ಲಾರಿಗಳ ಹಿಂದೆ Horn Ok Please ಎಂದು ಬರೆಸುವುದು ಕಾಮನ್ ಆಗಿಬಿಟ್ಟಿದೆ.ಬರಹ ಏಕಿರುತ್ತೆ……?

Vijayanagara Vani
ಲಾರಿಗಳ ಹಿಂದೆ Horn Ok Please ಎಂದು ಬರೆಸುವುದು ಕಾಮನ್ ಆಗಿಬಿಟ್ಟಿದೆ.ಬರಹ ಏಕಿರುತ್ತೆ……?

ನಮ್ಮ ಸುತ್ತಲು ನಡೆಯುವ ಹಲವಾರು ವಿಚಾರಗಳು ನಮ್ಮ ಕಣ್ಣಿಗೆ ಬಿದ್ದರೂ ಗಮನಕ್ಕೆ ಬಂದರೂ ಅದರ ಒಳಾರ್ಥಗಳು ನಮಗೆ ತಿಳಿಯುವುದೇ ಇಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಅಂದರೆ ದೊಡ್ಡ ದೊಡ್ಡ ಟ್ರಕ್‌ಗಳ ಹಿಂದೆ ‘Horn OK Please’ ಎಂದು ಬರೆದಿರುವ ಅಕ್ಷರಗಳು.
ಹೌದು ನೀವು ಎಂದಾದ್ರು ಇದರ ಬಗ್ಗೆ ಯೋಚಿಸಿದ್ದೀರಾ? ಭಾರತದ ರಸ್ತೆಗಳಲ್ಲಿ ಓಡಾಡುವ ಬಹುತೇಕ ಟ್ರಕ್‌ಗಳು, ಲಾರಿಗಳ ಹಿಂದೆ ಈ ರೀತಿ ಬರೆದಿರುತ್ತಾರೆ. ಏನಿಲ್ಲಾ ಅಂದ್ರು OK ಅನ್ನೋ ಪದವಂತೂ ಕಡ್ಡಾಯವೆಂಬಂತೆ ಬರೆಸಿರುತ್ತಾರೆ. ಹಾಗಾದ್ರೆ ಈ ರೀತಿ ಬರೆಸುವುದು ಏಕೆ? ಇದರ ಹಿಂದಿರುವ ಕಾರಣವಾದ್ರೂ ಏನು?
ಹಲವರು ಇದನ್ನು ಓದಿ ಸುಮ್ಮನಾಗಬಹುದು ಅಥವಾ ಎಲ್ಲಾ ಟ್ರಕ್‌ಗಳಲ್ಲೂ ನೋಡುವುದರಿಂದ ಇದೊಂದು ಸಂಪ್ರದಾಯವೇನೋ ಎಂದುಕೊಂಡಿರಬಹುದು. ಜೊತೆಗೆ ಆರ್‌ಟಿಓ ಕಚೇರಿಯ ನಿಯಮವೂ ಇರಬಹುದು ಎಂದು ನೀವು ಅಂದಾಜಿಸಿರಬಹುದು. ಆದರೆ ಈ ಅಕ್ಷರಗಳ ಹಿಂದೆ ದೊಡ್ಡ ಕಹಾನಿ ಅಡಗಿದೆ ಎಂಬುದನ್ನು ನೀವೂ ಕನಸಿನಲ್ಲೂ ಊಹಿಸಿರುವುದಿಲ್ಲ. ನಿಮಗಿದು ಅಚ್ಚರಿ ಎನಿಸಬಹುದು. ಅದೇನೆಂದರೆ ಈ ರೀತಿ ಹಾರ್ನ್ ಓಕೆ ಪ್ಲೀಸ್ ಅಂತ ಸುಮ್ಮನೆ ಯಾರು ಬರೆಸುತ್ತಿಲ್ಲ. ಬದಲಿಗೆ ಇದನ್ನು ಕೆಣಕುತ್ತಾ ಹೋದಾಗ ಅಲ್ಲೊಂದು ಕಥೆ ಹುಟ್ಟಿಕೊಳ್ಳುತ್ತೆ. ಅಚ್ಚರಿ ಆದ್ರೂ ಅದೊಂದು ಸತ್ಯ ಕಥೆಯಾಗಿದೆ. ಹಾಗಾದ್ರೆ ಏನಿದು ಕಥೆ ಅನ್ನೋದನ್ನ ನೋಡಿ. ಈ ಸಾಲು ಎಷ್ಟು ಫೇಮಸ್ ಆಗಿದೆ ಎಂದರೆ ಕೆಲ ವರ್ಷಗಳ ಹಿಂದೆ ಇದರ ಮೇಲೆ ಬಾಲಿವುಡ್ ಚಿತ್ರ ಕೂಡ ತಯಾರಾಗಿತ್ತು. ನಿಯಮಗಳ ಪ್ರಕಾರ ಇದನ್ನು ಬರೆಯುವುದು ಅನಿವಾರ್ಯವಲ್ಲ, ಅಥವಾ ಯಾವುದೇ ಅರ್ಥವನ್ನು ಹೊಂದಿಲ್ಲ, ಆದರೆ ದೇಶದಲ್ಲಿ ಓಡಾಡುವ ಲಕ್ಷಕ್ಕೂ ಹೆಚ್ಚಿನ ಟ್ರಕ್‌ಗಳ ಹಿಂದೆ ಇದನ್ನು ಬರೆಯಲಾಗಿದೆ. ನಿಮ್ಮಲ್ಲಿ ಹೆಚ್ಚಿನವರಿಗೆ ಇದರ ಹಿಂದಿನ ಕಾರಣ ತಿಳಿದಿಲ್ಲ.

‘ಹಾರ್ನ್ ಓಕೆ ಪ್ಲೀಸ್’ ಎಂದರೆ ವಾಹನವನ್ನು ಓವರ್ ಟೇಕ್ ಮಾಡುವ ಮುನ್ನ ಹಾರ್ನ್ ಮಾಡಿ ಎನ್ನುವುದು ಸಾಮಾನ್ಯ ಅರ್ಥವಾಗಿದೆ. ಆದರೆ ಈ ಅಕ್ಷರ ಬರೆಯದಿದ್ದರೂ ಸಾಮಾನ್ಯವಾಗಿ ಓವರ್‌ಟೇಕ್ ಮಾಡುವಾಗ ಎಲ್ಲರೂ ಹಾರ್ನ್ ಮಾಡಿಯೇ ಮಾಡುತ್ತಾರೆ. ಆದ್ರೆ ಇದನ್ನ ಬಳಸುವ ಅಗತ್ಯ ಏಕಿತ್ತು ಅಂದ್ರೆ ಹಿಂದಿನ ಕಾಲದ ದೊಡ್ಡ ಟ್ರಕ್‌ಗಳಲ್ಲಿ ಮಿರರ್‌ಗಳ ವ್ಯವಸ್ಥೆ ಇರಲಿಲ್ಲವಂತೆ. ಇದ್ದರೂ ದೊಡ್ಡ ದೊಡ್ಡ ಮಿರರ್‌ಗಳು ಇರಲಿಲ್ಲವಂತೆ. ಹೀಗಾಗಿ ಹಿಂದೆ ಯಾವ ವಾಹನ ಬರುತ್ತಿದೆ. ಎಷ್ಟು ವೇಗವಾಗಿ ಬರುತ್ತಿದೆ. ಎಲ್ಲಿ ದಾರಿ ಬಿಡಬೇಕು ಎಂದು ತಿಳಿಯುತ್ತಿರಲಿಲ್ಲ. ಹೀಗಾಗಿ ಲಾರಿ ಹಿಂದೆ ಹಾರ್ನ್ ಪ್ಲೀಸ್ ಎಂದು ಬರೆಯುತ್ತಿದ್ದರಂತೆ. ಇದು ಹಾರ್ನ್ ಪ್ಲೀಸ್ ಕಥೆಯಾದರೆ ಓಕೆ ಎಂದು ಬರೆಸುವ ಹಿಂದೆಯೂ ಒಂದು ಆಸಕ್ತಿದಾಯಕ ಕಥೆ ಇದೆ. ಮಹಾಯುದ್ಧದ ಸಮಯದಲ್ಲಿ ಪ್ರಪಂಚದಾದ್ಯಂತ ಡೀಸೆಲ್‌ನ ದೊಡ್ಡ ಕೊರತೆ ಇತ್ತು. ಈ ಸಮಯದಲ್ಲಿ, ಸೀಮೆಎಣ್ಣೆ ತುಂಬಿದ ಕಂಟೈನರ್‌ಗಳನ್ನು ಟ್ರಕ್‌ಗಳಲ್ಲಿ ಇರಿಸಲಾಗಿತ್ತು. ಇವು ಸಾವಿರಾರು ಕಿ.ಮೀ ಚಲಸಿಬೇಕಿತ್ತು. ಎಲ್ಲಾದರೂ ಅಪಘಾತವಾದರೆ ಬೆಂಕಿ ಹೊತ್ತಿಕೊಂಡು ಉರಿದು ಹೋಗುತ್ತಿದ್ದವು. ಹೀಗಾಗಿ ಈ ವಾಹನಗಳಿಂದ ಅಂತರ ಕಾಯ್ದುಕೊಳ್ಳುವಂತೆ ಹಿಂಬದಿ ವಾಹನ ಸವಾರರಿಗೆ ತಿಳಿಸಲೆಂದು ಅಂತಹ ಸೀಮೆ ಎಣ್ಣೆ ಸಾಹಿಸುವ ಲಾರಿಗಳ ಹಿಂದೆ ಓಕೆ ಎಂದು ಬರೆಯಲಾಗಿತ್ತು. ‘ಓಕೆ’ ಎಂದರೆ ‘ಆನ್ ಕೆರೋಸಿನ್’ (On kerosene) ಎಂಬುದಾಗಿತ್ತು. ಈ ರೀತಿ ಬರೆದಾಗ ಹಿಂದೆ ಬರುತ್ತಿದ್ದ ವಾಹನಗಳಿಗೆ ಲಾರಿಯಲ್ಲಿ ಸೀಮೆ ಎಣ್ಣೆ ಇದೆ ಎಂದು ತಿಳಿಯುತ್ತಿತ್ತು. ಜೊತೆಗೆ ಜಾಗರೂಕರಾಗಿ ವಾಹನ ಚಲಾಯಿಸುತ್ತಿದ್ದರಂತೆ.

ಹೀಗಾಗಿ ಈ ವಾಹನಗಳಿಂದ ಅಂತರ ಕಾಯ್ದುಕೊಳ್ಳುವಂತೆ ಹಿಂಬದಿ ವಾಹನ ಸವಾರರಿಗೆ ತಿಳಿಸಲೆಂದು ಅಂತಹ ಸೀಮೆ ಎಣ್ಣೆ ಸಾಹಿಸುವ ಲಾರಿಗಳ ಹಿಂದೆ ಓಕೆ ಎಂದು ಬರೆಯಲಾಗಿತ್ತು. ‘ಓಕೆ’ ಎಂದರೆ ‘ಆನ್ ಕೆರೋಸಿನ್’ (On kerosene) ಎಂಬುದಾಗಿತ್ತು. ಈ ರೀತಿ ಬರೆದಾಗ ಹಿಂದೆ ಬರುತ್ತಿದ್ದ ವಾಹನಗಳಿಗೆ ಲಾರಿಯಲ್ಲಿ ಸೀಮೆ ಎಣ್ಣೆ ಇದೆ ಎಂದು ತಿಳಿಯುತ್ತಿತ್ತು. ಜೊತೆಗೆ ಜಾಗರೂಕರಾಗಿ ವಾಹನ ಚಲಾಯಿಸುತ್ತಿದ್ದರಂತೆ.

ಇನ್ನೊಂದು ಕಥೆಯಲ್ಲಿ ಹಿಂದಿನ ಕಾಲದಲ್ಲಿ ಸಣ್ಣ ಸಣ್ಣ ರಸ್ತೆಗಳಿರುತ್ತಿದ್ದವು. ಈ ವೇಳೆ ಹಿಂದೆ ಬರುವ ವಾಹನಗಳಿಗೆ ದಾರಿ ಮಾಡಿ ಕೊಡುವುದು ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ಲಾರಿಗಳ ಹಿಂದೆ ಓಕೆ ಎಂದು ಬರೆಸಿ ಅದಕ್ಕೆ ಒಂದು ಲೈಟ್ ಫಿಕ್ಸ್ ಮಾಡಿರುತ್ತಿದ್ದರು. ಯಾವಾಗ ಹಿಂದಿನ ವಾಹನಕ್ಕೆ ದಾರಿ ಬಿಡಬೇಕು ಎನ್ನುವಾಗ ಆ ಓಕೆ ಲೈಟ್ ಆನ್ ಮಾಡುತ್ತಿದ್ದರು. ಆ ವೇಳೆ ಹಿಂದೆ ಬರುವ ವಾಹನ ಮುಂದಕ್ಕೆ ಹೋಗಲು ಸಂದೇಶ ಸಿಗುತ್ತಿತ್ತು ಎನ್ನಲಾಗಿದೆ. ನೋಡಿದ್ರಲ್ಲಾ ಈ ಮೂರು ಅಕ್ಷರಗಳ ಹಿಂದೆ ಎಷ್ಟು ಕಹಾನಿಗಳಿವೆ, ಆದ್ರೆ ನಾವು ನಿತ್ಯ ರಸ್ತೆಯಲ್ಲಿ ಇದನ್ನೂ ಓದಿದರೂ ಅದರ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಂಡವರಲ್ಲ. ಆದ್ರೆ ಹಿಂದೆ ಈ ರೀತಿ ಬಳಸುತ್ತಿದ್ದ ಅಕ್ಷರಗಳು ಸಂಪ್ರದಾಯದಂತೆ ನಡೆದುಕೊಂಡು ಬಂದು ಈಗ ಅದು ಹಾಗೆಯೇ ಉಳಿದುಬಿಟ್ಟಿದೆ. ಎಲ್ಲಾ ಟ್ರಕ್, ಲಾರಿಗಳ ಹಿಂದೆ Horn Ok Please ಎಂದು ಬರೆಸುವುದು ಕಾಮನ್ ಆಗಿಬಿಟ್ಟಿದೆ.

WhatsApp Group Join Now
Telegram Group Join Now
Share This Article
error: Content is protected !!