ಗಂಗಾವತಿ: ನಗರದ ಶಾರದಾ ದೇಗುಲದಲ್ಲಿ ರವಿವಾರದಂದು ಸನಾತನ ಧರ್ಮದ ಪ್ರವರ್ತಕನಾದ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತೋತ್ಸವ ಕಾರ್ಯಕ್ರಮ ಶ್ರದ್ಧೆ ಭಕ್ತಿಯಿಂದ ಜರಗಿತು. ಈ ಸಂದರ್ಭದಲ್ಲಿ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸನ್ಯಾಸತ್ವ ಪಡೆದ ಸುವರ್ಣ ಮಹೋತ್ಸವದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು. ನಗರದ ವಿನಾಯಕ ರಕ್ತ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಡಾಕ್ಟರ್ ಜಿ ವೆಂಕಣ್ಣ ತಂಡ ದವರಿಂದ ಉಚಿತ ರಕ್ತಪರೀಕ್ಷಾ ಶಿಬಿರ ನಡೆಸಲಾಯಿತು. ಸಮಾರಂಭವನ್ನು ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಶೃಂಗೇರಿಯ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ವರ್ಷವಿಡಿ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸುತ್ತ ಬರಲಾಗಿದ್ದು.
ಈ ಹಿಂದೆ ಬಡ ಮಹಿಳೆಗೆ ವಿವಾಹಕ್ಕಾಗಿ ಮಾಂಗಲ್ಯವನ್ನು ಕಲ್ಪಿಸಲಾಗಿತ್ತು. ಇಂದು ಸಾರ್ವಜನಿಕರಾಗಿ ಉಚಿತ ರಕ್ತ ತಪಾಸಣಾ ಶಿಬಿರವನ್ನು ನಡೆಸಲಾಗಿದ್ದು 180ಕ್ಕೂ ಅಧಿಕ ಫಲಾನುಭವಿಗಳು ರಕ್ತದ ಗ್ರೂಪ್ ರಕ್ತದೊತ್ತಡ ಸಕ್ಕರೆ ಕಾಯಿಲೆ ತೂಕ ಹಾಗೂ ಎತ್ತರದ ಮಾಹಿತಿಯನ್ನು ಪ್ರಮಾಣ ಪತ್ರದೊಂದಿಗೆ ಫಲಾನುಭವಿಗಳಿಗೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಹಾಗೆ ರಕ್ತ ಪರಿವೀಕ್ಷಕ ಡಾಕ್ಟರ್ ಜಿ ವೆಂಕಣ್ಣ ಮಾತನಾಡಿ ಶಂಕರ್ ಮಠ ಧರ್ಮ ಜಾಗೃತಿ ಜೊತೆಗೆ ಸಮಾಜಕಮುಖಿ ಕಾರ್ಯಕ್ರಮ ನಡೆಸುತ್ತೆ ಬಂದಿರುವುದು ಸ್ವಾಗತದಾಯಕ ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದಕ್ಕೂ ಪೂರ್ವದಲ್ಲಿ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ತೊಟ್ಟಿಲುಸೇವೆ ಪಾಲಕಿ ಉತ್ಸವ ಸಮಾಜ ಮಕ್ಕಳಿಂದ ಧಾರ್ಮಿಕ ವೇಷ ಭೂಷಣ ಸ್ಪರ್ಧೆ ಪ್ರತಿಭಾವಂತರಿಗೆ ಸನ್ಮಾನ ಇತರೆ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶ್ರೀ ಶಂಕರಾಚಾರ್ಯರ ಜೀವನ ಮತ್ತು ಸಾಧನೆ ಕುರಿತು ವೇದಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿದರು ಶಾರದಾ ಶಂಕರ ಭಕ್ತ ಮಂಡಳಿ ಅವರಿಂದ ಭಜನೆ ಹಾಗೂ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕ ಕುಮಾರ್ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.