ಬಳ್ಳಾರಿ,ಅ.16
ಸಂಡೂರು ತಾಲೂಕಿನ ಉಬ್ಬಲಗುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ‘ಮೆ. ಮಿನೇರಾ ಸ್ಟೀಲ್ ಅಂಡ್ ಪವರ್ ಪ್ರೆöÊವೇಟ್ ಲಿಮಿಟೆಡ್' ಘಟಕದ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ನವೆಂಬರ್ 19ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಉಬ್ಬಲಗುಂಡಿ ಗ್ರಾಮದ ಸರ್ವೇ ನಂ. 208, 210-1, 210-ಎ1, 210-ಎ2 ಹಾಗೂ 210-ಬಿ ವ್ಯಾಪ್ತಿಯ ಒಟ್ಟು 19.68 ಎಕರೆ (7.964 ಹೆಕ್ಟೇರ್) ಭೂ ಪರಿವರ್ತಿತ ಜಮೀನಿನಲ್ಲಿ ವಾರ್ಷಿಕ 0.49 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಮಿನರಲ್ ಬೆನಿಫಿಸಿಯೇಷನ್ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಸಂಬAಧ ಅಕ್ಟೋಬರ್ 27 ರಂದು ವೇಣಿವೀರಾಪುರ ಗ್ರಾಮದ ‘ಮೆ.ಹೊತ್ತೂರ್ ಇಸ್ಪಾತ್ ಪ್ರೆöÊವೇಟ್ ಲಿಮಿಟೆಡ್' ಯೋಜನಾ ಸ್ಥಳದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ಸಭೆಯನ್ನು ಮುಂದೂಡಲಾಗಿದೆ.
ಮರು ನಿಗದಿಪಡಿಸಲಾದ ಸಭೆಯು ನವೆಂಬರ್ 19 ರಂದು ಬೆಳಗ್ಗೆ 11 ಗಂಟೆಗೆ ಯೋಜನಾ ಸ್ಥಳವಾದ ಸಂಡೂರು ತಾಲೂಕಿನ ಉಬ್ಬಲಗುಂಡಿ ಗ್ರಾಮದ ಮೆ. ಮಿನೇರಾ ಸ್ಟೀಲ್ ಅಂಡ್ ಪವರ್ ಪ್ರೆöÊವೇಟ್ ಲಿಮಿಟೆಡ್ ಆವರಣದಲ್ಲಿ (ಸರ್ವೇ ನಂ. 208, 210-1, 210-ಎ1, 210-ಎ2 ಮತ್ತು 210-ಬಿ) ನಡೆಯಲಿದೆ ಎಂದು ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ