Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಶೇ.69.17 ರಷ್ಟು ಡಿಜಿಟಲೀಕರಣ ಪೂರ್ಣ

ಬಳ್ಳಾರಿ,ಜು.22
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಜಿಲ್ಲೆಯಲ್ಲಿ ವಿತರಿಸಲಾಗಿರುವ ಎಸ್‌ಐಆರ್ ಗಣತಿ ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆಯು ಶೇ. 69.17 ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮನೆ-ಮನೆ ಭೇಟಿ ಪರಿಶೀಲನೆ ಮತ್ತು ಡಿಜಿಟಲೀಕರಣ ಅವಧಿ ಆಗಸ್ಟ್ 08 ರ ವರೆಗೆ ನಡೆಯಲಿದೆ. ಆಗಸ್ಟ್ 17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಜಿಲ್ಲೆಯಲ್ಲಿ ಒಟ್ಟು 12,29,586 ಮತದಾರರಿದ್ದು, 12,29,586 ಮತದಾರರಿಗೂ ಎಸ್‌ಐಆರ್ ಗಣತಿ ನಮೂನೆಗಳನ್ನು ಶೇ.100 ರಷ್ಟು ವಿತರಿಸಲಾಗಿದೆ. ಅದರಲ್ಲಿ 8,50,506 (ಶೇ.69.17 ರಷ್ಟು) ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 5,622 ನಮೂನೆಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ.
ಮನೆ-ಮನೆ ಭೇಟಿ ಪರಿಶೀಲನೆಯ ಸಮಯದಲ್ಲಿ ಜಿಲ್ಲೆಯಾದ್ಯಂತ ಒಟ್ಟು 60,252 ಮತದಾರರನ್ನು ಎಎಸ್‌ಡಿಡಿಒ (ಗೈರುಹಾಜರಿ, ಸ್ಥಳಾಂತರ, ಮೃತ, ದ್ವಿಪ್ರತಿ/ಈಗಾಗಲೇ ನೋಂದಾಯಿತ ಮತ್ತು ಇತರೆ) ವರ್ಗದಲ್ಲಿ ಗುರುತಿಸಲಾಗಿದೆ.
ಖಾಯಂ ಸ್ಥಳಾಂತರಗೊAಡವರು: 29,988
ಮೃತ ಮತದಾರರು: 21,645
ಈಗಾಗಲೇ ನೋಂದಾಯಿತ/ದ್ವಿಪ್ರತಿ: 7,467
ಗೈರುಹಾಜರಿ / ಸಿಗದವರು: 1,007
ಇತರೆ: 145
*ವಿಧಾನಸಭಾ ಕ್ಷೇತ್ರವಾರು ಪ್ರಗತಿ ನೋಟ (ಜುಲೈ 20 ರಂತೆ):*
91- ಕಂಪ್ಲಿ: 242 ಮತಗಟ್ಟೆಗಳು, 2,28,666 ಮತದಾರರು, 80,569 ಡಿಜಿಟಲೀಕರಣಗೊಂಡ ನಮೂನೆಗಳು, 7,548 ಎಎಸ್‌ಡಿಡಿಒ ಮತದಾರರು.
92- ಸಿರುಗುಪ್ಪ: 229 ಮತಗಟ್ಟೆಗಳು, 2,28,277 ಮತದಾರರು, 67,958 ಡಿಜಿಟಲೀಕರಣಗೊಂಡ ನಮೂನೆಗಳು, 13,291 ಎಎಸ್‌ಡಿಡಿಒ ಮತದಾರರು.
93- ಬಳ್ಳಾರಿ (ಗ್ರಾಮೀಣ): 236 ಮತಗಟ್ಟೆಗಳು, 2,51,325 ಮತದಾರರು, 1,66,523 ಡಿಜಿಟಲೀಕರಣಗೊಂಡ ನಮೂನೆಗಳು, 16,938 ಎಎಸ್‌ಡಿಡಿಒ ಮತದಾರರು.
94- ಬಳ್ಳಾರಿ ನಗರ : 261 ಮತಗಟ್ಟೆಗಳು, 2,79,144 ಒಟ್ಟು ಮತದಾರರು, 1,52,819 ಡಿಜಿಟಲೀಕರಣಗೊಂಡ ನಮೂನೆಗಳು, 9,090 ಎಎಸ್‌ಡಿಡಿಒ ಮತದಾರರು.
95- ಸಂಡೂರು: 259 ಮತಗಟ್ಟೆಗಳು, 2,42,174 ಒಟ್ಟು ಮತದಾರರು, 1,82,637 ಡಿಜಿಟಲೀಕರಣಗೊಂಡ ನಮೂನೆಗಳು, 13,385 ಎಎಸ್‌ಡಿಡಿಒ ಮತದಾರರು.
ಒಟ್ಟು: ಜಿಲ್ಲೆಯಲ್ಲಿ 1,227 ಮತಗಟ್ಟೆಗಳು, ಒಟ್ಟು 12,29,586 ಮತದಾರರು, 8,50,506 (ಶೇ.69.17) ಡಿಜಿಟಲೀಕರಣಗೊಂಡ ನಮೂನೆಗಳು, 60,252 ಎಎಸ್‌ಡಿಡಿಒ ಮತದಾರರಿದ್ದಾರೆ.
*ಸಾರ್ವಜನಿಕರಿಗೆ ಮನವಿ:*
ಆಗಸ್ಟ್ 8 ರವರೆಗೆ ಮನೆ-ಮನೆ ಭೇಟಿ ಪರಿಶೀಲನಾ ಅಭಿಯಾನ ನಡೆಯಲಿದ್ದು, ಮತದಾರರ ಪಟ್ಟಿಯನ್ನು ದೋಷರಹಿತವಾಗಿಸಲು ಸಾರ್ವಜನಿಕರು ಹಾಗೂ ಮತದಾರರು ಮನೆಗೆ ಆಗಮಿಸುವ ಬಿಎಲ್‌ಒ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಈಗಾಗಲೇ ವಿತರಿಸಲಾಗಿರುವ ಎಸ್‌ಐಆರ್ ನಮೂನೆಗಳನ್ನು ಭರ್ತಿ ಮಾಡಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಆಗುವ ಬೆಳೆನಷ್ಟಕ್ಕೆ ಪರಿಹಾರ* *ಪಿಎಂ ಫಸಲ್ ಬಿಮಾ ಯೋಜನೆ ಜಾರಿ:* *ಅರ್ಹ ರೈತರ ನೋಂದಣಿಗೆ ಕ್ರಮ ಕೈಗೊಳ್ಳಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ: ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್ಬಳ್ಳಾರಿ; ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮ ಶಾರೀರಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ: ಡಿಹೆಚ್‌ಒ ಡಾ. ಅಲಕನಂದಾ ಡಿ. ಮಳಗಿಜಾಗತಿಕ ‘ಎಲ್ ನಿನೋ' ಹವಾಮಾನ ವೈಪರೀತ್ಯ ಹಾಗೂ ಬರದ ಭೀತಿ: ಎದುರಿಸಲು ಕರ್ನಾಟಕ ಸರ್ಕಾರದಿಂದ ಬೃಹತ್ ಮುನ್ನೆಚ್ಚರಿಕೆ ಕಾರ್ಯತಂತ್ರ ಅ0ತರ್ಜಲ ಸಂರಕ್ಷಣೆ, ಬೋರ್‌ವೆಲ್ ರೀಚಾರ್ಜ್ ಮತ್ತು ಬರನಿರೋಧಕ ಬೆಳೆಗಳ ತಳಿಗೆ ಆದ್ಯತೆವದ್ದಟ್ಟಿ ಗ್ರಾಮದಲ್ಲಿ ಜಿಪಂ ಸಿಇಒ ಭೇಟಿ: ನರೇಗಾ ಕಾಮಗಾರಿಗಳ ಪರಿಶೀಲನೆ ಹಾಗೂ ಕೂಲಿಕಾರರೊಂದಿಗೆ ಸಂವಾದಜು.24 ರಂದು ಹದಿಹರೆಯದ ಹೆಣ್ಣುಮಕ್ಕಳ ಸಮಾವೇಶ ಮತ್ತು ಜಿಲ್ಲಾ ಮಟ್ಟದ ಜಾಥಾಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಪ್ರೋಸೆಸ್ ಜಾರಿಕಾರ/ಜವಾನ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನಸ್ವಯಂಸೇವಾ ಸಂಸ್ಥೆಗಳಿಗೆ ಕಡ್ಡಾಯ ನೋಂದಣಿ ಹಾಗೂ ನವೀಕರಣಕ್ಕೆ ಸೂಚನೆಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಪ್ರಭುಲಿಂಗ ಕವಳಿಕಟ್ಟಿಬಳ್ಳಾರಿ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಶೇ.69.17 ರಷ್ಟು ಡಿಜಿಟಲೀಕರಣ ಪೂರ್ಣ