Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಕೇಂದ್ರ ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತರ ಭೇಟಿ ಅವಧಿ ಮೀರಿದ ಆಹಾರ: ಮುಟ್ಟುಗೋಲು ಹಾಕಲು ಸೂಚನೆ

ಬೆಳಗಾವಿ.ಅ.29 : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ(ಅ.29)
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿನ ಶೌಚಾಲಯದಲ್ಲಿ ಸ್ವಚ್ಛತೆ ಹಾಗೂ ದರ ಫಲಕಗಳನ್ನು ಹಾಕದೇ ಇರುವುದರ ಕುರಿತು‌ ಗಮನಿಸಿ ಶೌಚಾಲಯ ಬಳಕೆಯ ರಸೀದಿ ನೀಡದೆ ಇರುವುದನ್ನು ಗಮನಿಸಿದರು.
ಬಸ್ ನಿಲ್ದಾಣದಲ್ಲಿನ ಉಪಹಾರ ಗೃಹಗಳಿಗೆ ಭೇಟಿ ನೀಡಿ, ಉಪಹಾರ ಗೃಹಗಳಲ್ಲಿ‌ ಸ್ವಚ್ಛತೆ, ಸುರಕ್ಷತೆ ಇಲ್ಲದೆ ಇರುವುದನ್ನು‌ ಗಮನಿಸಿ ಉಪಹಾರ ಗೃಹದಲ್ಲಿ ಆಹಾರ ದರಗಳನ್ನು ಅಳವಡಿಸಲು ಸೂಚಿಸಿದರು. ಆಹಾರ ಸುರಕ್ಷತಾ ಅಧಿಕಾರಿಗಳು ಉಪಹಾರ ಗೃಹಗಳಿಗೆ ನಿಯಮಿತವಾಗಿ ಭೇಟಿ‌ ನೀಡದೆ ಇರುವುದನ್ನು ಗಮನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಬಸ್ ನಿಲ್ದಾಣದಲ್ಲಿನ ನಮ್ಮ ಕ್ಲಿನಿಕಗೆ ಭೇಟಿ ನೀಡಿ ಅಲ್ಲಿ ವಿತರಿಸುವ ಜೌಷಧಿಗಳನ್ನು ಪರಿಶೀಲಿಸಿ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಪಡೆದರು.
ವಿವಿಧ ಆಹಾರ ಮಳಿಗೆಗಳಿಗೆ ಭೇಟಿ ನೀಡಿ‌ ಮಳಿಗೆಗಳಲ್ಲಿ ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಪತ್ತೆ ಮಾಡಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಲು ತಿಳಿಸಿದರು. ತದನಂತರ ಔಷಧಿ ಮಳಿಗೆಗೆ ಭೇಟಿ‌ ನೀಡಿ ಪರವಾನಿಗೆ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಮಳಿಗೆಯ ಆಹಾರ ಸುರಕ್ಷತಾ ಪ್ರಮಾಣ ಪತ್ರದ ಅವಧಿ ಮುಗಿದಿರುವದು ಹಾಗೂ ಮಳಿಗೆಯಲ್ಲಿ ಕಾರ್ಯನಿರ್ವಹಿಸಿತ್ತಿರುವ ಉದ್ಯೋಗಿಗಳಿಗೆ ಕಾರ್ಮಿಕ ಇಲಾಖೆ ಅನ್ವಯ ಕೂಡಲೇ ಕನಿಷ್ಠ ಕೂಲಿ ದೊರಕಿಸಿ ಕೊಡಲು ಸೂಚಿಸಿದ ಅವರು ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗೆ ತೊಂದರೆ ನೀಡದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಲ್ದಾಣದಲ್ಲಿಯ ವಸತಿ ಗೃಹಕ್ಕೆ ಭೇಟಿ ನೀಡಿದ ಅವರು ದಾಖಲೆಗಳನ್ನು ಪರಿಶೀಲಿಸಿ ಬಿಲ್ಲಗಳಲ್ಲಿ ತೆರಿಗೆ ಮೊತ್ತ‌ ನಮೂದಿಸದೆ ಇರುವದನ್ನು ಗಮನಿಸಿದ ಅವರು ವಸತಿ ಗೃಹದಲ್ಲಿ ಸಿ.ಸಿ. ಕ್ಯಾಮೆರಾ, ಸುರಕ್ಷತೆ ಇಲ್ಲದಿರುವದರ ಕುರಿತು ಆಕ್ಷೇಪ ವ್ಯಕ್ತ ಪಡಿಸಿ ಪೋಲಿಸ ಇಲಾಖೆ ವತಿಯಿಂದ ಈ ಕುರಿತು ನಿಯಮಿತವಾಗಿ ಪರಿಶೀಲಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಉಪನಿಬಂಧಕರಾದ ಅರವಿಂದ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ.ಎಂ, ಸಾರಿಗೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೋಕಾಯುಕ್ತ: ಬಾಕಿ ಪ್ರಕರಣಗಳ ವಿಚಾರಣೆ-ವಿಲೇವಾರಿ -- ಭ್ರಷ್ಟಾಚಾರ ನಿರ್ಮೂಲನೆ ಎಲ್ಲರ‌ ಹೊಣೆ: ಉಪ ಲೋಕಾಯುಕ್ತ ಬಿ.ವೀರಪ್ಪಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮ ---------------ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಕುರಿತ ಪೋಸ್ಟರ್ ಬಿಡುಗಡೆಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಸಮುದಾಯದವರಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ: ಸಂತ ಜಾನರ ಪ್ರೌಢಶಾಲೆಯಲ್ಲಿ ‘ಸುರಕ್ಷಿತ ಬಚ್‌ಪನ್ ಅಭಿಯಾನ’ದಡಿ ಪೋಕ್ಸೋ ಜಾಗೃತಿ ಕಾರ್ಯಕ್ರಮ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ನ್ಯಾ.ದೇವರಡ್ಡಿಸಹಕಾರ ರತ್ನ' ಪ್ರಶಸ್ತಿಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಪ್ರಸ್ತಾವನೆ ಆಹ್ವಾನಕೇಂದ್ರ ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತರ ಭೇಟಿ ಅವಧಿ ಮೀರಿದ ಆಹಾರ: ಮುಟ್ಟುಗೋಲು ಹಾಕಲು ಸೂಚನೆತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿಬಳ್ಳಾರಿಯಲ್ಲಿ ನವೆಂಬರ್ 2 ರಂದು ‘ವಿಕ್ಷಿತ್ ಭಾರತ್ ಯುವ ಸಂಸತ್ತು' ಆಯೋಜನೆಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ