Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ:ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜು30
2026-27 ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಪ್ರಾರಂಭವಾಗಿದ್ದು, ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕಿನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಮೆ ನೋಂದಣಿ ಮಾಡಿಸುವುದರಿಂದ ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲ್ಲಿದ್ದು, ನೊಂದಣಿಗಾಗಿ ವಿವಿಧ ಬೆಳೆಗಳಿಗೆ ಒಂದು ಎಕರೆಗೆ ವಿವಿಧ ಬೆಲೆ ನಿಗದಿ ಪಡಿಸಲಾಗಿದೆ. ಮಳೆಯಾಶ್ರಿತ ಸೂರ್ಯಕಾಂತಿ ಬೆಳೆಗೆ 90ರೂ., ನೀರಾವರಿ ಸೂರ್ಯಕಾಂತಿ ಬೆಳೆಗೆ 469 ರೂ., ಮಳೆಯಾಶ್ರಿತ ಹಾಗೂ ನೀರಾವರಿ ಹತ್ತಿಗೆ ಕ್ರಮವಾಗಿ 1208ರೂ ಹಾಗೂ 1748ರೂ, ನೀರಾವರಿ ಮುಸುಕಿನ ಜೋಳ 617ರೂ, ಮಳೆಯಾಶ್ರಿತ ಮುಸುಕಿನ ಜೋಳ 546 ರೂ, ಮಳೆಯಾಶ್ರಿತ ಹಾಗೂ ನೀರಾವರಿ ಜೋಳ ಬೆಳೆಗೆ 359ರೂ ಹಾಗೂ 426 ರೂ.ಇರುತ್ತದೆ.
ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಜುಲೈ 31 ಕೊನೆ ದಿನ ವಾಗಿರುತ್ತದೆ.
ನೀರಾವರಿ ಭತ್ತ ಎಕರೆಗೆ 879 ರೂ, ಮಳೆಯಾಶ್ರಿತ ಬೆಳೆಗಳಾದ ಸಜ್ಜೆ 282 ರೂ, ನವಣೆ 261 ರೂ, ತೊಗರಿ 466 ರೂ, ಹುರುಳಿ 380 ರೂ ಹಾಗೂ ನೆಲಗಡಲೆ ಅಥವಾ ಶೇಂಗಾ 529 ರೂ ಮತ್ತು ನೀರಾವರಿ ಬೆಳೆಗಳಾದ ತೊಗರಿ 488 ರೂ., ಸಜ್ಜೆ 350 ರೂ ಇದ್ದು, ನೋಂದಣಿ ಮಾಡಲು ಆಗಸ್ಟ್ 14 ರಂದು ಕೊನೆಯ ದಿನ ವಾಗಿರುತ್ತದೆ..
ಬೆಳೆಗಳ ವಿಮೆ ನೋಂದಣಿ ಹೋಬಳಿ ಹಾಗೂ ಗ್ರಾಮ ಪಂಚಾಯತಿಗಳಿಗೆ ನಿಗದಿಪಡಿಸಿದ್ದು, ನಿಗದಿತ ಘಟಕದಲ್ಲಿ ಬೆಳೆ ನೋಂದಣಿ ಮಾಡಲಾಗುವುದು.
ಬೆಳೆ ವಿಮೆ ನೊಂದಣಿಗಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮಒನ್ ಕೇಂದ್ರ ಅಥವಾ ರೈತರು ತಮ್ಮ ವ್ಯವಹಾರದ ಬ್ಯಾಂಕ್‌ಗಳಿಗೆ ಸಂಪರ್ಕಿಸಿ ಬೆಳೆ ವಿಮೆ ಮಾಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೆÃರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿಯಲ್ಲಿ ಮಹಿಳೆಯರಿಗಾಗಿ 10 ದಿನಗಳ ಉಚಿತ ಉದ್ಯಮಶೀಲತಾ ತರಬೇತಿ: ಅರ್ಜಿ ಆಹ್ವಾನಶೈಕ್ಷಣಿಕ ಶುಲ್ಕ ಮರುಪಾವತಿ ಮತ್ತು ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಗಳಿಗೆ  ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಬಳ್ಳಾರಿಯಲ್ಲಿ ಆ.1 ರಂದು ‘ವ್ಯಸನ ಮುಕ್ತ ದಿನಾಚರಣೆ' ಕಾರ್ಯಕ್ರಮ ಮತ್ತು ಜಾಗೃತಿ ಜಾಥಾಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೇಯರ್ ಪಿ.ಗಾದೆಪ್ಪ ಹೇಳಿಕೆ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಅಗತ್ಯಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಜುಲೈ 29 ಇದ್ದಂತೆ ಶೇ. 100 ಮತದಾರರಿಗೆ ಗಣತಿ ನಮೂನೆಗಳ ವಿತರಣೆಬಳ್ಳಾರಿ:ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನಲ್ಯಾಪ್‌ಟಾಪ್ ಖರೀದಿ ಮಾಡಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಗುರುಪೂರ್ಣಿಮಾ ದೇವಸ್ಥಾನಗಳ ಹುಂಡಿಗೆ 360 ಡಿಗ್ರಿ ಸಿಸಿಟಿವಿ ಭದ್ರತೆ: ಎಡಿಸಿ ಝುಬೇರ್ ಸೂಚನೆಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ