Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ


     ಸಿರುಗುಪ್ಪ: ನಗರದಲ್ಲಿ  ನಾಳೆ ವಿಜೃಂಭಣೆಯಿಂದ ಜರುಗಲಿರುವ ಹಿಂದು ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್  ಮಂಗಳವಾರ ಸಂಜೆ ಪೋಲಿಸ್ ಪಥಸಂಚಲನ ನಡೆಸಲಾಯಿತು.
 ಡಿ.ವೈ.ಎಸ್.ಪಿ. ಮಹಾಲಂತೇಶ ಕೊನೆಬೇವು ಮಾತನಾಡಿ ಶೋಭಾಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಲ್ಲಿ ಭದ್ರತೆಯ ಭಾವನೆ ಮೂಡಿಸುವುದು ಹಾಗೂ ಶಾಂತಿ ನೆಲೆಸುವಂತೆ ಮಾಡುವುದು ಈ ಪಥಸಂಚಲನದ ಮುಖ್ಯ ಉದ್ದೇಶವಾಗಿದೆ ಎಂದರು.
ನಗರದಾದ್ಯಂತ ಕೇಸರಿ ಧ್ವಜ ಹಾಗೂ ತೋರಣಗಳಿಂದ ಶೃಂಗರಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಗಣೇಶ ವಿಸರ್ಜನಾ ಶೋಭಾಯಾತ್ರೆಯನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನೆರವೇರಿಸಲು ಪೊಲೀಸರೊಂದಿಗೆ ಸಹಕರಿಸಬೇಕೆಂದು  ಮನವಿ ಮಾಡಿದರು.
ಬಿಗಿ ಭದ್ರತೆ ಹಾಗೂ ಪಥಸಂಚಲನ: ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನೂರಾರು ಪೊಲೀಸ್ ಸಿಬ್ಬಂದಿ, ಸಶಸ್ತ್ರ ಮೀಸಲು ಪಡೆ ಹಾಗೂ ಬಂದೋಬಸ್ತ್ ಸಿಬ್ಬಂದಿ ನಗರದ ಪ್ರಮುಖ ಬೀದಿಗಳು ಮತ್ತು ಶೋಭಾಯಾತ್ರೆ ಸಾಗುವ ಮಾರ್ಗಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು.
ಸಿ.ಪಿ.ಐ ಹನುಮಂತಪ್ಪ, ಪಿ.ಎಸ್.ಐ.ಗಳಾದ ಪರಶುರಾಮ, ಶಶಿಧರ ನಾಯಕ, ಸದ್ದಾಂ ಹುಸೇನ್ ಹಾಗೂ ಪೇದೆಗಳು ಭಾಗವಹಿಸಿದ್ದರು.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನಅಂಗಡಿಗಳ ಬೀಗ ಮುರಿದು ಕಳವು: ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಬಂಧನ : ಸಾಹಿಲ್ ಬಾಗ್ಲಾ ======ರಸಗೊಬ್ಬರ ಅಕ್ರಮ ದಾಸ್ತಾನು: ಕೃಷಿ ಅಧಿಕಾರಿಗಳ ಮಿಂಚಿನ ದಾಳಿ ₹1.80 ಲಕ್ಷ ಮೌಲ್ಯದ 680 ಚೀಲ ವಶ; ಸಿರಿಗೇರಿ ಠಾಣೆಯಲ್ಲಿ ಪ್ರಕರಣಇಲಾಖೆ ನಿಯಮಾನುಸಾರ ಶಾಂತಿ ಸು ವ್ಯವಸ್ಥೆಯೊಂದಿಗೆ  ಶ್ರೀ ಗೌರಿ ಗಣೇಶ ಹಬ್ಬ ಆಚರಿಸಿ : ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ .ಡಿ ಪನ್ನೇಕರ್ ಕರೆಬದಲಿ ಕೃಷಿ ಕ್ರಾಂತಿ: ‘ದೃಢ ಕರ್ನಾಟಕ ಸಂಕಲ್ಪ’ ದಡಿ ಸಾಗುತ್ತಿದೆ ಪ್ರಗತಿಯ ರಥ ಭೂಮಿ, ನೀರು ಮತ್ತು ತಂತ್ರಜ್ಞಾನದ ಸಂಗಮ: ಸರ್ಕಾರದ ನೂರು ದಿನಗಳ ಪಯಣದಲ್ಲಿ ಅನ್ನದಾತನ ಬದುಕಿಗೆ ಹೊಸ ಭರವಸೆ ನೇಗಿಲ ಯೋಗಿಯಿಂದ ಡಿಜಿಟಲ್ ಮಿಷನ್‌ವರೆಗೆ: ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿರುವ ದೃಢ ಸರ್ಕಾರದ ನೂತನ ಉಪಕ್ರಮಗಳುಮನೆ ಬಾಗಿಲಿಗೆ ನಮ್ಮ ಸರ್ಕಾರ: ಗುಡೇಕೋಟೆ ಹೋಬಳಿಯಲ್ಲಿ ಇಂದು ಪ್ರಜಾ ಆಂದೋಲನ ವಿಶೇಷ ಕಾರ್ಯಕ್ರಮಸಮ್ಮೇಳನ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಡಾ  ಮಧುಸೂದನ ಕಾರಿಗನೂರ ಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಬಹಿರಂಗ ಸಮಾವೇಶ: ಬಳ್ಳಾರಿ ನಗರದಲ್ಲಿ ಮದ್ಯ ಮಾರಾಟ, ಸಾಗಣೆ ಸಂಪೂರ್ಣ ನಿಷೇಧ