Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ



ಕೊಪ್ಪಳ ಫೆಬ್ರವರಿ 21): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 2026-27ನೇ ಸಾಲಿಗಾಗಿ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ಫೆ.28 ರವರೆಗೆ ವಿಸ್ತರಿಸಲಾಗಿದೆ.

ಪೋಷಕರು, ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಸೇವಾಸಿಂಧು ಪೋರ್ಟಲ್‌ನಲ್ಲಿ https://sevasindhuservices.karnataka.gov.in ಅಥವಾ dom.karnataka.gov.in/koppal/public ನಲ್ಲಿ ನೇರವಾಗಿ ಅರ್ಜಿಗಳನ್ನು ಹತ್ತಿರದ ವಸತಿ ಶಾಲೆ, ಮಾಹಿತಿ ಕೇಂದ್ರ ಕಛೇರಿಗಳಲ್ಲಿ ಎಲ್ಲಾ ದಾಖಲೆಗಳೊಂದಿಗೆ ಭೇಟಿ ನೀಡಿ ಕೊನೆಯ ದಿನಾಂಕದೊಳಗಾಗಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಕುಕನೂರು, ತಳಕಲ್, ಕುದರಿಮೋತಿ, ಟಣಕನಕಲ್, ಹಿರೇಬೆಣಕಲ್-1, ಹಿರೇಬೆಣಕಲ್-2, ಹಿರೇಬನ್ನಿಗೋಳ (ಕುಷ್ಟಗಿ), ಹಿಟ್ನಾಳ, ಮುಧೋಳ, ಹುಲಿಹೈದರ್‌ದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಲಿಂಗದಳ್ಳಿಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಯಲಬುರ್ಗಾ, ಕುಷ್ಟಗಿ ಮತ್ತು ಗಂಗಾವತಿ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಅಥವಾ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕೊಪ್ಪಳ ದೂ.ಸಂ: 08539-225070, 8088892549, ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಗಂಗಾವತಿ ಮೊ.ಸಂ: 9972524670. ಕುಷ್ಟಗಿ ಮೊ.ಸಂ: 8861610578 ಹಾಗೂ ಯಲಬುರ್ಗಾ ಮೊ.ಸಂ: 9620522537ಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ