ಬಳ್ಳಾರಿ,ಜು.27
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಒಡೆತನದಲ್ಲಿರುವ ನಾಗರೀಕ ಸೌಲಭ್ಯ ನಿವೇಶನಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಕಚೇರಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲು, ಒಟ್ಟು 157 ನಾಗರೀಕ ಸೌಲಭ್ಯ ನಿವೇಶನಗಳ ಪಟ್ಟಿಯಲ್ಲಿನ ಶೇಕಡ 18% ಪರಿಶಿಷ್ಟ ಜಾತಿ ಹಾಗೂ ಶೇಕಡ 7% ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳಿಗೆ ಮೀಸಲಿರಿಸಿ ಉಳಿದ 75 ಶೇ. ಸಾಮಾನ್ಯ ಸಂಘ ಸಂಸ್ಥೆಗಳಿಗೆ ಮೀಸಲಿರಿಸಲಾಗಿದೆ.
156 ನಾಗರೀಕ ಸೌಲಭ್ಯ ನಿವೇಶನಗಳ ಪೈಕಿ ಇಲ್ಲಿಯವರಿಗೆ ಯಾವುದೇ ಅರ್ಜಿಗಳು ಬಂದಿರುವುದಿಲ್ಲ. ಹಾಗಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಕಚೇರಿಗಳು ಹಾಗೂ ಸಂಘ ಸಂಸ್ಥೆಯವರು 30 ದಿನಗಳೊಳಗಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಆಸಕ್ತಿಯುಳ್ಳ ಸಂಘ, ಸಂಸ್ಥೆಯವರು ಅರ್ಜಿ ಶುಲ್ಕವನ್ನು ಪ್ರಾಧಿಕಾರಕ್ಕೆ ಪಾವತಿಸಿ ಕಚೆೆÃರಿಯಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ:-
ಅರ್ಜಿ ಸಲ್ಲಿಸಲು ಆಗಸ್ಟ್ 26 ಕೊನೆಯ ದಿನವಾಗಿದ್ದು, ಅವಧಿ ಮೀರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಒಂದೇ ನಾಗರೀಕ ಸೌಲಭ್ಯ ನಿವೇಶನಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಕಚೇರಿ ಮತ್ತು ಸಂಘ, ಸಂಸ್ಥೆಯವರು ಅರ್ಜಿ ಸಲ್ಲಿಸಿದ್ದಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು.
ನಾಗರೀಕ ಸೌಲಭ್ಯ ನಿವೇಶನದ ಮೊತ್ತ, ಅರ್ಜಿಯ ಶುಲ್ಕ, ನೋಂದಾಣಿ ಶುಲ್ಕ ಹಾಗೂ 18% ಜಿ.ಎಸ್.ಟಿ. ಮೊತ್ತವನ್ನು ಡಿ.ಡಿ.ಮುಖಾಂತರ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರ ಹೆಸರಿಗೆ ಪಾವತಿ ಮಾಡಿ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ. ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಾಗರೀಕ ಸೌಲಭ್ಯ ನಿವೇಶನ ಶಾಖೆಯ ಕಂದಾಯ ಪರಿವೀಕ್ಷಕರ ಕಚೆÉÃರಿಗೆ ಭೇಟಿ ನೀಡಿ ಅಥವಾ ದೂ.08392273731 ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
