Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ | ಕ್ರೀಡಾ ಸುದ್ದಿ

ಏಷ್ಯನ್ ಪ್ಯಾರಾ ಗೇಮ್ಸ್ಗೆ ಬಳ್ಳಾರಿಯ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆ

ಬಳ್ಳಾರಿ,ಅ.17
ಜಪಾನ್‌ನ ಐಚಿ-ನಾಗೋಯಾದಲ್ಲಿ ಅಕ್ಟೋಬರ್ 18 ರಿಂದ 24 ರವರೆಗೆ ಆಯೋಜಿಸಲಾಗಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್–2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಬಳ್ಳಾರಿ ಜಿಲ್ಲೆಯ ಪ್ಯಾರಾ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆಯಾಗಿದ್ದಾರೆ.
ಅಂತಾರಾಷ್ಟಿçÃಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವ ಗುರಿ ಹೊಂದಿರುವ ಗೋಪಿಚಂದ್, ಮುಂಬರುವ ಕ್ರೀಡಾಕೂಟದಲ್ಲಿ 400 ಮೀಟರ್ ಫ್ರೀಸ್ಟೆöÊಲ್ ಹಾಗೂ 100 ಮೀಟರ್ ಬ್ಯಾಕ್sಸ್ಟೊçÃಕ್ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಉಚಿತ ತರಬೇತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಸಾಧನೆ:*
ಗೋಪಿಚಂದ್ ಅವರು 2016ರಲ್ಲಿ ಬಳ್ಳಾರಿಯ ಸರ್ಕಾರಿ ಈಜುಕೊಳದಲ್ಲಿ ತರಬೇತುದಾರ ಲಕ್ಕ ರಜಿನಿ ಅವರ ಮಾರ್ಗದರ್ಶನದಲ್ಲಿ ಉಚಿತವಾಗಿ ಈಜು ತರಬೇತಿಯನ್ನು ಆರಂಭಿಸಿದರು. 2017 ರಿಂದ ರಾಜ್ಯ, ರಾಷ್ಟç ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿರುವ ಇವರು, ಇದುವರೆಗೆ ಒಟ್ಟು 60 ಚಿನ್ನ ಹಾಗೂ 13 ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ
2020 ರಿಂದ ಬೆಂಗಳೂರಿನ ‘ಜೀ ಅಕಾಡೆಮಿ’ಯಲ್ಲಿ ಪ್ಯಾರಾ ಈಜುಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಶರತ್ ಗಾಯಕ್ವಾಡ್ ಅವರ ಮಾರ್ಗದರ್ಶನದಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ.
ಇತ್ತೀಚೆಗೆ 2026ರ ಫೆಬ್ರವರಿಯಲ್ಲಿ ಆಸ್ಟೆçÃಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆದ ‘ವಿಶ್ವ ಪ್ಯಾರಾ ಈಜು ಸರಣಿ’ ಸ್ಪರ್ಧೆಯ 4*100 ಮೀಟರ್ ಫ್ರೀಸ್ಟೆöÊ ರಿಲೇ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದರು.
ಅAತರಾಷ್ಟಿçÃಯ ಅನುಭವ:*
ಗೋಪಿಚಂದ್ ಲಿಂಗುಟ್ಲ ಅವರು ಈ ಹಿಂದೆಯೂ ಹಲವಾರು ಪ್ರಮುಖ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನುಭವ ಗಳಿಸಿದ್ದಾರೆ.
2021: ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ – ಬಹ್ರೇನ್
2022: ಓಪನ್ ಇಂಟರ್ನ್ಯಾಷ್ಯನಲ್ ಪ್ಯಾರಾ ಸ್ವಿಮ್ಮಿಂಗ್ – ಕೈರೋ, ಈಜಿಪ್ಟ್
2023: ಏಷ್ಯನ್ ಪ್ಯಾರಾ ಗೇಮ್ಸ್ – ಹ್ಯಾಂಗ್‌ಝೌ, ಚೀನಾ
2023: ಏಷ್ಯನ್ ಯೂತ್ ಪ್ಯಾರಾ ಸ್ಪೋರ್ಟ್ಸ್ ಕ್ಯಾಂಪ್ – ದಕ್ಷಿಣ ಕೊರಿಯಾ
2025: ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ಸೀರೀಸ್ – ಬಾರ್‌ಸಿಲೋನಾ, ಸ್ಪೇನ್
2026: ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ಸೀರೀಸ್ – ಗೋಲ್ಡ್ ಕೋಸ್ಟ್, ಆಸ್ಟೆçÃಲಿಯಾ.
ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸದಿಂದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವ ಗೋಪಿಚಂದ್ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ.
ಇವರ ಸಾಧನೆಗೆ ಜಿಲ್ಲಾಡಳಿತ ಸೇರಿದಂತೆ ಜಿಲ್ಲೆಯ ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಗೋಪಿಚಂದ್ ಅತ್ಯುತ್ತಮ ಪ್ರದರ್ಶನ ನೀಡಿ, ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಶುಭ ಹಾರೈಸಿದ್ದಾರೆ.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಲು ಅಣಕು ಯುವ ಸಂಸತ್ ಆಯೋಜನೆ : ಪ್ರಭುಲಿಂಗ ಕವಳಿಕಟ್ಟಿಮಾಜಿ ಸೈನಿಕರಿಗೆ ಸ್ಪರ್ಶ್ ಸಹಾಯತಾ ಶಿಬಿರ ಆಯೋಜನೆಅಧಿಕಾರಿಗಳು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿ : ಬೇಳೂರು ಗೋಪಾಲಕೃಷ್ಣಏಷ್ಯನ್ ಪ್ಯಾರಾ ಗೇಮ್ಸ್ಗೆ ಬಳ್ಳಾರಿಯ ಈಜುಪಟು ಗೋಪಿಚಂದ್ ಲಿಂಗುಟ್ಲ ಆಯ್ಕೆಬಳ್ಳಾರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ: ಜಾನುವಾರು ರಕ್ಷಣೆ ಮತ್ತು ಮೇವು ಪೂರೈಕೆಗೆ ಜಿಲ್ಲಾಡಳಿತದಿಂದ ಸಮರೋಪಾದಿ ಕ್ರಮ – ಸಾರ್ವಜನಿಕರಿಗೆ ಧೈರ್ಯ ತುಂಬಿದ ಜಿಲ್ಲಾಡಳಿತಬಳ್ಳಾರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ: ಜಾನುವಾರು ರಕ್ಷಣೆ ಮತ್ತು ಮೇವು ಪೂರೈಕೆಗೆ ಜಿಲ್ಲಾಡಳಿತದಿಂದ ಸಮರೋಪಾದಿ ಕ್ರಮ – ಸಾರ್ವಜನಿಕರಿಗೆ ಧೈರ್ಯ ತುಂಬಿದ ಜಿಲ್ಲಾಡಳಿತಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ ಉತ್ತಮ ಆರೋಗ್ಯಕ್ಕೆ ಹಾಲಿನ ಉತ್ಪನ್ನಗಳ ಸಮತೋಲಿತ ಸೇವನೆ ಅಗತ್ಯ: ಡಾ.ರಮೇಶ್ ಬಿ.ಕೆ.ಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ- ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆತುಮಟಿ ಗ್ರಾಮದಲ್ಲಿ ಐಸಿಎಆರ್‌ನಿಂದ ‘ಮಹಿಳಾ ರೈತರ ದಿನಾಚರಣೆ': ಸಾಧಕ ಮಹಿಳಾ ರೈತರಿಗೆ ಸನ್ಮಾನ ಕೃಷಿ ಉದ್ಯಮಗಳಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಡಾ. ರಮೇಶ ಎಂ.ಎನ್ಸಂಡೂರು: ಮಿನೇರಾ ಸ್ಟೀಲ್ ಪರಿಸರ ಸಾರ್ವಜನಿಕ ಆಲಿಕೆ ಸಭೆ ನವೆಂಬರ್ 19ಕ್ಕೆ ಮುಂದೂಡಿಕೆ