Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ: ಪ್ಯಾರಾ ಈಜು ಸ್ಪರ್ಧಿಗಳ ಸಾಧನೆ





ಬಳ್ಳಾರಿ,ನ.20

ತೆಲಂಗಾಣ ರಾಜ್ಯದ ಹೈದರಾಬಾದ್ ನ ಗಚ್ಚಿಬೌಲಿ ನಲ್ಲಿ ಕಳೆದ ನ.15 ರಿಂದ 18 ರವರೆಗೆ ನಡೆದ 2025-26ನೇ ಸಾಲಿನ 25ನೇ ನ್ಯಾಷನಲ್ ಪ್ಯಾರಾ ಈಜು ಸ್ಪರ್ಧೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿ ಬಳ್ಳಾರಿಯ ನಾಲ್ಕು ಪ್ಯಾರಾ ಈಜು ಸ್ಪರ್ಧಿಗಳಾದ ಗೋಪಿಚಂದ್, ಸಾಯಿ ನಿಖಿಲ್, ಬೇಬಿ ಸಾಯಿ ಮತ್ತು ಯೋಜಿತ್ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಗೋಪಿಚಂದ್ ಅವರು 200 ಮೀ ಐಎಮ್ ನಲ್ಲಿ 1 ಸ್ವರ್ಣ ಪದಕ, 100 ಮೀ. ಬ್ಯಾಕ್ ಸ್ಟೊಕ್‌ನಲ್ಲಿ 1 ಸ್ವರ್ಣ ಪದಕ, 4*100 ಮೀ. ರೀಲೆ ನಲ್ಲಿ 1 ಸ್ವರ್ಣ ಪದಕ ಮತ್ತು 100 ಮೀ. ಫ್ರೀ ಸ್ಟೆöÊಲ್ ನಲ್ಲಿ 1 ಬೆಳ್ಳಿ ಪದಕ ಸೇರಿ ಒಟ್ಟು 3 ಸ್ವರ್ಣ ಪದಕ ಮತ್ತು 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಸಾಯಿ ನಿಖಿಲ್ ಅವರು 100 ಮೀ ಬ್ಯಾಕ್ ಸ್ಟೊçÃಕ್ ನಲ್ಲಿ 1 ಕಂಚು ಪದಕ, 100 ಮೀ. ಫ್ರೀ ಸ್ಟೆöಲ್ ನಲ್ಲಿ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಬೇಬಿ ಸಾಯಿ ಅವರು 100 ಮೀ. ಬ್ಯಾಕ್ ಸ್ಟೊçÃಕ್ ನಲ್ಲಿ 1 ಸ್ವರ್ಣ ಪದಕ ಮತ್ತು ಯೋಜಿತ್ ಅವರು 100 ಮೀ. ಫ್ರೀ ಸ್ಟೆöÊಲ್ ನಲ್ಲಿ 1 ಕಂಚು ಪದಕ ಪಡೆದುಕೊಂಡಿದ್ದಾರೆ ಎಂದು ತರಬೇತುದಾರರಾದ ರಜನಿ ಲಕ್ಕ ಮತ್ತು ಶರತ್ ಗಾಯಕ್ ವಾಡ್ ಅವರು ತಿಳಿಸಿದ್ದಾರೆ.

ಈ ಸಾಧನೆಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ ಅವರು ಅಭಿನಂದಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ