Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ಲ್ಯಾಟ್ ಪೂರ್ತಿಗೊಳಿಸಿ ಸೌಧತ್ತಿ ವಕೀಲರಿಗೆ ಕ್ರಯ ಪತ್ರ ಬರೆದುಕೊಡುವಂತೆ ಸ್ಕೈಟೌನ್ ಬಿಲ್ಡ್‍ರ್ಸ್‍ಗೆ ಗ್ರಾಹಕರ ಆಯೋಗದ ಆದೇಶ


ಧಾರವಾಡ ಏ.29: ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ವಕೀಲರಾದ ಭೀಮಪ್ಪ ಹೊಂಗೇಕರ್ ಎಂಬುವವರು ಎದುರುದಾರ ಸ್ಕೈಟೌನ್ ಬಿಲ್ಡ್ರಸ್ರವರು ಹುಬ್ಬಳ್ಳಿಯ ಸುತಗಟ್ಟಿಯಲ್ಲಿ ನಿರ್ಮಿಸುತ್ತಿದ್ದ ಅಪಾರ್ಟಮೆಂಟನಲ್ಲಿ ರೂ.17,25,000 ಪ್ಲ್ಯಾಟ ಖರೀದಿಸಿದ್ದರು. ಆ ಪೈಕಿ ದೂರುದಾರರು ಒಟ್ಟು ರೂ.11,81,250 ಹಣಎದುರುದಾರ ಬಿಲ್ಡರಗೆ ಮುಂಗಡವಾಗಿಕೊಟ್ಟಿದ್ದರು. ಬಾಕಿ ಹಣ ರೂ.5,43,750 ದೂರುದಾರರು ಪಾವತಿಸಬೇಕಾಗಿತ್ತು. ಕರಾರು ಪತ್ರವಾದ ದಿನಾಂಕದಿಂದ 24 ತಿಂಗಳೊಳಗಾಗಿ ಕಟ್ಟಡದ ಪೂರ್ತಿ ಕೆಲಸ ಮುಗಿಸಿ ಖರೀದಿ ಪತ್ರ ಹಾಕಿಕೊಟ್ಟು ಸ್ವಾಧೀನತೆಕೊಡಬೇಕು ಅಂತಾ ಕರಾರು ಇತ್ತು. 24 ತಿಂಗಳ ಒಳಗಾಗಿ ಕಟ್ಟಡದ ಕೆಲಸ ಮುಗಿಸಿ ಕೊಡದಿದ್ದಲ್ಲಿ ಎದುರುದಾರ, ಬಿಲ್ಡ್ರ ತಿಂಗಳಿಗೆ ರೂ.8,000 ರಂತೆ ದೂರುದಾರರಿಗೆ ಬಾಡಿಗೆ ಹಣ ಲೆಕ್ಕ ಹಾಕಿ ಕೊಡಬೇಕು ಅಂತಾ ಷರತ್ತು ಇತ್ತು. 2010 ನೇ ಇಸವಿಯಲ್ಲಿ ಒಪ್ಪಂದಪತ್ರವಾಗಿದ್ದರೂ ಈವರೆಗೆ ಎದುರುದಾರರು ಕಟ್ಟಡ ಪೂರ್ತಿ ಮಾಡಿರಲಿಲ್ಲ. ತನಗೆ ಎದುರುದಾರರು ನೋಂದಣಿ ಪತ್ರ ಬರೆದು ಕೊಟ್ಟಿಲ್ಲ ಹಾಗೂ ಕರಾರಿನಂತೆ ಬಾಡಿಗೆಯನ್ನು ಕೊಟ್ಟಿಲ್ಲ ಅಂತಾ ಹೇಳಿ ಎದುರುದಾರರ ಅಂತಹ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಅವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಹುಬ್ಬಳ್ಳಿಯ ಸ್ಕೈಟೌನ್ ಬಿಲ್ಡರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:27/11/2024 ರಂದು ದೂರನ್ನು ಸಲ್ಲಿಸಿದ್ದರು.



ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ದೂರುದಾರರಿಂದ ರೂ.11,81,250 ಗಳನ್ನು ಮುಂಗಡ ಹಣ ಪಡೆದುಕೊಂಡು 24 ತಿಂಗಳಲ್ಲಿ ಅಪಾರ್ಟಮೆಂಟ್ ಕಟ್ಟುವ ಕೆಲಸ ಮುಗಿಸಿ ಪ್ಲ್ಯಾಟನ್ನು ನೋಂದಣಿ ಮಾಡಿ ಸ್ವಾಧೀನತೆಕೊಡುವುದಾಗಿ ಎದುರುದಾರರು ಕರಾರು ಪತ್ರ ಬರೆದುಕೊಟ್ಟಿದ್ದಾರೆ. ತಪ್ಪಿದ್ದಲ್ಲಿ 24 ತಿಂಗಳ ನಂತರ ಪ್ರತಿ ತಿಂಗಳಿಗೆ ರೂ.8,000 ಯಂತೆ ಬಾಡಿಗೆ ಕೊಡುವುದಾಗಿ ಸಹ ಎದುರುದಾರ, ಬಿಲ್ಡರ್ ಒಪ್ಪಿಕೊಂಡಿದ್ದಾರೆ. 2010 ರಿಂದ ಈಗ ಸುಮಾರು 14 ವರ್ಷ ಕಳೆದರೂ ಎದುರುದಾರು, ಬಿಲ್ಡ್ರ್ ಅಪಾರ್ಟಮೆಂಟ್ ಕೆಲಸ ಮುಗಿಸಿಲ್ಲ. ದೂರುದಾರರಿಗೆ ಪ್ಲ್ಯಾಟ ಪೂರ್ತಿಗೊಳಿಸಿ ಖರೀದಿ ಹಾಕಿ ಕೊಟ್ಟಿಲ್ಲ. ಅಲ್ಲದೇ ತಿಂಗಳಿಗೆ ರೂ.8,000 ಯಂತೆ ಬಾಡಿಗೆಕೊಟ್ಟಿಲ್ಲದಿರುವ ಎದುರುದಾರ ಬಿಲ್ಡ್ರ್ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಅಲ್ಲದೇ ಅನುಚ್ಚಿತ ವ್ಯಾಪಾರ ಪದ್ಧತಿ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರು ಬಾಕಿ ಹಣ ರೂ.5,43,750 ಎದುರುದಾರರಿಗೆ ಕೊಡಬೇಕು ಅಥವಾ ಆಯೋಗದಲ್ಲಿಡಿಪಾಜಿಟ್ ಮಾಡಬೇಕು. ಆ ನಂತರ ಪ್ಲ್ಯಾಟನಕಾಮಗಾರಿಯನ್ನು ಮುಗಿಸಿ ದೂರುದಾರರಿಗೆಕ್ರಯ ಪತ್ರ ನೋಂದಣಿ ಮಾಡಿಕೊಡಲುಎದುರುದಾರರಾದ ಸ್ಕೈಟೌನ್ ಬಿಲ್ಡರ್ಸ್ಗೆಆಯೋಗ ಆದೇಶಿಸಿದೆ.

ತಪ್ಪಿದ್ದಲ್ಲಿದೂರುದಾರರು ಆ ಕಾಮಗಾರಿಯನ್ನುತಮ್ಮ ಸ್ವಂತಖರ್ಚಿನಲ್ಲಿ ಮಾಡಿಸಿ ಅದರ ಮೊತ್ತವನ್ನುಎದುರುದಾರರಿಂದ ಭರಿಸಿಕೊಳ್ಳಬೇಕು ಅಂತಾಆದೇಶದಲ್ಲಿ ತಿಳಿಸಿದೆ. ದಿ:27/11/2024 ರಿಂದಕಾಮಗಾರಿ ಪೂರ್ತಿ ಆಗುವವರೆಗೆ ಎದುರುದಾರರು ತಿಂಗಳಿಗೆ ರೂ.8,000 ರಂತೆ ಬಾಡಿಗೆ ಲೆಕ್ಕ ಹಾಕಿ ಕೊಡಬೇಕು ಅಂತಾ ಆದೇಶವಾಗಿದೆ. ಎದುರುದಾರ ಕ್ರಯ ಪತ್ರ ಮಾಡಿಕೊಡದಿದ್ದಲ್ಲಿ ದೂರುದಾರರು ಕೋರ್ಟ ಕಮೀಷನರ್ ಮುಖಾಂತರ ಪ್ಲ್ಯಾಟನಖರೀದಿ ಪತ್ರ ಮಾಡಿಸಿಕೊಳ್ಳಬೇಕು ಅಂತಾ ಆಯೋಗ ನಿರ್ದೇಶಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ