Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ವಿದೇಶದಲ್ಲಿ ಅಧ್ಯಯನ–2026’: ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ ----

ಕೊಪ್ಪಳ ಸೆಪ್ಟೆಂಬರ್ 02: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆವಿಟಿ &ಎಸ್‌ಡಿಸಿ) ವತಿಯಿಂದ ಇದೇ ಸೆಪ್ಟೆಂಬರ್ 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ವಿದೇಶದಲ್ಲಿ ಅಧ್ಯಯನ–2026’ ಕಾರ್ಯಕ್ರಮದ ಅಧಿಕೃತ ಪ್ರಚಾರ ಪೋಸ್ಟರ್ ಅನ್ನು ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಇಟ್ನಾಳ ಅವರು ಸೋಮವಾರ (ಆ. 31ರಂದು) ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಿ, "ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಆಸಕ್ತಿಯಿರುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ, ನೋಂದಾಯಿಸುವಂತೆ ಅವರಿಗೆ ಪ್ರೇರೇಪಿಸಲು ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರಾಚಾರ್ಯರು ಅಗತ್ಯ ಕ್ರಮವಹಿಸಬೇಕು. ‘ವಿದೇಶದಲ್ಲಿ ಅಧ್ಯಯನ–2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಮೂಲಕ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಜಿ. ಬೆಲ್ಲದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
*ಕಾರ್ಯಕ್ರಮದ ಪ್ರಮುಖ ವಿವರಗಳು:* ‘ವಿದೇಶದಲ್ಲಿ ಅಧ್ಯಯನ–2026’ ಕಾರ್ಯಕ್ರಮವು ಸೆಪ್ಟೆಂಬರ್ 06 ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಗೇಟ್ ನಂ. 04, ಗಾಯತ್ರಿ ಗ್ರಾಂಡ್, ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರಿನಲ್ಲಿ ನಡೆಯಲಿದ್ದು, 10ಕ್ಕೂ ಹೆಚ್ಚು ವಿದೇಶಗಳ, 75ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉನ್ನತ ಶಿಕ್ಷಣದ ಅವಕಾಶಗಳು, ಪ್ರವೇಶ ಪ್ರಕ್ರಿಯೆ (Admissions), ವಿದ್ಯಾರ್ಥಿ ವೀಸಾ ಮಾರ್ಗದರ್ಶನ ಹಾಗೂ ಸ್ಕಾಲರ್‌ಶಿಪ್ (ವಿದ್ಯಾರ್ಥಿ ವೇತನ) ಕುರಿತ ಸಮಗ್ರ ಮಾಹಿತಿ ಒಂದೇ ಸೂರಿನಡಿ ಸಿಗಲಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲಿಚ್ಛೀಸುವ ಅರ್ಹ ವಿದ್ಯಾರ್ಥಿಗಳು ಅಧಿಕೃತ ನೋಂದಣಿ ವೆಬ್‌ಸೈಟ್: https://studyabroad.ksdckarnataka.com/ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅರ್ಜಿ ಆಹ್ವಾನ*ಲಂಚ ಪ್ರಕರಣ: ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು, ರೂ.40 ಸಾವಿರ ದಂಡವಿದೇಶದಲ್ಲಿ ಅಧ್ಯಯನ–2026’: ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ ----ಸುಕ್ಷೇತ್ರ ಹುಲಿಗಿ ದೇವಸ್ಥಾನದಲ್ಲಿ ಶುಚಿತ್ವ ಕಾರ್ಯಕ್ಕೆ 15 ದಿನಗಳ ಗಡುವು ನೀಡಿದ ಸಚಿವರು ===ಸುಕ್ಷೇತ್ರ ಹುಲಿಗಿ ದೇವಸ್ಥಾನದಲ್ಲಿ ಶುಚಿತ್ವ ಕಾರ್ಯಕ್ಕೆ 15 ದಿನಗಳ ಗಡುವು ನೀಡಿದ ಸಚಿವರು ===ಸುಕ್ಷೇತ್ರ ಹುಲಿಗಿ ದೇವಸ್ಥಾನದಲ್ಲಿ ಶುಚಿತ್ವ ಕಾರ್ಯಕ್ಕೆ 15 ದಿನಗಳ ಗಡುವು ನೀಡಿದ ಸಚಿವರು ===ಬಳ್ಳಾರಿ ಜಿಲ್ಲೆಯಲ್ಲಿ ‘ಗ್ರಾಮ ಒನ್’ ಫ್ರಾಂಚೈಸಿ ನೇಮಕಾತಿಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್ 15 ಕೊನೆಯ ದಿನಸೆ.06 ರಂದು ಬೆಂಗಳೂರಿನಲ್ಲಿ ‘ವಿದೇಶದಲ್ಲಿ ಅಧ್ಯಯನ-2026’ ಶೈಕ್ಷಣಿಕ ಕಾರ್ಯಕ್ರಮಪರಿಶಿಷ್ಟ ಜಾತಿ ರೈತರಿಗೆ ಕೃಷಿ ಉಪಕರಣಗಳ ದುರಸ್ತಿ ಹಾಗೂ ನಿರ್ವಹಣೆ ತರಬೇತಿಕಂಪ್ಲಿಯಲ್ಲಿ ಐವರು ಬಾಲಕಾರ್ಮಿಕರ ರಕ್ಷಣೆ