ, ಸಂತರವಾಣಿಯಲ್ಲಿ ವಿಶ್ವವನ್ನೇ ಆಕರ್ಷಿಸುವ ಅದ್ಬುತ ಶಕ್ತಿ ಇರುತ್ತದೆ.ಅದಕ್ಕೆ ಕಾರಣ ಅವರ ಮಾತು ಮತ್ತು ಕೃತಿಗಳಲ್ಲಿರುವಸಮನ್ವಯ, ಹೃದಯವನ್ನು ಹೃದಯದಿಂದಲೇ ಗೆಲ್ಲಬೇಕುಎಂದು ಹೇಳುತ್ತಾರೆ ಶರಣರು, ಸಂತರು ಎಂದು ಹೇಳಿದರು.ಶ್ರೀ ಸಿದ್ದರಾಮೇಶ್ವರ ಶರಣರು ಮತ್ತು ವಿವಿದಗ್ರಾಮಗಳ ಭಕ್ತರು ಇದ್ದರು.

Share This Article
error: Content is protected !!
";