Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಬಳ್ಳಾರಿಯಲ್ಲಿ ನವೆಂಬರ್ 2 ರಂದು ‘ವಿಕ್ಷಿತ್ ಭಾರತ್ ಯುವ ಸಂಸತ್ತು' ಆಯೋಜನೆ

ಬಳ್ಳಾರಿ,ಅ.29
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ‘ಮೇರಾ ಯುವ ಭಾರತ್' ಸಂಸ್ಥೆಯು ಬಳ್ಳಾರಿಯ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಸಹಯೋಗದೊಂದಿಗೆ ನವೆಂಬರ್ 2 ರಂದು ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ ‘ವಿಕ್ಷಿತ್ ಭಾರತ್ ಯುವ ಸಂಸತ್ತು' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಾರಿಯ ಯುವ ಸಂಸತ್ತಿನ ಮುಖ್ಯ ವಿಷಯವಾಗಿ ‘ಒಂದು ರಾಷ್ಟç, ಒಂದು ಚುನಾವಣೆ' ಎಂಬ ರಾಷ್ಟಿçÃಯ ಮಹತ್ವದ ವಿಷಯವನ್ನು ಆಯ್ಕೆ ಮಾಡಲಾಗಿದೆ. ಭಾಗವಹಿಸುವ ಯುವಕರು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ 3 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳು, ವಾದಗಳು ಹಾಗೂ ಸಲಹೆಗಳನ್ನು ಮಂಡಿಸಬಹುದಾಗಿದೆ.
ಯುವಜನರಲ್ಲಿ ಸಾರ್ವಜನಿಕ ಭಾಷಣ ಕೌಶಲ್ಯ, ನಾಯಕತ್ವದ ಗುಣಗಳು, ಪ್ರಜಾಸತ್ತಾತ್ಮಕ ಅರಿವು ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ ಈ ವೇದಿಕೆಯನ್ನು ಕಲ್ಪಿಸಲಾಗಿದೆ.
ಆಸಕ್ತ ಯುವಕ-ಯುವತಿಯರು ಅಧಿಕೃತ ‘ಮೇರಾ ಯುವ ಭಾರತ್' ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡುವ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಬಳ್ಳಾರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಯುವ ಸಮುದಾಯವು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮೇರಾ ಯುವ ಭಾರತ ಬಳ್ಳಾರಿ ಜಿಲ್ಲಾ ಯುವ ಅಧಿಕಾರಿ ಧನಂಜಯ್ ಶಾಂತಾರಾಮ್ ಜಗ್ತಾಪ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೋಕಾಯುಕ್ತ: ಬಾಕಿ ಪ್ರಕರಣಗಳ ವಿಚಾರಣೆ-ವಿಲೇವಾರಿ -- ಭ್ರಷ್ಟಾಚಾರ ನಿರ್ಮೂಲನೆ ಎಲ್ಲರ‌ ಹೊಣೆ: ಉಪ ಲೋಕಾಯುಕ್ತ ಬಿ.ವೀರಪ್ಪಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮ ---------------ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಕುರಿತ ಪೋಸ್ಟರ್ ಬಿಡುಗಡೆಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಸಮುದಾಯದವರಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ: ಸಂತ ಜಾನರ ಪ್ರೌಢಶಾಲೆಯಲ್ಲಿ ‘ಸುರಕ್ಷಿತ ಬಚ್‌ಪನ್ ಅಭಿಯಾನ’ದಡಿ ಪೋಕ್ಸೋ ಜಾಗೃತಿ ಕಾರ್ಯಕ್ರಮ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ನ್ಯಾ.ದೇವರಡ್ಡಿಸಹಕಾರ ರತ್ನ' ಪ್ರಶಸ್ತಿಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಪ್ರಸ್ತಾವನೆ ಆಹ್ವಾನಕೇಂದ್ರ ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತರ ಭೇಟಿ ಅವಧಿ ಮೀರಿದ ಆಹಾರ: ಮುಟ್ಟುಗೋಲು ಹಾಕಲು ಸೂಚನೆತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿಬಳ್ಳಾರಿಯಲ್ಲಿ ನವೆಂಬರ್ 2 ರಂದು ‘ವಿಕ್ಷಿತ್ ಭಾರತ್ ಯುವ ಸಂಸತ್ತು' ಆಯೋಜನೆಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ